ಬೆಂಗಳೂರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಮ್ಮ ವಿರುದ್ಧ ಯಾವುದೇ ಮಾನಹಾನಿ ಆಗುವಂತಹ ಯಾವುದೇ ಸುದ್ದಿ ಅಥವಾ ವರದಿಗಳನ್ನು ಪ್ರಕಟಿಸಿದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ.
ಈ ವಿಷಯ ಇದೀಗ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಸ್ವಪಕ್ಷೀಯರೇ ಪಿತೂರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬದಲಾದ ಲೆಕ್ಕಾಚಾರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯ ಬಿಜೆಪಿಯಲ್ಲಿ ಉನ್ನತ ಹುದ್ದೆಗೆ ತರುವ ಲೆಕ್ಕಾಚಾರ ನಡೆದಿತ್ತು ಅದಕ್ಕೆ ಕಡಿವಾಣ ಹಾಕಲು ಈ ಪಿತೂರಿ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ.
ಮತ್ತೊಂದೆಡೆ ಬೊಮ್ಮಾಯಿ ಅವರು ಈ ರೀತಿಯ ತಡೆಯಾಜ್ಞೆ ತರಲು ಕಾರಣವೇನು, ಅಂತಹ ಯಾವ ಸುದ್ದಿ ಇವರ ವಿರುದ್ಧ ಪ್ರಕಟವಾಗುತ್ತಿತ್ತು ಬೊಮ್ಮಾಯಿಯವರು ಇಷ್ಟೊಂದು ಹೆದರಿದ್ದು ಯಾವ ಸುದ್ದಿಗಾಗಿ ಎಂಬ ಚರ್ಚೆಗಳು ನಡೆಯುತ್ತಿವೆ.
ಇದರ ನಡುವೆ ಕಾಂಗ್ರೆಸ್ ನೀಡಿರುವ ಪ್ರತಿಕ್ರಿಯೆ ಗಮನ ಸೆಳೆದಿದೆ
ಬಸವರಾಜ ಬೊಮ್ಮಾಯಿ ಅವರು ಕೋರ್ಟ್ ನಿಂದ ತಡೆಯಾಜ್ಞೆ ತರಲು ಕೆ.ಸುಧಾಕರ್ ಕಾರಣವೇ ಅಥವಾ ಸ್ಯಾಂಟ್ರೋ ರವಿ ಕಾರಣವೇ? ಯಾವ ಸುದ್ದಿಗೆ ಬೊಮ್ಮಾಯಿಯವರು ಈ ಪರಿ ಬೆದರುತ್ತಿರುವುದು? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಅಂದಹಾಗೆ ಬೊಮ್ಮಾಯಿ ಅವರ ವಿರುದ್ಧ
ವಕೀಲ ಕೆ.ಎನ್.ಜಗದೀಶ್, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಕಟಿಸುವುದಾಗಲೀ ಅಥವಾ ಬಿತ್ತರಿಸುವುದಾಗಲೀ ಮಾಡಬಾರದು’ ಎಂದು ನಗರದ ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಹೊರಡಿಸಿದೆ.