Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮೂರ್ಚೆರೋಗದಿಂದ ಬಳಲುತ್ತಿರುವ ಚೈತ್ರಾ ಕುಂದಾಪುರ | Chaitra Kundapura
    ರಾಜಕೀಯ

    ಮೂರ್ಚೆರೋಗದಿಂದ ಬಳಲುತ್ತಿರುವ ಚೈತ್ರಾ ಕುಂದಾಪುರ | Chaitra Kundapura

    vartha chakraBy vartha chakraಸೆಪ್ಟೆಂಬರ್ 15, 2023Updated:ಸೆಪ್ಟೆಂಬರ್ 15, 202313 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Chaitra Kundapura
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಸೆ.15 – ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಕೋಟ್ಯಾಂತರ ರೂಪಾಯಿ ಪಡೆದು ವಂಚನೆ ಮಾಡಿರುವ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ (Chaitra Kundapura) ಅವರು ಮೂರ್ಚೆ ರೋಗದಿಂದ ಬಳಲುತ್ತಿರುವ ಅಂಶ ಬೆಳಕಿಗೆ ಬಂದಿದೆ.
    ಈ ವಿಷಯ ಗೊತ್ತಿಲ್ಲದ ಪೊಲೀಸರು ವಿಚಾರಣೆ ವೇಳೆ ಆಕೆ ಕುಸಿದುಬಿದ್ದಾಗ ಕೆಲ ಕಾಲ ಆತಂಕಕ್ಕೊಳಗಾದ ಪ್ರಸಂಗವೂ ನಡೆದಿದೆ.

    ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದ ಚೈತ್ರಾ ಕುಂದಾಪುರ ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೇತರಪ್ರಜ್ಞಾಹೀನಳಾಗಿದ್ದಾ
    ವಂಚನೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಚೈತ್ರಾ ಕುಂದಾಪುರ ಅವರನ್ನು ರಾತ್ರಿ ಸಾಂತ್ವನ ಕೇಂದ್ರದಲ್ಲಿ ಉಳಿಸಲಾಗುತ್ತಿದೆ.
    ಪ್ರತಿ ದಿನ ಅವರನ್ನು ಅಲ್ಲಿಂದ ಕರೆತಂದು ವಿಚಾರಣೆ ಮಾಡಲಾಗುತ್ತದೆ.ಅದರಂತೆ ಶುಕ್ರವಾರ ವಿಚಾರಣೆ ಆರಂಭವಾಗುವ ಹೊತ್ತಿಗೆ ಅವರು ನೊರೆ ಕಾರಿಕೊಂಡು ಅಲ್ಲೇ ಕುಸಿದುಬಿದ್ದರು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

    ಆರಂಭದಲ್ಲಿ ಅವರು ಯಾವುದೋ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಹೀಗಾಗಿ ನೊರೆ ಕಾರಿಕೊಂಡಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ವೈದ್ಯಕೀಯ ಪರೀಕ್ಷೆಯ ಬಳಿಕ ಅವರು ಯಾವುದೇ ವಿಷ ಸೇವಿಸಿದ್ದಲ್ಲ. ಅವರು ಅಪಸ್ಮಾರ, ಮೂರ್ಛೆ ರೋಗಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದುಬಂತು.
    ಫಿಟ್ಸ್‌ ರೋಗ ಬಂದಾಗ ಆಗುವಂತೆ ಅವರಿಗೂ ನರ್ವ್‌ ಸೀಜ್‌ ಆಗಿ ಬಳಿಕ ರಿಲ್ಯಾಕ್ಸ್‌ ಆಗಿದ್ದಾರೆ. ಇದೀಗ ಅವರ ರಕ್ತದ ಒತ್ತಡ, ಪಲ್ಸ್ ರೇಟ್ ಸಾಮಾನ್ಯವಾಗಿದೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
    ಚೈತ್ರ ಸುಧಾರಿಸಿಕೊಳ್ಳುತ್ತಿದ್ದು, ಕರೆದೊಯ್ಯಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ, ಸ್ವಲ್ಪ ಸಮಯ ಆಸ್ಪತ್ರೆಯಲ್ಲೇ ಇರಲಿ ಎಂದು ಪೊಲೀಸರು ಕಾಯುತ್ತಿದ್ದು, ಬಳಿಕ ಶಿಫ್ಟ್‌ ಮಾಡುವ ಸಾಧ್ಯತೆಗಳಿವೆ.

