Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅಭಿವೃದ್ಧಿ ಪರ ಕೇಂದ್ರ Budget – CM ಬಣ್ಣನೆ
    ರಾಜಕೀಯ

    ಅಭಿವೃದ್ಧಿ ಪರ ಕೇಂದ್ರ Budget – CM ಬಣ್ಣನೆ

    vartha chakraBy vartha chakraಫೆಬ್ರವರಿ 2, 2023Updated:ಮಾರ್ಚ್ 20, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.2-

    ‘ಕೇಂದ್ರ ಸರ್ಕಾರದ ಈ‌ ಬಾರಿಯ ಬಜೆಟ್ ಜನಪರ, ಅಭಿವೃದ್ಧಿ ಪರ ಹಾಗೂ ಸರ್ವರಿಗೂ ಸಮಪಾಲು ನೀಡುವ ಬಜೆಟ್ ಆಗಿದ್ದು, ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಆಪಾದಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಬಾರಿ ಬಜೆಟ್ನಲ್ಲಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಗ್ರಾಮಗಳಲ್ಲಿ ಮನೆ ಕಟ್ಟಲು ಹೆಚ್ಚಿನ ಅನುದಾನ ನೀಡಲಾಗಿದೆ. 2024-25 ನೇ ಸಾಲಿನ ಕುಡಿಯುವ ನೀರು ಕೊಡುವ ಗುರಿಗೆ ಪೂರಕವಾಗಿ ಅನುದಾನ ಹೆಚ್ಚಿಸಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, 3 ಕೋಟಿ ರೂ.ವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ’ ಎಂದು ಶ್ಲಾಘಿಸಿದರು.

    ‘ಕೃಷಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಸಹಾಯ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡಲಾಗಿದೆ. ನಿಜಲಿಂಗಪ್ಪ ಕಾಲದಲ್ಲಿ ಭದ್ರಾ ಮೇಲ್ದಂಡೆ ಆಗಬೇಕು ಎಂಬುದು ಇತ್ತು. ಆವಾಗಿನಿಂದ 40 ವರ್ಷ ಕಳೆದರೂ ಯಾವ ಸರ್ಕಾರವೂ ಏನೂ ಮಾಡಿಲ್ಲ. ನಾವು ಬಂದ‌ ಮೇಲೆ ಯೋಜನೆ ಬಗ್ಗೆ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಹೇಳಿದರು. ‘ರಾಷ್ಟ್ರೀಯ ಯೋಜನೆ ಸಂಬಂಧಿಸಿದಂತೆ ಈಗ ಎಲ್ಲವೂ ಅನುಮೋದನೆ ಆಗಿದೆ. UPA ಸರ್ಕಾರ ಇದ್ದಾಗ ಸಮಗ್ರ ನೀರಾವರಿ ಯೋಜನೆ ಘೋಷಣೆ ಮಾಡಲಾಗಿತ್ತು. 2012ರಲ್ಲಿ 500 ಕೋಟಿ ರೂ. ಖರ್ಚು ಮಾಡಿದರೆ ಮಾತ್ರ ಅನುದಾನ ಕೊಡಲಾಗುತ್ತದೆ ಎಂದಿದ್ದರು. ಹಾಗಾಗಿ ಅನುದಾನವೇ ಬರುತ್ತಿರಲಿಲ್ಲ. NDA ಸರ್ಕಾರ ಬಂದ ಬಳಿಕ ಆ ಷರತ್ತು ತೆಗೆದು ಹಾಕಲಾಗಿದ್ದು ಈಗ ಯಾವುದೇ ಷರತ್ತಿಲ್ಲದೆ 5,300 ಕೋಟಿ ಬರುತ್ತಿದೆ’ ಎಂದು ತಿಳಿಸಿದರು.

