ಮಕ್ಕಳಿಗೆ ಆಟ ಆಡಲು ಅಮೇಜಾನ್ ವೆಬ್‌ಸೈಟ್ ನಿಂದ ಡ್ರೋಣ್ ಆಟಿಕೆ ಬುಕ್ ಮಾಡಿದ ಮೈಸೂರಿನ ಗ್ರಾಹಕನಿಗೆ ಅಮೇಜಾನ್ ಅಚ್ಚರಿಯ ಪಾರ್ಸೆಲ್ ಕಳುಹಿಸಿದೆ.
ನಗರದ ಶಾರದಾದೇವಿ ನಗರ ನಿವಾಸಿ ಮಂಜು ಅವರು ಕಳೆದ ಮೂರು ದಿನಗಳ ಹಿಂದೆ ಅಮೇಜಾನ್ ನಿಂದ ತಮ್ಮ ಅಕ್ಕನ ಮಕ್ಕಳಿಗೆ ಆಟವಾಡಲೆಂದು ಡ್ರೋಣ್ ಆಟಿಕೆ ಬುಕ್ ಮಾಡಿದ್ದರು.
ಸೋಮವಾರ ಅಮೇಜಾನ್ ತಲುಪಿಸಿದ ಪಾರ್ಸೆಲ್ ತೆಗೆದು ನೋಡಿದರೆ ಖಾಲಿ ಪ್ಲಾಸ್ಟಿಕ್ ಬಾಕ್ಸ್ ಬಿಟ್ಟು ಬೇರೆನು ಇರಲಿಲ್ಲ.
ಮಂಜು ಅವರ ಕೈ ಸೇರಿದ ಪಾರ್ಸೆಲ್ ಬಾಕ್ಸ್ ಲಘುವಾಗಿದ್ದರಿಂದ ಸಂಶಯ ಪಟ್ಟು, ಬಾಕ್ಸ್ ತೆರೆಯುವ ಮುನ್ನ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
ಈ ಕುರಿತು ಅಮೇಜಾನ್ ಕಂಪನಿಯೊಂದಿಗೆ ಸಂಪರ್ಕಿಸಿದಾಗ ತಮ್ಮ ತಪ್ಪು ಅರಿವಾಗಿ ಬುಕ್ ಮಾಡಿದ ಸಾಧನವನ್ನು ಕಳುಹಿಸುವ ಭರವಸೆ ನೀಡಿದೆ.

