ಆ ಊರಿನ ಶಾಲೆಯಲ್ಲಿ ಓದಿ ಕಲಿತವರಲ್ಲಿ ಬಹುತೇಕರು ಉತ್ತಮ ಭವಿಷ್ಯ ಕಂಡುಕೊಂಡಿದ್ದಾರೆ. ಉತ್ತಮ ಭವಿಷ್ಯ ರೂಪಿಸಿದ ಶಾಲೆ ದಯನೀಯ ಸ್ಥಿತಿ ತಲುಪಿದೆ. ಇದ್ರಿಂದ ಇಡೀ ಗ್ರಾಮಸ್ಥರೇ ಶಾಲೆಯ ಉಳಿವಿಗೆ ಮುಂದಾಗಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಒಳಗೆಹಳ್ಳಿಯ ಗ್ರಾಮಸ್ಥರು. ಇವ್ರ ಈ ವಿಭಿನ್ನ ಅಹೋರಾತ್ರಿ ಹೋರಾಟಕ್ಕೆ ಗ್ರಾಮದಲ್ಲಿನ ಶಾಲೆಯ ಅವ್ಯವಸ್ಥೆ ಕಾರಣ. ಇರೋ ಸರ್ಕಾರಿ ಶಾಲೆ ಬೀಳುವ ಹಂತದಲ್ಲಿದೆ. ಈಗಾಗಲೇ ಶಾಲೆ ಆರಂಭವಾಗಿದೆ.
ವಿಶ್ವ ಮಾನವ ಹಕ್ಕುಗಳ ಸೇವಾಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯುತ್ತಿದೆ. ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಹೋರಾಟದ ಮುಖಂಡತ್ವ ವಹಿಸಿರುವ ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ ಆರೋಗ್ಯದಲ್ಲಿ ಏರುಪೇರಾಗಿದೆ. ಇವರ ಹೋರಾಟಕ್ಕೆ ಸ್ಥಳೀಯ ಗ್ರಾಮಸ್ಥರು ಜೊತೆಯಾಗಿದ್ದಾರೆ.
ಎರಡನೇ ದಿನ ಉಪವಾಸ ಮುಂದುವರಿಸಿದ ಶಾಲಾ ಮಕ್ಕಳು ಹಾಗು ಗ್ರಾಮಸ್ಥರು ಶಾಲೆ ದುರಸ್ತಿಯಾಗುವವರೆಗೂ ಹೋರಾಟ ನಿಲ್ಲಿಸೊಲ್ಲ ಅಂತಾ ಪಟ್ಟು ಹಿಡಿದ್ದಾರೆ. ಹರಕಲು ಮುರಕಲು ಕಟ್ಟಡದಲ್ಲೆ ಪಾಠ ಕೇಳುತ್ತಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಯಾವಾಗ ಶಾಲಾಕಟ್ಟಡ ಬಿದ್ದು ಹೋಗುತ್ತೊ ಎಂಬ ಆತಂಕ ಎಲ್ಲರಲ್ಲಿ ಮನೆಮಾಡಿದೆ. ದಿನೇ ದಿನೇ ಹೋರಾಟಗಾರರ ಸಂಖ್ಯೆಯೂ ಹೆಚ್ಚುತ್ತಿದೆ, ಇನ್ನಾದರೂ ಶಿಕ್ಷಣ ಇಲಾಖೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ.