ಮೈಸೂರು,ಮಾ.11-
ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡದ ಕ್ರಮವನ್ನು ಪ್ರಶ್ನಿಸಿದ ಪೋಷಕರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಮೈಸೂರಿನ
ರಾಯಲ್ ಕಾನ್‌ಕಾರ್ಡ್ ಇಂಟರ್‌ನ್ಯಾಷನಲ್ ಶಾಲೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ, ಪೋಷಕರೊಂದಿಗೆ ಜಟಾಪಟಿ ಸೇರಿದಂತೆ ಹಲವು ವಿವಾದಕ್ಕೆ ಸಂಬಂಧಿಸಿ ಶಾಲಾ ಆಡಳಿತ ಮಂಡಳಿ ವಿರುದ್ದ ಜೆಜೆ ಆ್ಯಕ್ಟ್ (ಬಾಲಾಪರಾಧಿ ಕಾಯಿದೆ)ಅಡಿ ಪ್ರಕರಣ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಿನ್ಸಿಪಾಲ್ ಖುಷಿ, ಮ್ಯಾನೇಜರ್ ಹರೀಶ್, ಶಾಲಾ ನಿರ್ದೇಶಕ ರಾಕೇಶ್ ರಾಜೇ ಅರಸ್ ವಿರುದ್ದ ಪ್ರಕರಣ ದಾಖಲಾಗಿದೆ.
ಶಾಲೆಯಲ್ಲಿ ಕಳೆದ ಮಾರ್ಚ್ 6ರಂದು ನಡೆದ ಗಲಾಟೆಗೆ ಸಂಬಂಧಿಸಿ ಚೆಲುವೇಗೌಡ, ಸಿದ್ದೇಗೌಡ ಹಾಗೂ ಮೂವರು ವಿದ್ಯಾರ್ಥಿಗಳು ನೀಡಿದ್ದ ದೂರು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಬೋಗಾದಿ ಎರಡನೇ ಹಂತದಲ್ಲಿರುವ ರಾಯಲ್ ಕಾನ್ ಕಾರ್ಡ್ ಅಂತರಾಷ್ಟ್ರೀಯ ಶಾಲೆಯಲ್ಲಿ ಮಾರ್ಚ್ 6ರಂದು ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ನಡುವೆ ಗಲಾಟೆಯಾಗಿತ್ತು. ಶಾಲೆಯ ಆಡಳಿತ ಮಂಡಳಿ ಶಾಲೆಯ 16 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಈ ವಿಚಾರ ತಿಳಿದು ಪೋಷಕರು ಶಾಲೆಯ ಆಡಳಿತ ಮಂಡಳಿ ಜೊತೆ ಜಗಳವಾಡಿದ್ದರು. ಈ ವೇಳೆ ಶಾಲೆಯ ಮ್ಯಾನೇಜರ್ ಹರೀಶ್ ಅವರಿಗೆ ಹಿಗ್ಗಾಮುಗ್ಗ ಥಳಿಸಲಾಗಿತ್ತು. ಮತ್ತೊಂದು ಕಡೆ ಮಕ್ಕಳಿಗೆ ಪರೀಕ್ಷೆ ಕೊಡದೆ ಇರುವುದನ್ನು ಪೋಷಕ ಸಿದ್ದೇಗೌಡ ಪ್ರಶ್ನಿಸಿದ್ದರು. ಇದಕ್ಕೆ ಕೆಂಡಾಮಂಡಲರಾದ ಶಾಲೆಯ ಪ್ರಾಂಶುಪಾಲರಾದ ಖುಷಿ ಸಿದ್ದೇಗೌಡ ಕೊರಳಪಟ್ಟಿ ಹಿಡಿದು ಎಳೆದಾಡಿದ್ದರು.
ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಸರಸ್ವತಿ ಪುರಂ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದರು. ಶಾಲಾ ಆಡಳಿತ ಮಂಡಳಿ ಹಾಗೂ 16 ವಿದ್ಯಾರ್ಥಿಗಳ ಪೋಷಕರ ನಡುವೆ ಶಾಲಾ ಶುಲ್ಕದ ವಿಚಾರವಾಗಿ ಗೊಂದಲ ಉಂಟಾಗಿದೆ. ಶಾಲಾ ಆಡಳಿಯ ಪ್ರಕಾರ 1 ಲಕ್ಷದ 10 ಸಾವಿರ ಕಟ್ಟಬೇಕು. ಆದರೆ ಪೋಷಕರ ಪ್ರಕಾರ 82 ಸಾವಿರ ಶುಲ್ಕ ಕಟ್ಟಬೇಕು. ಇದೇ ವಿಚಾರ ಹೈ ಕೋರ್ಟ್ ಮೆಟ್ಟಿಲೇರಿದೆ.
Previous ArticleOyo ಸಂಸ್ಥಾಪಕನ ತಂದೆ ಅನುಮಾನಾಸ್ಪದ ಸಾವು #oyo #startup
Next Article ಆರೋಗ್ಯ ಕಾರ್ಯಕರ್ತರ ಧರಣಿ
4 ಪ್ರತಿಕ್ರಿಯೆಗಳು
сервис ремонта стиральных машин https://centr-remonta-stiralnyh-mashin.ru/ .
Интеграция мультимедийных систем Интеграция мультимедийных систем .
Секретные промокоды – успейте использовать! Секретные промокоды – успейте использовать! .
Как правильно купить диплом колледжа и ВУЗа в России, подводные камни