ಬೆಂಗಳೂರು, ಫೆ.1- ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯೊಬ್ಬ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ನಿಂದ ಪತ್ತೆಯಾಗಿದ್ದಾರೆ. ಆದರೆ ಈ ವೇಳೆ ಆತ ಲಿಂಗ ಬದಲಾವಣೆ ಮಾಡಿಕೊಂಡು ತೃತೀಯ ಲಿಂಗಿಯಾಗಿದ್ದರು.ಈ ಘಟನೆ ರಾಮನಗರದಲ್ಲಿ ನಡೆದಿದೆ.
ಕಳೆದ 2017ರಲ್ಲಿ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದ ಪತಿ ಲಿಂಗ ಪರಿವರ್ತನೆ ಮಾಡಿಕೊಂಡಿರುವುದನ್ನು ಕಂಡು ಪತ್ನಿ ಆಘಾತಕ್ಕೀಡಾಗಿದ್ದು ಕುಟುಂಬಸ್ಥರಿಗೆ ದಿಕ್ಕೆ ತೋಚದಂತಾಗಿದೆ.
ಚಿಕನ್ ಅಂಡಗಿಯಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣರಾವ್ 2015 ರಲ್ಲಿ ಮದುವೆಯಾಗಿ ಪತ್ನಿಯೊಂದಿಗೆ ರಾಮನಗರಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಮದುವೆ ಆದ ಎರಡೇ ವರ್ಷಕ್ಕೆ 2017ರಲ್ಲಿ ಲಕ್ಷ್ಮಣ್ ರಾವ್ ಸಾಲದ ವಿಚಾರಕ್ಕೆ ಜಿಗುಪ್ಸೆಗೊಂಡು ಮನೆಯಿಂದ ನಾಪತ್ತೆಯಾಗಿದ್ದರು.
ಆತನ ಬಗ್ಗೆ ಯಾವುದೇ ಸುಳಿವು ಸಿಗದಿದ್ದರಿಂದ ಆತಂಕಗೊಂಡ ಪತ್ನಿ ಐಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರೂ ಇಲ್ಲಿಯವರೆಗೆ ಆತನ ಪತ್ತೆ ಇರಲಿಲ್ಲ.ನಾಪತ್ತೆಯಾದ ಈತನಿಗೆ ಹುಡುಕಾಟ ನಡೆಸಿದ ಪೊಲೀಸರು ಸುಸ್ತಾಗಿದ್ದರು.ಈ ನಡುವೆ ರಿಯಾಲಿಟೋ ಷೋ ‘ಬಿಗ್ ಬಾಸ್’ ಈತನ ಸುಳಿವು ಕೊಟ್ಟಿದೆ.
ಇತ್ತೀಚೆಗೆ ಬಿಗ್ ಬಾಸ್ ಶೋ ಸ್ಪರ್ಧಿ ನೀತು ವನಜಾಕ್ಷಿ ಮೈಸೂರಿಗೆ ಆಗಮಿಸಿದ್ದಾಗ ತೃತೀಯ ಲಿಂಗಿಗಳು ಅವರನ್ನು ಸ್ವಾಗತಿಸಿ ಸನ್ಮಾನಿಸಿದ್ದ ವೇಳೆ ತೃತೀಯ ಲಿಂಗಿ ರಶ್ಮಿಕಾ ಮಾಡಿದ್ದ ರೀಲ್ಸ್‌ನಲ್ಲಿ ಲಕ್ಷ್ಮಣ್ ರಾವ್ ಅವರನ್ನು ಹೋಲುವಂತಹ ವ್ಯಕ್ತಿ ಕಾಣಿಸಿಕೊಂಡಿದ್ದರು.ಈ ವಿಡಿಯೋ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿತ್ತು.
