ಬೆಂಗಳೂರು,ಜೂ.13- ತಾಯಿಯೇ ದೇವರು,ತಾಯಿಗಿಂತ ದೇವರಿಲ್ಲ ಎನ್ನುವುದು ನಾಣ್ನುಡಿ.ಅದರಂತೆ ಬಹುತೇಕ ಮಕ್ಕಳು ತಮ್ಮ ಹೆತ್ತ ತಾಯಿಯನ್ನು ದೇವರ ಸಮಾನವಾಗಿ ನೋಡುತ್ತಾರೆ,ಆರಾಧಿಸುತ್ತಾರೆ.ಅದರಲ್ಲೂ ಹೆಣ್ಣು ಮಕ್ಕಳಿಗಂತೂ ತಾಯಿಯೇ ಸರ್ವಸ್ವ.
ಆದರೆ.ಇಲ್ಲೊಬ್ಬ ಪಾಪಿ ಮಗಳು ಸಮಾಜದ ಇಂತಹ ನಡವಳಿಕೆಯನ್ನು ಸುಳ್ಳು ಮಾಡುವಂತೆ ವರ್ತಿಸಿದ್ದಾಳೆ. ರಾಕ್ಷಸೀ ಸ್ವರೂಪದ ಇವಳ ನಡವಳಿಕೆ ನಾಗರೀಕ ಸಮಾಜ ಬೆಚ್ಚುವಂತೆ ಮಾಡಿದ
ಈ ಪಾಪಿ, ರಾಕ್ಷಸಿ ಮಗಳು ತನ್ನ ಹೆತ್ತ ತಾಯಿಯನ್ನು ಕೊಲೆಗೈದು ಮೃತ ದೇಹವನ್ನು ಸೂಟ್ ಕೇಸ್ನಲ್ಲಿ ತುಂಬಿಕೊಂಡು ನೇರವಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.
ಈ ಘಟನೆ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ
ಬೀವಾ ಪಾಲ್ (70) ಮಗಳಿಂದಲೇ ಕೊಲೆಯಾದ ದುರ್ದೈವಿ. ಸೆನಾಲಿ ಸೇನ್ (39) ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಪಾಪಿ ಮಗಳಾಗಿದ್ದು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ಅವರು ತಿಳಿಸಿದ್ದಾರೆ.
ಕೊಲ್ಕತ್ತಾ ಮೂಲದ ಸೆನಾಲಿ, ಮಾಸ್ಟರ್ ಆಫ್ ಫಿಸಿಯೋ ಥೆರಪಿ ಓದಿಕೊಂಡಿದ್ದಾಳೆ.ಈಕೆಗೆ ಮದುವೆಯಾಗಿದ್ದು ಓರ್ವ ಮಗನ ತಾಯಿಯಾಗಿದ್ದಾರೆ.
ಸುಮಾರು ಆರು ವರ್ಷದಿಂದ ಮೈಕೋ ಲೇಔಟ್ ಬಿಳೇಕಳ್ಳಿಯ ಎನ್ಎಸ್ಆರ್ ಗ್ರೀನ್ ಅಪಾರ್ಟ್ಮೆಂಟ್ ನಲ್ಲಿ ಸೆನಾಲಿ ವಾಸವಿದ್ದಳು. ತಂದೆಯ ಮರಣದ ನಂತರ ತಾಯಿಯ ಜವಾಬ್ದಾರಿಯೂ ಸೆನಾಲಿಯ ಮೇಲಿತ್ತು.
ಆದರೆ, ಒಂದೇ ಮನೆಯಲ್ಲಿದ್ದ ಸೆನಾಲಿಯ ತಾಯಿ ಹಾಗೂ ಅತ್ತೆ ನಿತ್ಯ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದರು.ಇದರಿಂದ ಬೇಸತ್ತಿದ್ದ ಸೆನಾಲಿ ಸ್ವತಃ ತಾನೇ ತಾಯಿಗೆ ನಿದ್ರೆ ಮಾತ್ರೆಗಳನ್ನು ನುಂಗಿಸಿದ್ದಾಳೆ. ರಾತ್ರಿ 11 ಗಂಟೆ ಸುಮಾರಿಗೆ ತಾಯಿ ಹೊಟ್ಟೆ ನೋವು ಅಂದಾಗ, ಆಸ್ಪತ್ರೆಗೆ ಸೇರಿಸಬೇಕಾದ ಮಗಳು ವೇಲ್ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆಗೈದಿದ್ದಾಳೆ.
ಬಳಿಕ ಸೂಟ್ ಕೇಸ್ನಲ್ಲಿ ತಾಯಿಯ ಶವ ಇರಿಸಿ, ಅದರ ಜೊತೆಗೆ ತಂದೆಯ ಫೋಟೋ ಇರಿಸಿ ಕ್ಯಾಬ್ ಬುಕ್ ಮಾಡಿಕೊಂಡು ನೇರವಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆರೋಪಿಯ ಕೃತ್ಯ ಕಂಡು ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.
Previous ArticleStart upಗಳ ಸಾಮೂಹಿಕ ಅವನತಿಯ ಆರಂಭ?
Next Article ವಿದ್ಯುತ್ ದರ ಹೆಚ್ಚಳ ಯಾರು, ಹೇಗೆ ಮಾಡಿದ್ದು ಗೊತ್ತಾ!