ವಿಶ್ವದ ಎಲ್ಲ ಕ್ಯಾಥೋಲಿಕರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಇಂದು ಮೂರು ಗಂಟೆಗಳ ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಈಗಾಗಲೇ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲಿರುವ ಪೋಪರು ಈಗ ಇನ್ನೊಂದು ಅರೋಗ್ಯ ಸಮಸ್ಯೆಯನ್ನು ಎದುರಿಸಿರುವುದು ಕ್ಯಾಥೋಲಿಕ್ ಕ್ರಿಶ್ಚಿಯನ್ನರಲ್ಲಿ ಆತಂಕ ಮೂಡಿಸಿದೆ. 86 ವರ್ಷ ವಯಸ್ಸಿನ ಪೋಪ್ ಫ್ಯಾನ್ಸಿಸ್ ಅವರು ಆಗಾಗ ಜ್ವರ ಮುಂತಾದ ಆರೋಗ್ಯ ಸಮಸೆಗಳನ್ನು ಎದುರಿಸುತ್ತಿರುವುದು ಅವರ ಅನುಯಾಯಿಗಳಲ್ಲಿ ಅವರ ಆರೋಗ್ಯದ ಬಗ್ಗೆ ಚಿಂತೆ ಮೂಡಿಸಿದೆ. 2021ರಲ್ಲಿ ಪೋಪ್ ಫ್ರಾನ್ಸಿಸ್ ಅವರ ಕರುಳಿನ ಒಂದು ಭಾಗವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಯಲಾಗಿತ್ತು. ಇದೆಲ್ಲ ಆಗಿದ್ದರೂ ಪೋಪ್ ಅವರು ಜೋಕ್ ಮಾಡುತ್ತಾ ‘ನಾನು ಇನ್ನೂ ಬದುಕಿದ್ದೇನೆ’ ಎಂದು ಹೇಳಿದರೂ ಕ್ಯಾಥೋಲಿಕರು ಅದನ್ನು ತಮಾಷೆಯಾಗಿ ತೆಗೆದುಕೊಂಡಿಲ್ಲ. ‘ಆರೋಗ್ಯ ಸಮಸ್ಯೆ ಉಲ್ಬಣವಾದರೆ ನಾನು ಯಾವತ್ತೂ ಪದತ್ಯಾಗ ಮಾಡಲು ಸಿದ್ದ’ ಎಂದು ಫ್ರಾನ್ಸಿಸ್ ಅವರು ಈಗಾಗಲೇ ಅನೇಕ ಬಾರಿ ಹೇಳಿ ಕೊಂಡಿದ್ದಾರೆ.
ಪೋಪ್ ಫ್ರಾನ್ಸಿಸ್ ಗೆ ಮತ್ತೊಂದು ಆರೋಗ್ಯ ಸಮಸ್ಯೆ
Previous Articleಕೆನಡಾದ ಕಾಳ್ಗಿಚ್ಚಿನಿಂದ ಅಮೆರಿಕಾದಲ್ಲೆಲ್ಲ ಹೊಗೆಯೋ ಹೊಗೆ
Next Article ಸಂಗಾತಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿದ