Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನನ್ನನ್ನು ಮೂಲೆಗುಂಪು ಮಾಡಲು ಯಾರಿಂದಲೂ ಸಾಧ್ಯವಿಲ್ಲ!
    ಚುನಾವಣೆ 2024

    ನನ್ನನ್ನು ಮೂಲೆಗುಂಪು ಮಾಡಲು ಯಾರಿಂದಲೂ ಸಾಧ್ಯವಿಲ್ಲ!

    vartha chakraBy vartha chakraಫೆಬ್ರವರಿ 12, 2023Updated:ಫೆಬ್ರವರಿ 12, 20231 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಶಿವಮೊಗ್ಗ

    ರಾಜ್ಯ ರಾಜಕಾರಣದಲ್ಲಿ ನನ್ನನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂದು ಗುಡುಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ರಾಜ್ಯದಲ್ಲಿ ಮತ್ತೆ BJP ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರುತ್ತೇನೆ ಎಂದು ಘೋಷಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೀಗ 80 ವರ್ಷಗಳು ತುಂಬುತ್ತಿವೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ.‌ ಈ ಚುನಾವಣೆ ಸೇರಿ ಇನ್ನೂ ಎರಡು ಅವಧಿಗಳವರೆಗೆ  ಸಕ್ರಿಯ‌ ರಾಜಕಾರಣದಲ್ಲಿ‌ಇರುತ್ತೇನೆ. ನಿವೃತ್ತಿಯ ಮಾತೇ‌ ಇಲ್ಲ’ ಎಂದು ಸ್ಪಷ್ಟಪಡಿಸಿದರು. ‘ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಅವರು ಎರಡು ದಿನ ರಾಜ್ಯ ಪ್ರವಾಸ ಕೈಗೊಂಡು ಯಾವ ಯಾವ ಕ್ಷೇತ್ರದಲ್ಲಿ ಗೆಲ್ಲಬೇಕು, ಹೇಗೆಲ್ಲಾ ಕೆಲಸ ಮಾಡಬೇಕೆಂದು ಸವಿಸ್ತಾರವಾಗಿ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದು, 140ರಿಂದ 150 ಸ್ಥಾನಗಳಲ್ಲಿ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ತಯಾರಿ ಮಾಡಲಾಗುತ್ತಿದೆ’ ಎಂದರು.

    ‘ಕೇಂದ್ರದ ನಾಯಕರು ವಿಧಾನಸಭೆ ಚುನಾವಣೆಗೆ ಸಜ್ಜಾಗುವ ಜೊತೆಗೆ ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದಾರೆ. ನನಗೆ ಹೆಚ್ಚಿನ ಸಮಯ ನೀಡಿ ಹಳ್ಳಿಗೆ ಪ್ರವಾಸ ಮಾಡಿ ಎಂದು ಸಲಹೆ ನೀಡಿದ್ದಾರೆ. ವಿಧಾನಸಭೆ ಅಧಿವೇಶನ ಮುಗಿದ ಮೇಲೆ ಕಾರ್ಯಕರ್ತರೊಂದಿಗೆ ರಾಜ್ಯ ಪ್ರವಾಸ ಆರಂಭವಾಗಲಿದೆ. Amit Shah ನೀಡಿರುವ ಗೆಲ್ಲುವ ಟಾರ್ಗೆಟ್ ಅನ್ನು ಸವಾಲಾಗಿ ಸ್ವೀಕರಿಸಿ ರಾಜ್ಯದಲ್ಲಿ ಮತ್ತೆ BJP ಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ’ ಎಂದು ಹೇಳಿದರು.

    ‘CM ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆಯೂ ಎಲ್ಲೇ ಹೋದರೂ ಯಡಿಯೂರಪ್ಪ ಎಂಬ ಘೋಷಣೆಗಳು ಕೇಳಿ ಬರುತ್ತಿವೆ. ಅಧಿಕಾರ, ಸ್ಥಾನಮಾನ ಇಲ್ಲದೆಯೂ ಪಕ್ಷ ಕಟ್ಟಬಹುದು ಎಂಬ ಸವಾಲು ನನ್ನ ಮುಂದಿದೆ. ಆ ಸವಾಲನ್ನು ಸ್ವೀಕರಿಸಿ ಜನರ ಬಳಿ ಹೋಗುತ್ತಿದ್ದೇನೆ’ ಎಂದು‌ ತಿಳಿಸಿದರು.

