ಬೆಂಗಳೂರು – ದೇಶದ ಅತ್ಯಂತ ಪ್ರತಿಷ್ಠಿತ ಆನ್ ಲೈನ್ ಎಜುಕೇಶನ್ ಕೋಚಿಂಗ್ ಸಂಸ್ಥೆ ಬೈಜೂಸ್ (Byju’s) ಇದೀಗ ದೊಡ್ಡ ಗಂಡಾಂತರಕ್ಕೆ ಸಿಲುಕಿದೆ.
ತೀವ್ರ ಆರ್ಥಿಕ ನಷ್ಟದಲ್ಲಿರುವ ಸಂಸ್ಥೆಯನ್ನು ಲಾಭದಾಯಕವಾಗಿ ಮಾಡಲು ಸಂಸ್ಥೆಯ ಪ್ರವರ್ತಕರು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಸಂಸ್ಥೆ ವಿರುದ್ಧ ವಿದೇಶಿ ವಿನಿಮಯ ಕಾಯಿದೆ ಉಲ್ಲಂಘನೆ ಆರೋಪ ಕೇಳಿಬಂದಿದೆ.
ಈ ಆರೋಪದ ಹಿನ್ನೆಲೆಯಲ್ಲಿ ಬೈಜೂಸ್ (Byju’s) ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದ್ದು ಹಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ.
ವಿದೇಶಿ ವಿನಿಮಯ ಕಾಯಿದೆ ಉಲ್ಲಂಘನೆ ಆರೋಪ
ಕುರಿತಂತೆ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ, ಬೈಜೂಸ್‘ (Byju’s) ಸಂಸ್ಥಾಪಕ ಬೈಜೂ ರವೀಂದ್ರನ್ ಅವರ ಬೆಂಗಳೂರು ನಿವಾಸದಲ್ಲಿ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ.
ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬೈಜೂಸ್ ಸಂಸ್ಥಾಪಕ ಬೈಜೂ (Byju’s) ರವಿಚಂದ್ರನ್ ಅವರ ಬೆಂಗಳೂರಿನ ಎರಡು ವ್ಯವಹಾರ ಹಾಗೂ ಒಂದು ವಸತಿ ಸ್ಥಳ ಸೇರಿ ಒಟ್ಟು ಮೂರು ಕಡೆಗಳಲ್ಲಿ ಶೋಧ ಕಾರ್ಯ ನಡೆದಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ದಾಖಲಾದ ದೂರಿನ ಅನ್ವಯ ಈ ದಾಳಿ ನಡೆದಿದೆ. ಪತ್ರ ಹಾಗೂ ಡಿಜಿಟಲ್ ರೂಪದಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಹಲವು ಮಂದಿಯಿಂದ ಬಂದ ದೂರು ಆಧರಿಸಿ, ಬೈಜೂ (Byju’s) ರವೀಂದ್ರನ್ ಅವರ ವಿರುದ್ಧ ದೂರು ದಾಖಲಿಸಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಸತತ ನೋಟಿಸ್ ಹೊರತಾಗಿಯೂ ವಿಚಾರಣೆಗೆ ಗೈರು ಹಾಜರಾಗಿದ್ದರು.
Also read.
ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕಾದ್ರೆ ಏನೇನು ಮಾಡಬೇಕು ಗೊತ್ತಾ? Bengaluru