ಚೆನ್ನೈ-.ಶಂಕಿತ ಭಯೋತ್ಪಾದನೆಯ ಸಂಪರ್ಕದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತಮಿಳುನಾಡಿನ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿದೆ. ಚೆನ್ನೈ, ಮೈಲಾದುತ್ತುರೈ, ಕಾರೈಕಲ್ ಸೇರಿದಂತೆ ಇನ್ನೂ ಐದು ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ವಾಹನಗಳ ತಪಾಸಣೆಯ ಸಂದರ್ಭದಲ್ಲಿ ಕೆಲವರು ಪೊಲೀಸರಿಗೆ ಬೆದರಿಸಿದ ಹಿನ್ನೆಲೆಯಲ್ಲಿ ಅವರಿಗೆ ಉಗ್ರಗಾಮಿ ಸಂಘಟನೆ ಐಸಿಸ್ ಸಂಪರ್ಕ ಇರುವ ಶಂಕೆಯಿಂದ ಪ್ರಕರಣದ ತನಿಖೆಯನ್ನು ಎನ್ಎಐ ವಹಿಸಿಕೊಂಡಿದೆ.
ಫೆಬ್ರವರಿ ತಿಂಗಳಲ್ಲಿ ತಮಿಳುನಾಡಿನ ಮೈಲಾದುತ್ತುರೈನಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುವಾಗ ಸಾದಿಕ್ ಬಾಷಾ ಹಾಗು ಆತನ ಸಹಚರರು ಪೊಲೀಸರಿಗೆ ಬೆದರಿಸಿದ್ದರು.
ಖಿಲಾಫಾ ಪಾರ್ಟಿ ಎಂಬ ಪಕ್ಷವನ್ನು ನಡೆಸುತ್ತಿರುವ ಸಾದಿಕ್ ಏರ್ ಗನ್ ತೋರಿಸಿ ಇನ್ಸ್ಪೆಕ್ಟರ್ ಒಬ್ಬರನ್ನು ಸಹ ಬೆದರಿಸಿದ್ದ. ಸಾದಿಕ್ ಬಾಷಾ ಹಾಗು ಆತನ ಸಹಚರರಾದ ಮೊಹಮ್ಮದ್ ಆಶಿಕ್, ಮೊಹಮ್ಮದ್ ಇರ್ಫಾನ್, ಜಹಾಬರ್ ಅಲಿ, ರೆಹ್ಮತ್ ಇವರಿಗೆ ಇರಬಹುದಾ?
Previous Articleಚೆನ್ನೈ ಮೂಲದ MGM ಗ್ರೂಪ್ ಗಳ ಮೇಲೆ ಐಟಿ ದಾಳಿ
Next Article ಬುಲ್ಡೋಜರ್ ಓಡೋಕೆ ಬಿಡೋಲ್ಲಾ.. !!