    ಮೂರ್ಚೆರೋಗಿ:

    ಚೈತ್ರಾ ಕುಂದಾಪುರಗೆ ಹಿಂದೆಯೂ ಫಿಟ್ಸ್‌ ರೋಗ ಕಾಡಿದ ಇತಿಹಾಸ ಇದೆ ಎಂದು ಹೇಳಲಾಗುತ್ತಿದೆ. ಅತಿಯಾದ ಒತ್ತಡವಾದಾಗ, ಭಾವೋದ್ವೇಗಕ್ಕೆ ಒಳಗಾದಾಗ ಅವರು ಕುಸಿದು ಬಿದ್ದ ಘಟನೆಗಳು ನಡೆದಿವೆ. ಒಮ್ಮೆ ಪ್ರಜ್ಞೆ ತಪ್ಪಿಯೂ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
    ಒಂದು ಬಾರಿ ಭಾಷಣ ಮಾಡುವಾಗಲೇ ಬಿದ್ದಿದ್ದ ಚೈತ್ರಾ ಈ ಸಮಸ್ಯೆಗಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಮಾತ್ರೆ ಕೂಡಾ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ.

    ನಿದ್ದೆ ಊಟವಿಲ್ಲ:

    ಸೆ. 12ರಂದು ಬಂಧನಕ್ಕೆ ಒಳಗಾದ ಬಳಿಕ ಚೈತ್ರ ಕುಂದಾಪುರ ಇನ್ನೂ ಸರಿಯಾಗಿ ನಿದ್ದೆ ಮಾಡಿಲ್ಲ ಎಂದು ಹೇಳಲಾಗಿದೆ. ನಾನು ಈ ಪ್ರಕರಣದಲ್ಲಿ ಸಿಕ್ಕಿಬೀಳುವಂತಾಯಿತಲ್ಲ ಎಂದ ವಿಪರೀತ ಒತ್ತಡಕ್ಕೆ ಒಳಗಾಗಿದ್ದ ಆಕೆ ಊಟವನ್ನೂ ಮಾಡಿರಲಿಲ್ಲ. ಅದರ ಜತೆಗೆ ಮಾತ್ರೆಯನ್ನೂ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. ಅದರ ಜತೆಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಅನಿವಾರ್ಯತೆಯಿಂದ ಆಕೆ ನಲುಗಿದ್ದಾಳೆ. ಹೀಗಾಗಿ ಫಿಟ್ಸ್‌ ಬಂದು ಪ್ರಜ್ಞಾಹೀನಳಾಗಿದ್ದಾರೆ. ಎನ್ನಲಾಗಿದೆ.

    Bangalore BJP Chaitra Kundapura Karnataka kundapura NDA News ಚುನಾವಣೆ
    Share. Facebook Twitter Pinterest LinkedIn Tumblr Email WhatsApp
    Previous Articleಮನುಸ್ಮೃತಿ ಜಾರಿಗೆ ಹುನ್ನಾರ-ಎಚ್ಚರ ಅಗತ್ಯ | Manusmriti
    Next Article ನಿಮ್ಮ ವಾಹನ ಕಳವಾದ್ರೆ ಹೀಗೆ ಮಾಡಿ | Stolen Vehicle
    vartha chakra
    • Website

    Related Posts

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಜುಲೈ 14, 2025

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಜುಲೈ 14, 2025

    ಸುರ್ಜೇವಾಲಾ ಬದಲಾವಣೆಗೆ ತಂತ್ರ.

