ಬೆಂಗಳೂರು, ಅ.10: ಬೆಂಗಳೂರು ಕೇಂದ್ರ ಕಾರಾಗೃಹ ಬೆಳಗಾವಿ ಹಿಂಡಲಗಾ ಜೈಲು ಸ್ಪೋಟಿಸುವುದಾಗಿ (Jail Blast ) ಬೆದರಿಕೆ ಹಾಕಿದ್ದ ಆರೋಪಿಯ ಸಳಿವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಹುಕ್ಕೇರಿ ನಿವಾಸಿ ಕಿರಣ ಮೋಷಿ (48) ಬೆದರಿಕೆ ಹಾಕಿದ ಆರೋಪಿಯಾಗಿದ್ದಾನೆ.
ಆರೋಪಿ ಕಿರಣ ಮೋಷಿ 2022 ರಲ್ಲಿ ಬೇರೆಯವರ ಅಕೌಂಟ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಮ್ ಆರೋಪದಡಿ ಬಂಧನವಾಗಿ 10 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿದ್ದನು.
ಇದೀಗ ಆರೋಪಿ ಕಿರಣ ಮೋಷಿ ಜಸ್ಟ್ ಡಯಲ್ನಲ್ಲಿ ಸರ್ಕಾರಿ ಅಧಿಕಾರಿಗಳ ನಂಬರ್ ಪಡೆದು, ಪತ್ನಿ ಹೆಸರಿನಲ್ಲಿರುವ ಸೀಮ್ನಿಂದ ಕರೆ ಮಾಡಿದ್ದನು.
ಬೆಳಗಾವಿ ಹಿಂಡಲಗಾ ಜೈಲು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸ್ಫೋಟಿಸುತ್ತೇವೆ. ಅಲ್ಲದೆ ಬಂದಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು ಆರೋಪಿ ಕಿರಣ್ ಮೋಷಿ ಬೆಂಗಳೂರಲ್ಲಿ ತಲೆಮರೆಸಿಕೊಂಡಿದ್ದಾನೆ.
ಬಂದಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷಗೆ ಬೆದರಿಕೆ ಕರೆ ಆರೋಪಿ ಬಂದಿಖಾನೆ ಇಲಾಖೆ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷ ಅವರ ಸರ್ಕಾರಿ ನಂಬರ್‌ಗೆ ಕರೆ ಮಾಡಿ, “ನನಗೆ ಹಿಂಡಲಗಾ ಜೈಲಿನ ಹೆಡ್ ವಾರ್ಡನ್ಗಳಾದ ಜಗದೀಶ್ ಗಸ್ತಿ, ಎಸ್.ಎಂ.ಗೋಟೆ ಪರಿಚಯವಿದ್ದಾರೆ. ಅಲ್ಲದೆ ಭೂಗತ ಪಾತಕಿ ಬನ್ನಂಜೆ ರಾಜಾ ಕೂಡ ನನಗೆ ಗೊತ್ತು. ನಾನು ಜೈಲಿನಲ್ಲಿದ್ದಾಗ ಆತನಿಗೆ ನಾನು ಸಹಾಯ ಮಾಡಿದ್ದೇನೆ. ಹಿಂಡಲಗಾ ಜೈಲಿನಲ್ಲಿ ಗಲಭೆ ಸೃಷ್ಟಿಸಿ ನಿಮ್ಮ ಮೇಲೆ ಹಲ್ಲೆ ಮಾಡಲಾಗುವುದು. ತಾವು ವಾಸಿಸುವ ವಸತಿಗೃಹವನ್ನೂ ಸ್ಫೋಟಿಸುವುದಾಗಿ” ಬೆದರಿಕೆ ಕರೆ ಹಾಕಿದ್ದನು.