ವೈರಲ್ ಆಗಿದ್ದ ರೀಲ್ಸ್‌ನಲ್ಲಿ ಲಕ್ಷ್ಮಣ್ ಮುಖದ ಸ್ಪಷ್ಟ ಹೋಲಿಕೆ ಇತ್ತು. ಹೀಗಾಗಿ ಕುಟುಂಬಸ್ಥರಿಗೂ ಲಕ್ಷ್ಮಣ್ ಇರಬಹುದು ಎಂಬ ಅನುಮಾನ ಮೂಡಿತ್ತು. ತೃತೀಯ ಲಿಂಗಿಗಳ ಸಾಮಾಜಿಕ ಹೋರಾಟಗಾರ್ತಿ ರಶ್ಮಿಕಾ ಹೆಸರಿನ ರೀಲ್ಸ್ ಪ್ರೊಫೈಲ್ ಪರಿಶೀಲಿಸಿದಾಗ ಐಜೂರು ಪೊಲೀಸರು ಲಕ್ಷ್ಮಣ್ ರಾವ್ ವಿಚಾರ ಪ್ರಸ್ತಾಪಿಸಿದ್ದಾರೆ. ಹಿನ್ನೆಲೆ ಗೊತ್ತಿಲ್ಲವಾದರೂ ವಿಳಾಸ ಕೊಡುವುದಾಗಿ ರಶ್ಮಿಕಾ ಹೇಳಿದ್ದಾರೆ. ವಿಳಾಸ ಅನುಸರಿಸಿ ತೆರಳಿದ್ದ ಪೊಲೀಸರಿಗೆ ಶಾಕ್ ಎದುರಾಗಿದ್ದು, ಪೊಲೀಸರ ಬಳಿ ಇದ್ದ ಫೋಟೋಗೂ ಎದುರಿಗಿದ್ದ ಹೆಣ್ಣಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಮುಖ ಮಾತ್ರ ಪೂರ್ಣ ಹೋಲಿಕೆಯಾಗುತ್ತಿತ್ತು.
ಪೊಲೀಸರು ನೀವು ಲಕ್ಷ್ಮಣ್ ರಾವ್ ಅಲ್ಲವೇ ಎಂದು ಕೇಳಿದಾಗ, ನಾನು ಲಕ್ಷ್ಮಣ್ ರಾವ್ ಅಲ್ಲ, ನಾನು ವಿಜಯಲಕ್ಷ್ಮೀ ಎಂದು ಉತ್ತರಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ತಾನು ವಿಜಯಲಕ್ಷ್ಮೀ ಎಂದು ಲಕ್ಷ್ಮಣ್ ಪಟ್ಟು ಹಿಡಿದಿದ್ದು, ಪೊಲೀಸರೂ ಒಂದು ಹಂತದಲ್ಲಿ ಬೇರೆಯೇ ಅಭಿಪ್ರಾಯಕ್ಕೆ ಬಂದಿದ್ದಾರೆ. ಲಕ್ಷ್ಮಣ್ ನಿಮ್ಮ ಹಾಗೆಯೇ ಕಾಣಿಸಿದ ಕಾರಣ ವಿಚಾರಿಸಲು ಬಂದೆವು.
ನೀವು ವಾಪಾಸ್ ಹೋಗಿ ಎಂದು ಪೊಲೀಸರು ಹೇಳಿದ್ದಾರೆ. ವಾಪಾಸ್ ಹೋಗೊ ವೇಳೆ, ಜೋರಾಗಿ ಲಕ್ಷ್ಮಣ್ ಎಂದು ಇನ್ಸ್ ಪೆಕ್ಟರ್ ಕೂಗಿದ್ದಾರೆ. ಕೂಡಲೇ ಹಾಂ… ಎಂಬ ಪ್ರತ್ಯುತ್ತರ ವಿಜಯಲಕ್ಷ್ಮೀ ಬಾಯಿಯಿಂದ ಬಂದಿದೆ.!
