ಬೆಳಗಾವಿ,ಜೂ.17- ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಮೂವರು ನಕಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳನ್ನು ಸೈಬರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕೋಡಿಯ ಸದಲಗಾ ಪಟ್ಟಣದ ಮುರುಗೆಪ್ಪ ಪೂಜಾರ(56), ಬಸ್ತವಾಡ ಗ್ರಾಮದ ರಾಜೇಶ್ ಚೌಗುಲೆ ಹಾಗು ಹಾಸನದ ಸಕಲೇಶಪುರ ಮೂಲದ ರಜನೀಕಾಂತ್ ಬಂಧಿತ ಆರೋಪಿಗಳಾಗಿದ್ದಾರೆ.
ಆರ್ಟಿಒ, ಸಬ್‍ರಿಜಿಸ್ಟಾರ್, ಕಂದಾಯ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಎಂದು ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.
ಸರ್ಕಾರಿ ಇಲಾಖೆಯ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡಿದ್ದ ಖದೀಮರು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಮ್ಮ ಖಾತೆಗ ಹಣ ವರ್ಗಾವಣೆ ಮಾಡದಿದ್ದರೆ ಕಚೇರಿಯ ಕಡತಗಳನ್ನು ಪರಿಶೀಲನೆ ಮಾಡುವ ಬೆದರಿಕೆ ಹಾಕುತ್ತಿದ್ದರು
ಈ ಕುರಿತು ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಕಲಿ ಎಸಿಬಿ ಖದೀಮರ ಜಾಲವನ್ನು ಬೇಧಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಪಿಐ ಗಡ್ಡೇಕರ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
Previous ArticleKGF ಸಾಮ್ರಾಜ್ಯದ ವಸ್ತುಗಳು ಮಾರಾಟಕ್ಕಿದೆ!
Next Article ಚಾರ್ಲಿ ನೋಡಿ ರಾಕುಲ್ ಪ್ರೀತ್ ಕಣ್ಣೀರು!