    ‘ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭ ಫೆ.27ರಂದು ನಿಶ್ಚಿತವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವರು. ಅದೇ ದಿನ ವಿಮಾನ ನಿಲ್ದಾಣಕ್ಕೆ ನಾಡುಕಂಡ ಶ್ರೇಷ್ಠ ಕವಿ, ಜ್ಞಾನಪೀಠ ಪುರಸ್ಕೃತ ಕುವೆಂಪು (Kuvempu) ಅವರ ಹೆಸರನ್ನು ನಾಮಕರಣ ಮಾಡಲಾಗುವುದು’ ಎಂದು ಹೇಳಿದರು.

    ‘ಕುವೆಂಪು ಅವರು ವಿಶ್ವಮಾನ್ಯ ಸಂದೇಶವನ್ನು ಜಗತ್ತಿಗೆ ಸಾರಿದ್ದು, ಪ್ರಧಾನಿ ಮೋದಿ ಅವರು ಅದೇ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣಕ್ಕೆ ಮೋದಿ ಅವರಿಂದಲೇ ಕುವೆಂಪು ಹೆಸರು ನಾಮಕರಣ ಮಾಡಿಸಬೇಕೆಂಬುದು ನಮ್ಮೆಲ್ಲರ ಬೇಡಿಕೆಯಾಗಿದ್ದು, ನಾಡಿನ ಸಮಸ್ತ ಜನರು ಈ ನಿರ್ಧಾರವನ್ನು ಸ್ವಾಗತಿಸುವ ವಿಶ್ವಾಸವಿದೆ’ ಎಂದರು.

    #BJP #karnataka #yediyurappa Amit Shah BJP BS Yediyurappa ED Elections 2023 Government Kuvempu m mi Politics shivamogga ಚುನಾವಣೆ ನರೇಂದ್ರ ಮೋದಿ
    Share. Facebook Twitter Pinterest LinkedIn Tumblr Email WhatsApp
    Previous ArticleRakhi Sawant ಗಂಡನಿಗೆ ಕಷ್ಟದ ಮೇಲೆ ಕಷ್ಟ
    Next Article ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿನ್ನಾಟ
    vartha chakra
    • Website

    Related Posts

    ಎಚ್ಚೆತ್ತ ರಾಜ್ಯ ಸರ್ಕಾರ

    ಡಿಸೆಂಬರ್ 12, 2025

    ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

    ಡಿಸೆಂಬರ್ 9, 2025

    KSCA ಗೆ ವೆಂಕಟೇಶ್ ಪ್ರಸಾದ್ ಸಾರಥಿ

    ಡಿಸೆಂಬರ್ 8, 2025

    1 ಟಿಪ್ಪಣಿ

    1. Diplomi_wcPt on ಡಿಸೆಂಬರ್ 3, 2025 6:00 ಅಪರಾಹ್ನ

      обложка на аттестат купить спб обложка на аттестат купить спб .

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎಚ್ಚೆತ್ತ ರಾಜ್ಯ ಸರ್ಕಾರ

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • kypit kyrsovyu_ivOl ರಲ್ಲಿ ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • kypit kyrsovyu_hwOn ರಲ್ಲಿ ಮಗನನ್ನು ಕೊಂದ ತಾಯಿ ಮಾನಸಿಕ ರೋಗಿ ಅಲ್ಲ| Suchana Seth
    • Randysnach ರಲ್ಲಿ ಸೋತ ಕಾಂಗ್ರೆಸ್ ನಾಯಕರಿಗೆ ಪಾಠ.
    Latest Kannada News

    ಎಚ್ಚೆತ್ತ ರಾಜ್ಯ ಸರ್ಕಾರ

    ಡಿಸೆಂಬರ್ 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಡಿಸೆಂಬರ್ 12, 2025

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಡಿಸೆಂಬರ್ 12, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಿಎಂ ವಿಮಾನಯಾನ ಬಳಕೆಗೆ 47 ಕೋಟಿ ಖರ್ಚು #varthachakra #siddaramaiah #helicopter #airtravel #costs #news
    Subscribe