    ಜುಲೈ 11, 2025

    13 ಪ್ರತಿಕ್ರಿಯೆಗಳು

    1. b4wi2 on ಜೂನ್ 7, 2025 10:34 ಫೂರ್ವಾಹ್ನ

      cost of clomiphene without a prescription can i buy generic clomiphene how to buy clomiphene tablets can you get generic clomid without rx where buy clomiphene can i order cheap clomid prices can you buy clomid for sale

      Reply
    2. buy generic cialis paypal on ಜೂನ್ 9, 2025 11:29 ಅಪರಾಹ್ನ

      Proof blog you be undergoing here.. It’s severely to assign high status article like yours these days. I justifiably comprehend individuals like you! Rent mindfulness!!

      Reply
    3. best time to take flagyl on ಜೂನ್ 11, 2025 5:46 ಅಪರಾಹ್ನ

      This is a question which is virtually to my verve… Numberless thanks! Faithfully where can I find the acquaintance details in the course of questions?

      Reply
    4. 8ga0x on ಜೂನ್ 19, 2025 4:51 ಫೂರ್ವಾಹ್ನ

      inderal price – cheap clopidogrel 150mg cheap methotrexate 2.5mg

      Reply
    5. cit3n on ಜೂನ್ 24, 2025 4:40 ಫೂರ್ವಾಹ್ನ

      azithromycin 250mg cost – buy bystolic 20mg generic brand nebivolol 5mg

      Reply
    6. u5zon on ಜೂನ್ 27, 2025 4:51 ಅಪರಾಹ್ನ

      purchase esomeprazole generic – anexamate.com nexium 40mg pill

      Reply
    7. md1yo on ಜುಲೈ 1, 2025 12:03 ಫೂರ್ವಾಹ್ನ

      buy mobic 15mg sale – https://moboxsin.com/ order mobic 15mg online

      Reply
    8. 8cfh1 on ಜುಲೈ 2, 2025 8:54 ಅಪರಾಹ್ನ

      buy prednisone 5mg generic – https://apreplson.com/ prednisone 10mg ca

      Reply
    9. 3fg1i on ಜುಲೈ 3, 2025 11:43 ಅಪರಾಹ್ನ

      gnc ed pills – fastedtotake non prescription erection pills

      Reply
    10. kr8ri on ಜುಲೈ 10, 2025 5:23 ಫೂರ್ವಾಹ್ನ

      fluconazole over the counter – https://gpdifluca.com/ order diflucan sale

      Reply
    11. kbatc on ಜುಲೈ 11, 2025 6:34 ಅಪರಾಹ್ನ

      cenforce uk – https://cenforcers.com/# buy generic cenforce online

      Reply
    12. n15cb on ಜುಲೈ 13, 2025 4:25 ಫೂರ್ವಾಹ್ನ

      buy cialis shipment to russia – https://ciltadgn.com/# cheap canadian cialis

      Reply
    13. gk6gj on ಜುಲೈ 14, 2025 9:50 ಅಪರಾಹ್ನ

      online cialis prescription – cialis 5mg daily cialis picture

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಆಟೋ ಚಾಲಕರೇ ಹುಷಾರ್ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 19k94 ರಲ್ಲಿ ಬೆತ್ತಲೆ ಕಳ್ಳನಿಗಾಗಿ ಪೊಲೀಸ್ ಶೋಧ
    • Connietaups ರಲ್ಲಿ CBI ತನಿಖೆಗೆ ಪಟ್ಟು- ದೆಹಲಿಗೆ ಹಾರಿದ ಜಾರಕಿಹೊಳಿ
    • xixqj ರಲ್ಲಿ ಪೊಲೀಸರಿಗೆ ಸವಾಲೊಡ್ಡಿದ ಬಾಂಬ್ ಬೆದರಿಕೆ ಕರೆ | Bomb Threat
    Latest Kannada News

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಜುಲೈ 14, 2025

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಜುಲೈ 14, 2025

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಜುಲೈ 14, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯ ! #varthachakra #bbmp #instagram #streetdogs #bangalore #biriyani
    Subscribe