ಬೆಂಗಳೂರು, ಅ.10 -ನಗರ ಪೊಲೀಸ್ ಕಮೀಷನರ್ ಕಚೇರಿ ಸನಿಹದಲ್ಲಿದ್ದ ಕನ್ನಿಂಗ್ ಹ್ಯಾಮ್ ರಸ್ತೆಯ ಬಸ್ ಶೆಲ್ಟರ್ ನ್ನು ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ (Cunningham Road) ಕಾಫಿ ಡೇ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಸೈನ್ ಪೋಸ್ಟ್ ಇಂಡಿಯಾ ಏಜೆನ್ಸಿಯವರು ನಿರ್ಮಿಸಿದ್ದ ಬಸ್ ಶೆಲ್ಟರ್‌ನ್ನು ಕಳವು ಮಾಡಲಾಗಿದೆ ಎಂದು ಕಂಪನಿ ವತಿಯಿಂದ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಈ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡ ಹೈಗ್ರೌಂಡ್ಸ್ ಪೊಲೀಸರು ಶಿವಾಜಿನಗರ ವಲಯದ ಬಿಬಿಎಂಪಿ ಅಭಿಯಂತರರನ್ನು ಸಂಪರ್ಕಿಸಿ ವಿಚಾರಣೆ ನಡೆಸಿದಾಗ ಬಸ್ ಶೆಲ್ಟರ್ ತೆರವುಗೊಳಿಸಿರುವುದು ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಸೈನ್ ಪೋಸ್ಟ್ ಇಂಡಿಯಾ ಏಜೆನ್ಸಿ ನಿರ್ಮಿಸಿದ ಬಸ್ ಶೆಲ್ಟರ್ ಕಾಮಗಾರಿಯು ಅಸಮರ್ಪಕವಾಗಿ, ಯಾವುದೇ ರೀತಿಯ ಮುಂಜಾಗರೂಕತಾ ಕ್ರಮ ವಹಿಸದೆ ನಿರ್ಮಾಣ ಮಾಡಿರುವುದು ಕಂಡು ಬಂದಿತ್ತು.
ಸಾರ್ವಜನಿಕ ಬಸ್ ನಿಲ್ದಾಣವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರುವುದರಿಂದ ನಿರ್ಮಾಣ ಮಾಡುತ್ತಿರುವ ಬಸ್ ಶೆಟ್ಟರ್ ಕುಸಿದು ಬಿದ್ದಲ್ಲಿ ಹಲವಾರು ಪ್ರಯಾಣಿಕರಿಗೆ ಪ್ರಾಣ ಹಾನಿಯಾಗುವ ಸಂಭವವಿರುವುದನ್ನು ಗಂಭೀರವಾಗಿ ಗಮನಿಸಿ ಬಸ್ ಶೆಲ್ಟರ್, ನಿರ್ಮಾಣ ಮಾಡುತ್ತಿರುವ ಸೈನ್ ಪೋಸ್ಟ್ ಇಂಡಿಯಾ ಏಜೆನ್ಸಿಯ ಪ್ರತಿನಿಧಿ ರವಿರೆಡ್ಡಿ ಅವರನ್ನು ಸಂಪರ್ಕಿಸಿ, ಬಸ್ ಶೆಲ್ಟರ್ ನಿರ್ಮಿಸಲು ಪಾಲಿಕೆಯಿಂದ ಪಡೆದಿರುವ ಕಾರ್ಯಾದೇಶ ಪ್ರತಿಯನ್ನು ಈ ಕಛೇರಿಗೆ ಸಲ್ಲಿ ಸುವಂತೆ ತಿಳಿಸಿ, ಹಾಗೂ ಕಾಮಗಾರಿಯನ್ನು ಸಾರ್ವಜನಿಕರಿ ಗೆ ತೊಂದರೆಯಾಗದಂತೆ ಮುಂಜಾಗೃತ ಕ್ರಮ ಕೈಗೊಂಡು ನಿರ್ಮಿಸಲು ವಸಂತನಗರ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೂಚಿಸಿದ್ದರು.
ಆದರೆ ಸಂಬಂಧಪಟ್ಟ ಗುತ್ತಿಗೆದಾರರು ಯಾವುದೇ ಮುಂಜಾಗೃ ತ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಕಾಮಗಾರಿಯನ್ನು ಅಪೂ ರ್ಣಗೊಳಿಸಿ ಸಂಬಂಧಪಟ್ಟ ಕಾರ್ಯಾದೇಶ ಪತ್ರದ ದಾಖಲೆಗಳನ್ನು ಸಹ ಈ ಕಛೇರಿಗೆ ಸಲ್ಲಿಸದೇ ಇರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಕಳೆದ ಆ.25 ರಂದು ಅಸಮರ್ಪಕವಾಗಿ ನಿರ್ಮಾಣ ಮಾಡಿದ್ದ ಹಾಗೂ ಅಪೂರ್ಣಗೊಂಡಿರುವ ಬಸ್ ಶೆಲ್ ಶೆಲ್ಟರ್ ನ್ನು ತೆರವುಗೊಳಿಸಿ, ತೆರವುಗೊಳಿಸಿ ಅದರ ಸಾಮಗ್ರಿಗಳನ್ನು ವಾರ್ಡ್ ಕಛೇರಿಯ ಉಗ್ರಾಣದಲ್ಲಿ ಇರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದರು ಬಿಬಿಎಂಪಿ ಅಧಿಕಾರಿಗಳ ಪತ್ರದ ಅನುಸಾರ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಅಳವಡಿಸಿದ್ದ ಬಸ್ ಶೆಲ್ಟರ್‌ನ ಕಾಮ ಗಾರಿಯು ಅಸಮರ್ಪಕವಾಗಿದೆ ಎಂದು ಮುಂಜಾಗರೂಕತಾ ಕ್ರಮ ವಹಿಸಿ, ಅದನ್ನು ಶಿವಾಜಿನಗರ ವಾರ್ಡ್ ಬಿಬಿಎಂಪಿ ಅಧಿಕಾ ರಿಗಳು ತೆರವುಗೊಳಿಸಿರುವುದು ತನಿಖೆಯಿಂದ ಕಂಡು ಬಂದಿದೆ ಎಂದು ಕಮೀಷನರ್ ತಿಳಿಸಿದರು.