ಅನೇಕ ತಿಂಗಳುಗಳ ವ್ಯಾವಹಾರಿಕ ಘರ್ಷಣೆ, ಆರೋಪ ಪ್ರತ್ಯಾರೋಪಗಳ ನಂತರ ಕೊನೆಗೂ ಟ್ವಿಟ್ಟರ್ ಕಂಪನಿ ವಿಶ್ವದ ಅತ್ಯಂತ ಶ್ರೀಮಂತ ಉದ್ದಿಮೆದಾರ ಎಲಾನ್ ಮಾಸ್ಕ ಕೈವಶವಾಗಿದೆ. ಇದು ವಿಶ್ವದಾದ್ಯಂತ ಉದ್ಯಮ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಟ್ವಿಟ್ಟರ್ ಅನ್ನು ವಿಶ್ವದ ಅತ್ಯಂತ ದೊಡ್ಡ ಮುಕ್ತ ಅಭಿವ್ಯಕ್ತಿಯ ವೇದಿಕೆಯನ್ನಾಗಿ ಮಾಡುವುದಾಗಿ ಮಸ್ಕ್ ಈಗಾಗಲೇ ಅನೇಕ ಬಾರಿ ಹೇಳಿದ್ದಾರೆ. ಟ್ವಿಟ್ಟರ್ ಸ್ವಾಧೀನ ಪಡಿಸಿಕೊಳ್ಳಲು ಮಸ್ಕ್ ಬರುತ್ತಿದ್ದಂತೆಯೇ ಟ್ವಿಟ್ಟರ್ ಕಂಪನಿಯ ಸಿಇಒ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಅಗರ್ವಾಲ್ ಅವರೊಂದಿಗೆ ಅನೇಕ ಹಿರಿಯ ಅಧಿಕಾರಿಗಳನ್ನೂ ಹೊರಹಾಕಲಾಗಿದೆ ಎಂದು ಹೇಳಲಾಗಿದೆ. ಅಗರ್ವಾಲ್ ಗೆ ಸುಮಾರು ನಾನೂರು ಕೋಟಿ ರೂಪಾಯಿಯಷ್ಟು ಪರಿಹಾರ ಹಣವನ್ನು ನೀಡಲಾಗುತ್ತಿದೆ ಎಂದೂ ವರದಿಯಾಗಿದೆ. ಇನ್ನು ಮುಂದೆ ಟ್ವಿಟ್ಟರ್ ಯಾವ ರೂಪ ಪಡೆಯಲಿದೆ ಎಂದು ಕಾದು ನೋಡಬೇಕಾಗಿದೆ.
Previous Article34 ಲಕ್ಷ ಮೌಲ್ಯದ iPhoneಗಳು ಜಪ್ತಿ
Next Article ಬ್ಯಾಂಕ್ ಗ್ರಾಹಕರ Data ಅಪಾಯದಲ್ಲಿ