ಚೆನ್ನೈ: ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡು ರೈಲಿನಲ್ಲಿದ್ದ, 10 ಮಂದಿ ಪ್ರಯಾಣಿಕರು ಸುಟ್ಟು ಕರಕಲಾಗಿರುವ ಘಟನೆ ಮದುರೈ ರೈಲು ನಿಲ್ದಾಣದಲ್ಲಿ (Madurai Station) ನಡೆದಿದೆ ಲಖನೌ–ರಾಮೇಶ್ವರಂ ನಡುವಿನ ಭಾರತ್ ಗೌರವ್ ವಿಶೇಷ ರೈಲು ಉತ್ತರ ಪ್ರದೇಶದ ಲಖನೌ ನಿಂದ ಹೊರಟಿತ್ತು.ದೇಶದ ಹಲವು ತೀರ್ಥ ಕ್ಷೇತ್ರಗಳ ಪ್ರವಾಸದ ದೃಷ್ಟಿಯಿಂದ ರೂಪಿಸಲಾದ ಈ ವಿಶೇಷ ರೈಲಿನಲ್ಲಿ ಉತ್ತರ ಪ್ರದೇಶದ 145 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಮದುರೈನಲ್ಲಿ (Madurai Station) ನಿಲ್ಲಿಸಿದ್ದ ಈ ರೈಲು ತಿರುಪತಿ-ರಾಮೇಶ್ವರಂ-ಕನ್ಯಾಕುಮಾರಿ ಮುಂತಾದ ಸ್ಥಳಗಳಿಗೆ ಪ್ರಯಾಣಿಸಬೇಕಿತ್ತು.ಇನ್ನೇನು ಬೆಳಿಗ್ಗೆ ರೈಲು ಸಂಚಾರ ಆರಂಭಿಸಲಿದೆ ಎನ್ನುವಾಗಲೇ
ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಮುಂಜಾನೆ 5.15ಕ್ಕೆ ಬೆಂಕಿ ಕಾಣಿಸಿಕೊಂಡಿದೆ. 55 ಪ್ರಯಾಣಿಕರು ಇದ್ದ ಆ ಬೋಗಿಯನ್ನು ನಾಗರಕೋಯಿಲ್ ಬಳಿ ರೈಲಿಗೆ ಅಳವಡಿಸಲಾಗಿತ್ತು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಪಡೆಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು ಆದರೆ,ದುರ್ಘಟನೆಯಲ್ಲಿ ಹತ್ತು ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀರ್ಥಯಾತ್ರೆಗೆ ಬಂದಿರುವ ತಂಡ ತಮ್ಮೊಂದಿಗೆ ಕೆಲ ಪಾತ್ರೆ,ಅಡುಗೆ ಸಾಮಾನು ಮತ್ತು ಉರುವಲಿಗೆ ಸೌದೆಯನ್ನು ತಂದಿದೆ.ಜೊತೆಗೆ ಅಡುಗೆ ಅನಿಲ ಸಿಲಿಂಡರ್ ಕೂಡ ತಂದಿದ್ದರು. ಈ ರೈಲು ನಿಲ್ದಾಣದಲ್ಲಿ ನಿಂತಿದ್ದಾಗ ಸೌದೆ ಬಳಸಿ ಮುಂಜಾನೆ ಚಹಾ ತಯಾರಿಸತೊಡಗಿದ್ದಾರೆ.ಈ ವೇಳೆ ಸೌದೆಯ ಕಿಡಿ ಅಡುಗೆ ಅನಿಲ ಸಿಲಿಂಡರ್ ಗೆ ತಗುಲಿ ಸ್ಫೋಟಗೊಂಡಿದೆ.ಸ್ಪೋಟದ ಕೆಲ ಹೊತ್ತಿನಲ್ಲೇ ಇಡೀ ಬೋಗಿ ಬೆಂಕಿಗೆ ಅಹುತಿಯಾಗಿದ್ದು,ಈ ದುರ್ಘಟನೆ ಸಂಭವಿಸಿದೆ.
LATEST KANNADA NEWS | VARTHACHAKRA
ನಿರುದ್ಯೋಗಿ ಪತಿಗೆ ಬುದ್ಧಿ ಕಲಿಸಲು ಹೋಗಿ ತಗಲ್ಕೊಂಡಾ ಪತ್ನಿ | Bengaluru