    ‘ಈ ಘೋಷಣೆಯನ್ನು ನಾವು ಸ್ವಾಗತ ಮಾಡಬೇಕು. ಆದರೆ ಅದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ. 5300 ಕೋಟಿ ರೂ. ಬಂದಿದೆ ಎಂದು ಪ್ರತಿಪಕ್ಷಗಳಿಗೆ ನಿರಾಸೆಯಾಗಿದೆ. ಅದಕ್ಕಾಗಿ ಪ್ರತಿಪಕ್ಷ ವಿರೋಧ ಮಾಡುತ್ತಿದೆ’ ಎಂದರು. ‘ನಗರಾಭಿವೃದ್ಧಿ ಇಲಾಖೆಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಎಲ್ಲಾ ಸರ್ಕಾರಗಳಲ್ಲೂ ಕರ್ನಾಟಕಕ್ಕೆ ಪಾಲು ಬರಲಿದೆ. ಭದ್ರ ಬುನಾದಿ ಹಾಕುವ ಎಲ್ಲಾ ಅಂಶ ಬಜೆಟ್ನಲ್ಲಿ ಇದೆ. ಆರ್ಥಿಕ‌ ಸುಧಾರಣೆಗೆ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಎಲ್ಲಾ ರಂಗದಲ್ಲಿ ಯೋಚನೆ ಮಾಡಿ ಸಮಗ್ರ ಅಭಿವೃದ್ದಿಗಾಗಿ, ಮೈಕ್ರೋ ಲೆವೆಲ್, ಮ್ಯಾಕ್ರೋ ಲೆವೆಲ್ಗೆ, ಸಮತೋಲಿತ, ಅತ್ಯಂತ ಪ್ರಗತಿಪರ, ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿ ಎಲ್ಲರಿಗೂ ಸಹಾಯ ಮಾಡುವ ಬಜೆಟ್ ಇದಾಗಿದೆ’ ಎಂದು ಹೇಳಿದರು.

    ‘ನರೇಗಾಗೆ ಬರಬೇಕಾದ ಹಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯತ್ಯಾಸ ಆಗಿಲ್ಲ. ಗ್ರಾಮೀಣ ಪ್ರದೇಶದ ಆಸ್ತಿ ಸೃಜನೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ವಸತಿ, ಕೃಷಿಗೆ, ನಗರಾಭಿವೃದ್ಧಿಗೆ, ಗ್ರಾಮೀಣಾಭಿವೃದ್ಧಿಗೆ ಅನುದಾನ ಬಂದಿದೆ. ಎಲ್ಲೆಲ್ಲಿ ನಿರೀಕ್ಷೆ ಇತ್ತೋ ಅಲ್ಲೆಲ್ಲ ಅನುದಾನ ಬಂದಿದೆ’ ಎಂದು ತಿಳಿಸಿದರು.

    central budget Government Karnataka m NDA News Politics ಬೊಮ್ಮಾಯಿ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous ArticleCD ರಾಜಕಾರಣ ಬಿಡಿ‌ – ರಾಮಲಿಂಗಾರೆಡ್ಡಿ
    Next Article CBI ತನಿಖೆಗೆ ಪಟ್ಟು- ದೆಹಲಿಗೆ ಹಾರಿದ ಜಾರಕಿಹೊಳಿ
    vartha chakra
    • Website

    Related Posts

    ಸಫಾರಿ ಸ್ಥಗಿತ – ಮುಂದೇನು?

    ಡಿಸೆಂಬರ್ 4, 2025

    ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲವೇ..?

    ಡಿಸೆಂಬರ್ 4, 2025

    ಜರ್ಮನಿ ತಂಡದೊಂದಿಗೆ ಮುಖ್ಯಕಾರ್ಯದರ್ಶಿ ಚರ್ಚೆ

    ಡಿಸೆಂಬರ್ 4, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಫಾರಿ ಸ್ಥಗಿತ – ಮುಂದೇನು?

    ಪೊಲೀಸ್ ಕಮಿಷನರ್ ಕಚೇರಿಯಲ್ಲೇ ಹಣ ಕದ್ದ

    ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

    ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲವೇ..?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Scotthem ರಲ್ಲಿ ಸುಧಾ ಮೂರ್ತಿ ಹೆಸರಲ್ಲಿ ವಂಚಿಸಿದ ಅರ್ಚಕ | Sudha Murthy
    • beste online casinos mit echtgeld ರಲ್ಲಿ ಸರ್ಕಾರಕ್ಕೆ ಮುಜುಗರ ತಂದ ಬಿ.ಆರ್.ಪಾಟೀಲ್ ಲೆಟರ್ ಬಾಂಬ್ | BR Patil
    • Kings Casino Öffnungszeiten ರಲ್ಲಿ ಸರ್ಕಾರಕ್ಕೆ ಮುಜುಗರ ತಂದ ಬಿ.ಆರ್.ಪಾಟೀಲ್ ಲೆಟರ್ ಬಾಂಬ್ | BR Patil
    Latest Kannada News

    ಸಫಾರಿ ಸ್ಥಗಿತ – ಮುಂದೇನು?

    ಡಿಸೆಂಬರ್ 4, 2025

    ಪೊಲೀಸ್ ಕಮಿಷನರ್ ಕಚೇರಿಯಲ್ಲೇ ಹಣ ಕದ್ದ

    ಡಿಸೆಂಬರ್ 4, 2025

    ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

    ಡಿಸೆಂಬರ್ 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಿಎಂ, ಡಿಸಿಎಂ ಬಳಿ ಇದೆ 43 ಲಕ್ಷದ ವಾಚ್!
    Subscribe