ಆಂಧ್ರಪ್ರದೇಶದ ದೇವಸ್ಥಾನ ಒಂದರಲ್ಲಿ ಭಕ್ತನೊಬ್ಬ ದೇವಸ್ಥಾನಕ್ಕೆ ದೇಣಿಗೆಯಾಗಿ 100 ಕೋಟಿ ರೂಪಾಯಿಯ ಚೆಕ್ ನೀಡಿದ್ದಾನೆ. ಆದರೆ ಅದನ್ನು ನಗದೀಕರಿಸಲು ದೇವಸ್ಥಾನ ಸಮಿತಿಯವರು ಮುಂದಾದಾಗ ಅವರು ಆಘಾತಕ್ಕೊಳಗಾಗಿದ್ದರೆ.
ದೇವಸ್ಥಾನವೊಂದಕ್ಕೆ ಭಕ್ತನೊಬ್ಬ ₹100 ಕೋಟಿ (100 Crores) ಮೊತ್ತದ ಚೆಕ್ ನೀಡಿದ ಘಟನೆ ವೈರಲ್ ಆಗಿದೆ. ದೇಣಿಗೆ ನೀಡಿದ ವ್ಯಕ್ತಿ ಚೆಕ್ ನಲ್ಲಿ ನೂರು ಕೋಟಿ ರೂಪಾಯಿ ಎಂದು ಬರೆದಿದ್ದರೂ ಆತನ ಖಾತೆಯಲ್ಲಿ ₹17 ಮಾತ್ರ ಇರುವುದು ದೇವಸ್ಥಾನದ ಸಮಿತಿಗೆ ತಿಳಿದುಬಂದಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಿಂಹಾಚಲಂನ ಶ್ರೀ ವರಾಹ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಪ್ರತಿ ದಿನ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ಅವರಲ್ಲಿ ಹಲವರು ದೇಣಿಗೆ ನೀಡುತ್ತಾರೆ. ಇವರ ಪೈಕಿ ವರಂಗ ಲಕ್ಷ್ಮೀನರಸಿಂಹ ಎಂಬ ವ್ಯಕ್ತಿ ದೇವಸ್ಥಾನದ ಹೆಸರಿಗೆ ₹100 ಕೋಟಿ ಚೆಕ್ ಬರೆದಿದ್ದಾನೆ.
ಚೆಕ್‌ನಲ್ಲಿ ಆ ವ್ಯಕ್ತಿ ಮೊದಲು ₹10 ದೇಣಿಗೆ ಎಂದು ಬರೆದಿದ್ದ. ಆನಂತರ ಅದಕ್ಕೆ ಅನೇಕ ಸೊನ್ನೆಗಳನ್ನು ಸೇರಿಸಿ ಅದನ್ನು ವಿಪರೀತ ದೊಡ್ಡ ಮೊತ್ತ ಮಾಡಿದ ಎನ್ನಲಾಗಿದೆ. ಮೊದಲು ದೇವಸ್ಥಾನದ ಆಡಳಿತವು ಮೊತ್ತವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ, ಏಕೆಂದರೆ ಯಾವುದೇ ಭಕ್ತರು ಇದುವರೆಗೆ ಇಷ್ಟು ದೊಡ್ಡ ದೇಣಿಗೆಯನ್ನು ನೀಡಿಲ್ಲ. ಆನಂತರ ಆಡಳಿತ ಸಮಿತಿ ಮತ್ತೊಂದು ಬಾರಿ ಬೆಚ್ಚಿ ಬಿದ್ದಿದ್ದು ಆ ಚೆಕ್ ಅನ್ನು ನಗದೀಕರಣ ಮಾಡಲು ಹೋದಾಗ. ಅದನ್ನು ಬ್ಯಾಂಕ್ ನಲ್ಲಿ ಹಾಕಲು ಹೋದಾಗ ಚೆಕ್ ಬರೆದ ವ್ಯಕ್ತಿಯ ಖಾತೆಯಲ್ಲಿ ಕೇವಲ ₹ 17 ಬ್ಯಾಲೆನ್ಸ್ ಇದೆ ಎಂದು ಅವರಿಗೆ ತಿಳಿಸಲಾಯಿತು. ಮೋಸ ಮತ್ತು ದುರಾಸೆಯ ಕಥೆಯಾಗಿ ಈ ಘಟನೆ ಹೊರಬಂದಿದೆ.
LATEST KANNADA NEWS | KANNADA NEWS