ಬೆಂಗಳೂರು,ಮಾ.2- ಪಠಾಣ್ ಚಿತ್ರ ನೋಡಲು ತೆರಳಿದ್ದ ಕುಟುಂಬದ ಮೇಲೆ ಜೋಡಿಯೊಂದು ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಘಟನೆ ಮಲ್ಲೇಶ್ವರಂ ಮಂತ್ರಿಮಾಲ್‍ನ ಐನಾಕ್ಸ್ ಚಿತ್ರಮಂದಿರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ನಾಗರಾಜ್ ಹಾಗೂ ಅವರ ಪತ್ನಿ ಪ್ರೇಮ, ಮಗಳು, ಅಳಿಯನ ಜೊತೆ ಪಠಾಣ್ ಚಿತ್ರ ನೋಡಲು ತೆರಳಿದ್ದರು. ಚಿತ್ರ ನೋಡುವಾಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿ ಪದೇ ಪದೇ ಕಿರುಚಾಡುತ್ತಿರುವುದನ್ನು ಕಂಡ ಎದುರು ಸೀಟಿನಲ್ಲಿದ್ದ ಕುಟುಂಬ ಕಿರುಚಾಡದಂತೆ ಮನವಿ ಮಾಡಿದೆ. ಈ ವೇಳೆ ನಾಗರಾಜ್ ಕುಟುಂಬ ಹಾಗೂ ಜೋಡಿಯ ನಡುವೆ ಕಿರಿಕ್ ನಡೆದು ನಂತರ ಸುಮ್ಮನಾಗಿದ್ದರು.
ಸಿನಿಮಾ ಮುಗಿಸಿ ಹೊರಗೆ ಬರುತ್ತಿದ್ದಂತೆ ಜೋಡಿ, ಕುಟುಂಬದೊಂದಿಗೆ ಗಲಾಟೆ ಶುರು ಮಾಡಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನಾಗರಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿ ಸಹ ತನ್ನ ಹೈ ಹೀಲ್ಡ್ ಚಪ್ಪಲಿಯಿಂದ ಪ್ರೇಮ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.
ಮಗಳು ಅಳಿಯನ ಮೇಲೆ ಸಹ ಜೋಡಿ ಹಲ್ಲೆ ನಡೆಸಿ ಮಗಳ ಖಾಸಗಿ ಅಂಗ ಮುಟ್ಟಿ ಯುವಕ ಅಸಭ್ಯವಾಗಿ ವರ್ತಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ನಾಗರಾಜ್ ಕುಟುಂಬ ದೂರು ದಾಖಲಿಸಿದೆ.
ಈ ಸಂಬಂಧ 506, 504, 354 ಸೆಕ್ಷನ್‍ನಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ
Cinema ಹಾಲ್ ನಲ್ಲಿ ಕಿರಿಕ್- ಪೊಲೀಸರಿಗೆ ದೂರು
Previous Articleಬೈಕ್ನಲ್ಲಿ ಅಕ್ರಮ ಸಾಗಾಣೆ 6.5 ಕೆ.ಜಿ ಚಿನ್ನ ಜಪ್ತಿ
Next Article ಮಾಡಾಳ್ ಗೆ BJPಯಿಂದ ಗೇಟ್ ಪಾಸ್