ಬೆಂಗಳೂರು, ಸೆ.15 – ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಕೋಟ್ಯಾಂತರ ರೂಪಾಯಿ ಪಡೆದು ವಂಚನೆ ಮಾಡಿರುವ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ (Chaitra Kundapura) ಅವರು ಮೂರ್ಚೆ ರೋಗದಿಂದ ಬಳಲುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಈ ವಿಷಯ ಗೊತ್ತಿಲ್ಲದ ಪೊಲೀಸರು ವಿಚಾರಣೆ ವೇಳೆ ಆಕೆ ಕುಸಿದುಬಿದ್ದಾಗ ಕೆಲ ಕಾಲ ಆತಂಕಕ್ಕೊಳಗಾದ ಪ್ರಸಂಗವೂ ನಡೆದಿದೆ.
ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದ ಚೈತ್ರಾ ಕುಂದಾಪುರ ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೇತರಪ್ರಜ್ಞಾಹೀನಳಾಗಿದ್ದಾ
ವಂಚನೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಚೈತ್ರಾ ಕುಂದಾಪುರ ಅವರನ್ನು ರಾತ್ರಿ ಸಾಂತ್ವನ ಕೇಂದ್ರದಲ್ಲಿ ಉಳಿಸಲಾಗುತ್ತಿದೆ.
ಪ್ರತಿ ದಿನ ಅವರನ್ನು ಅಲ್ಲಿಂದ ಕರೆತಂದು ವಿಚಾರಣೆ ಮಾಡಲಾಗುತ್ತದೆ.ಅದರಂತೆ ಶುಕ್ರವಾರ ವಿಚಾರಣೆ ಆರಂಭವಾಗುವ ಹೊತ್ತಿಗೆ ಅವರು ನೊರೆ ಕಾರಿಕೊಂಡು ಅಲ್ಲೇ ಕುಸಿದುಬಿದ್ದರು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಆರಂಭದಲ್ಲಿ ಅವರು ಯಾವುದೋ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಹೀಗಾಗಿ ನೊರೆ ಕಾರಿಕೊಂಡಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ವೈದ್ಯಕೀಯ ಪರೀಕ್ಷೆಯ ಬಳಿಕ ಅವರು ಯಾವುದೇ ವಿಷ ಸೇವಿಸಿದ್ದಲ್ಲ. ಅವರು ಅಪಸ್ಮಾರ, ಮೂರ್ಛೆ ರೋಗಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದುಬಂತು.
ಫಿಟ್ಸ್ ರೋಗ ಬಂದಾಗ ಆಗುವಂತೆ ಅವರಿಗೂ ನರ್ವ್ ಸೀಜ್ ಆಗಿ ಬಳಿಕ ರಿಲ್ಯಾಕ್ಸ್ ಆಗಿದ್ದಾರೆ. ಇದೀಗ ಅವರ ರಕ್ತದ ಒತ್ತಡ, ಪಲ್ಸ್ ರೇಟ್ ಸಾಮಾನ್ಯವಾಗಿದೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಚೈತ್ರ ಸುಧಾರಿಸಿಕೊಳ್ಳುತ್ತಿದ್ದು, ಕರೆದೊಯ್ಯಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ, ಸ್ವಲ್ಪ ಸಮಯ ಆಸ್ಪತ್ರೆಯಲ್ಲೇ ಇರಲಿ ಎಂದು ಪೊಲೀಸರು ಕಾಯುತ್ತಿದ್ದು, ಬಳಿಕ ಶಿಫ್ಟ್ ಮಾಡುವ ಸಾಧ್ಯತೆಗಳಿವೆ.
ಮೂರ್ಚೆರೋಗಿ:
ಚೈತ್ರಾ ಕುಂದಾಪುರಗೆ ಹಿಂದೆಯೂ ಫಿಟ್ಸ್ ರೋಗ ಕಾಡಿದ ಇತಿಹಾಸ ಇದೆ ಎಂದು ಹೇಳಲಾಗುತ್ತಿದೆ. ಅತಿಯಾದ ಒತ್ತಡವಾದಾಗ, ಭಾವೋದ್ವೇಗಕ್ಕೆ ಒಳಗಾದಾಗ ಅವರು ಕುಸಿದು ಬಿದ್ದ ಘಟನೆಗಳು ನಡೆದಿವೆ. ಒಮ್ಮೆ ಪ್ರಜ್ಞೆ ತಪ್ಪಿಯೂ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಬಾರಿ ಭಾಷಣ ಮಾಡುವಾಗಲೇ ಬಿದ್ದಿದ್ದ ಚೈತ್ರಾ ಈ ಸಮಸ್ಯೆಗಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಮಾತ್ರೆ ಕೂಡಾ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ.
ನಿದ್ದೆ ಊಟವಿಲ್ಲ:
ಸೆ. 12ರಂದು ಬಂಧನಕ್ಕೆ ಒಳಗಾದ ಬಳಿಕ ಚೈತ್ರ ಕುಂದಾಪುರ ಇನ್ನೂ ಸರಿಯಾಗಿ ನಿದ್ದೆ ಮಾಡಿಲ್ಲ ಎಂದು ಹೇಳಲಾಗಿದೆ. ನಾನು ಈ ಪ್ರಕರಣದಲ್ಲಿ ಸಿಕ್ಕಿಬೀಳುವಂತಾಯಿತಲ್ಲ ಎಂದ ವಿಪರೀತ ಒತ್ತಡಕ್ಕೆ ಒಳಗಾಗಿದ್ದ ಆಕೆ ಊಟವನ್ನೂ ಮಾಡಿರಲಿಲ್ಲ. ಅದರ ಜತೆಗೆ ಮಾತ್ರೆಯನ್ನೂ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. ಅದರ ಜತೆಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಅನಿವಾರ್ಯತೆಯಿಂದ ಆಕೆ ನಲುಗಿದ್ದಾಳೆ. ಹೀಗಾಗಿ ಫಿಟ್ಸ್ ಬಂದು ಪ್ರಜ್ಞಾಹೀನಳಾಗಿದ್ದಾರೆ. ಎನ್ನಲಾಗಿದೆ.