ಇದಾದ ನಂತರ ಅವರ ಬಗ್ಗೆ ಪೊಲೀಸರಿಗೆ ಎಲ್ಲವೂ ಖಾತ್ರಿಯಾಗಿದೆ.ಬಳಿಕ ಅವರನ್ನು ಐಜೂರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಬಳಿಕ ಕುಟುಂಬಸ್ಥರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಠಾಣೆಗೆ ಆಗಮಿಸಿದಾಗ ಗಂಡ ಹೆಣ್ಣಾಗಿ ಪರಿವರ್ತನೆ ಆಗಿದ್ದನ್ನು ಕಂಡು ಪತ್ನಿ ಮೂರ್ಛೆ ಹೋಗಿದ್ದಾರೆ. ಇನ್ನು ತಂದೆಯ ಅವತಾರ ಕಂಡ ಪುಟ್ಟ ಮಕ್ಕಳು ಏನು ನಡೆಯುತ್ತಿದೆ ಎನ್ನುವುದನ್ನೂ ತಿಳಿಯದಂತಾಗಿದ್ದಾರೆ. ಅದೇ ರೀತಿ ಅಳಿಯನ ಅವತಾರ ಕಂಡು ಮಾವ ಪೇಚಾಡಿ ಮಗಳ ಬಾಳು ಹಾಳಾಯಿತು ಎಂದು ಕಣ್ಣೀರಿಟ್ಟಿದ್ದಾರೆ.
ನಿನಗೆ ಹೆಂಡತಿ ಮಕ್ಕಳು ಬೇಡವೇ” ಎಂದು ಪ್ರಶ್ನಿಸಿದಾಗ, ‘ನನಗೆ ನನ್ನ ತೃತೀಯ ಲಿಂಗಿಗಳ ಕುಟುಂಬವೇ ಇಷ್ಟ. ಹೆಂಡತಿ ಮಕ್ಕಳು ಬೇಡ, ನಿಮ್ಮ ತಂಟೆಗೆ ಬರುವುದಿಲ್ಲ. ನನ್ನನ್ನು ಬಿಟ್ಟು ಬಿಡಿ’ ಎಂದು ಬೇಡಿಕೊಂಡಿದ್ದಾನೆ. ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ನಾಪತ್ತೆ ಪ್ರಕರಣ ಇತ್ಯರ್ಥ ಗೊಳಿಸಿದ್ದಾರೆ.
19 ಪ್ರತಿಕ್ರಿಯೆಗಳು
Good blog you be undergoing here.. It’s severely to espy great worth script like yours these days. I truly recognize individuals like you! Take vigilance!!
I couldn’t weather commenting. Well written!
order inderal 20mg sale – propranolol without prescription buy methotrexate
buy generic clavulanate – https://atbioinfo.com/ ampicillin cost
purchase esomeprazole for sale – https://anexamate.com/ order generic nexium 40mg
order warfarin 5mg for sale – https://coumamide.com/ cozaar over the counter
buy mobic pills – relieve pain meloxicam 7.5mg cheap
order deltasone 5mg generic – https://apreplson.com/ purchase prednisone generic
buy ed pills fda – https://fastedtotake.com/ where to buy ed pills online
fluconazole over the counter – this buy forcan no prescription
cenforce 100mg us – cenforce rs order cenforce online
buy cialis overnight shipping – https://ciltadgn.com/ cialis stopped working
no prescription cialis – https://strongtadafl.com/# what is cialis taken for
buy zantac medication – click order zantac generic
I am in fact delighted to coup d’oeil at this blog posts which consists of tons of useful facts, thanks for providing such data. https://gnolvade.com/es/fildena/
Thanks recompense sharing. It’s outstrip quality. amoxicillin where to buy
I am in point of fact thrilled to glitter at this blog posts which consists of tons of useful facts, thanks towards providing such data. https://ursxdol.com/doxycycline-antibiotic/
I’ll certainly bring back to be familiar with more. https://prohnrg.com/product/rosuvastatin-for-sale/
I am actually thrilled to coup d’oeil at this blog posts which consists of tons of worthwhile facts, thanks towards providing such data. https://aranitidine.com/fr/acheter-cenforce/