ಬೆಂಗಳೂರು,ಜೂ.27- ಕುಡಿದ ಅಮಲಿನಲ್ಲಿ ಜಗಳ ತೆಗೆದು 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಸ್ನೇಹಿತನನ್ನು ಕೊಲೆಗೈದು ಪರಾರಿಯಾಗಿದ್ದ ಯುವಕನೊಬ್ಬನನ್ನು ಬಾಗಲೂರು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಬಾಗಲೂರಿನ ಬಿ.ಕೆ.ಹಳ್ಳಿಯ ನಾರಾಯಣಸ್ವಾಮಿ (35) ಕೊಲೆಯಾದವರು. ಕೃತ್ಯ ನಡೆಸಿದ್ದ ಆತನ ಸ್ನೇಹಿತ ಚಂದ್ರನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಚಂದ್ರ ಮತ್ತು ನಾರಾಯಣಸ್ವಾಮಿ ಇಬ್ಬರು ಸ್ನೇಹಿತರಾಗಿದ್ದು, ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಾರಾಯಣಸ್ವಾಮಿ ಕುಡಿದು ಗಲಾಟೆ ಮಾಡಿ, 6 ತಿಂಗಳ ಹಿಂದೆ ಪತ್ನಿಯನ್ನು ಮನೆಯಿಂದ ಓಡಿಸಿದ್ದ.
ಕಳೆದ ಮೇ.26ರಂದು ಚಂದ್ರ ಜೊತೆ ಸೇರಿ ಹಗಲು ಹೊತ್ತಲ್ಲೇ ತಮ್ಮ ಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ತಳ್ಳಾಟ ನಡೆದಿದೆ. ನಂತರ ಚಂದ್ರ ಮನೆಯಲ್ಲಿದ್ದ ಚಾಕು ತಂದು ಹತ್ತಾರು 10ಕ್ಕೂ ಹೆಚ್ಚು ಬಾರಿ ಚುಚ್ಚಿ ಸ್ನೇಹಿತ ನಾರಾಯಣಸ್ವಾಮಿಯನ್ನು ಕೊಲೆ ಮಾಡಿ ಮೃತದೇಹ ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದ.
ಪಕ್ಕದ ಮನೆಯ ಮಗು ಆಟವಾಡುತ್ತಾ ಬಂದು ಮೃತದೇಹ ನೋಡಿದ್ದು ಮನೆಯವರಿಗೆ ವಿಚಾರ ಗೊತ್ತಾಗಿದೆ. ಸ್ನೇಹಿತರಾಗಿದ್ದ ಇಬ್ಬರ ಮಧ್ಯೆ ನಾಲ್ಕು ವರ್ಷದ ಹಿಂದೆ ಜಗಳವಾಗಿತ್ತು. ಘಟನೆ ಸಂಬಂಧ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ನಂತರ ಮತ್ತೆ ಇಬ್ಬರು ಒಂದಾಗಿದ್ದರು. ಈಗ ಒಟ್ಟಿಗೆ ಕುಡಿಯುತ್ತಾ ಮತ್ತೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿತ್ತು.
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022

