ಕಲಬುರಗಿ: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರಪ್ಪ ವಣಿಕ್ಯಾಳ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
ಆಯುಕ್ತರ ಪರವಾಗಿ 1.42 ಲಕ್ಷ ರೂ. ಲಂಚದ ಹಣ ಪಡೆದಿದ್ದ ವಿಷಯ ನಿರ್ವಾಹಕ ಚನ್ನಪ್ಪ ಬನ್ನೂರ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಕೋವಿಡ್ ವೇಳೆ ಸುರಕ್ಷಾ ಚಕ್ರ ಸಹಾಯವಾಣಿಗಾಗಿ ಕೆಲಸ ಮಾಡಿದ್ದಕ್ಕಾಗಿ ಬರಬೇಕಿದ್ದ ಬಾಕಿ ಬಿಲ್ ಮೊತ್ತ 7.5 ಲಕ್ಷ ರೂ. ಪಡೆಯಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕೋವಿಡ್ ಸುರಕ್ಷಾ ಸಹಾಯವಾಣಿಗಾಗಿ ಮಹಾನಗರ ಪಾಲಿಕೆಯು ಶರಣಬಸಪ್ಪ ಅಂಬೆಸಿಂಗ್ ಎಂಬುವರ ಕಂಪನಿಯ ನೆರವನ್ನು ಪಡೆದಿತ್ತು. ಇದಕ್ಕಾಗಿ 7.5 ಲಕ್ಷ ರೂ. ಬಿಲ್‌ಗೆ ಅನುಮೋದನೆ ನೀಡಬೇಕೆಂದರೆ ಶೇ 2ರಷ್ಟು ಲಂಚ ನೀಡಬೇಕು ಎಂದು ವಣಿಕ್ಯಾಳ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಶರಣ ಬಸಪ್ಪ ಎಸಿಬಿಗೆ ದೂರು ನೀಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಶಂಕರಪ್ಪ ವಣಿಕ್ಯಾಳ ಇತ್ತೀಚೆಗಷ್ಟೇ ಮಹಾನಗರ ಪಾಲಿಕೆಪಾಲಿಕೆಯ ಆಯುಕ್ತರಾಗಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.