ಬೆಂಗಳೂರು,ಜೂ.15-ತೆರಿಗೆ ವಂಚನೆಯ ಹಿನ್ನೆಲೆಯಲ್ಲಿ ಎಂಜಿಎಂ ಗ್ರೂಪ್ ನ ನಗರದ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಮ್ಯೂಸ್ಮೆಂಟ್ ಪಾರ್ಕ್ ಸೇರಿದಂತೆ ಇನ್ನೂ ಹಲವಾರು ವ್ಯಾಪಾರ ವ್ಯವಹಾರಗಳನ್ನು ನಡೆಸುವ ಎಂಜಿಎಂ ಗ್ರೂಪ್ನ ಕಚೇರಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಲಾಗಿದೆ.
ಕಂಪನಿಯಿಂದ ಆದಾಯ ತೆರಿಗೆ ಪಾವತಿಯಲ್ಲಿ ವಂಚನೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚೆನ್ನೈ, ನೆಲ್ಲೈ ಹಾಗು ಬೆಂಗಳೂರು ಸೇರಿದಂತೆ ಸುಮಾರು 40 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿಯ ಕುರಿತಂತೆ ವಿಸ್ತೃತ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಚೆನ್ನೈ ಮೂಲದ MGM ಗ್ರೂಪ್ ಗಳ ಮೇಲೆ ಐಟಿ ದಾಳಿ
Previous Articleಹೊರಟ್ಟಿ ಗೆಲುವು: ಬಿಜೆಪಿಯಿಂದ ಸಂಭ್ರಮಾಚರಣೆ
Next Article ಉಗ್ರರಿಗಾಗಿ ಹುಡುಕಾಟ..!