ಹೈದರಾಬಾದ್: ವೈವಿಧ್ಯ ಹಾಗೂ ವೈಶಿಷ್ಟ್ಯಮಯ ಪಾತ್ರಗಳ ನಿರ್ವಹಣೆ ಜೊತೆಗೆ ಮನೋಜ್ಞ ಅಭಿನಯದ ಮೂಲಕ ತೆಲುಗು ಸಿನಿಮಾ ಪ್ರೇಮಿಗಳನ್ನು ಅಷ್ಟೇ ಅಲ್ಲ ದಕ್ಷಿಣ ಭಾರತದ ಎಲ್ಲಾ ಸಿನಿಮ ಪ್ರಿಯರ ಮಾನ ಗೆದ್ದಿರುವ ಕನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ಇದೀಗ ವೇಶ್ಯೆಯಾಗಿದ್ದಾರೆ ಶೀಲವತಿ ಅನ್ನೋ ಟೈಟಲ್ ನಲ್ಲಿ ಸಿದ್ಧವಾಗುತ್ತಿರುವ ಪ್ಯಾನ್ ಇಂಡಿಯಾ ತೆಲುಗು ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ (Anushka Shetty) ವೇಶ್ಯೆ ಮಾಡ್ತಾ ಇದ್ದಾರೆ..ಇದೊಂದು ಮಹಿಳಾ ಪ್ರಧಾನ ಸಿನಿಮಾ ಎಂದು ಹೇಳಲಾಗಿದೆ ಅನುಷ್ಕಾ ಶೆಟ್ಟಿ ಅವರು ವೇಶ್ಯೆ ಪಾತ್ರನಿರ್ವಹಿಸುತ್ತಿರುವುದು ಇದೇ ಮೊದಲೇನಲ್ಲ.
ಈ ಹಿಂದೆ ಕ್ರಿಶ್ ನಿರ್ದೇಶನದ ವೇದಂ ಸಿನಿಮಾದಲ್ಲಿ ವೇಶ್ಯೆ ಸರೋಜಾ ಪಾತ್ರದಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ರು. ಸಿನಿಮಾದ ಯಾವುದೇ ಪಾತ್ರವಾಗಲಿ ಅದಕ್ಕೆ ಜೀವ ತುಂಬಿ, ಅದರೊಳಗೆ ಲೀನವಾಗಿ ಲೀಲಾ ಜಾಲವಾಗಿ ಅಭಿನಯಿಸುವುದು ಅನುಷ್ಕಾ ಶೆಟ್ಟಿ ಅವರಿಗೆ ಸಿದ್ಧಿಸಿರುವ ವರ ಹೀಗಾಗಿಯೇ ಅವರ ಹಲವಾರು ಸಿನಿಮಾಗಳು ತೆಲುಗು ಸಿನಿಮಾ ಪ್ರೇಮಿಗಳ ಬಾಯಲ್ಲಿ ಮನೆಮಾತು ತೆಲುಗು ಸಿನಿಮಾದಲ್ಲಿ ಹೀರೋಗಳಿಗಿರುವಷ್ಟೇ ಬೇಡಿಕೆಯನ್ನು ಹೊಂದಿರುವ ಆನೂಷ್ಕಾ ಶೆಟ್ಟಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿನಿಮಾಗಳಲ್ಲಿ ಅತಿ ಹೆಚ್ಚು ನಟಿಸಿದ್ದಾರೆ ಶೀಲವತಿ ಸಿನಿಮಾ ಕೂಡ ಪ್ರಭಾಸ್ ಹೋಂ ಬ್ಯಾನರ್ ಯುವಿ ಕ್ರಿಯೇಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣವಾಗುತ್ತಿದೆ.
ಒಡಿಶಾದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ ಡೈರೆಕ್ಟರ್ ಕ್ರಿಶ್. ಒಡಿಶಾದ ಕೋರಾಪುಟ್ ಜಿಲ್ಲೆಯ ಡಿಯೋಮಾಲಿನಲ್ಲಿ ಚಿತ್ರತಂಡ ಶೀಲವತಿ ಶೂಟಿಂಗ್ ಮಾಡುತ್ತಿದೆ ಸಿನಿಮಾ ತೆರೆಗೆ ಬರುವ ಮುನ್ನವೇ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
2 ಪ್ರತಿಕ್ರಿಯೆಗಳು
электрический карниз http://www.provorota.su .
на чем заработать в интернете https://kak-zarabotat-v-internete11.ru .