ಬೆಂಗಳೂರು, ನ.30- ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರದ್ದು ಒಂದು ನಿಲುವಾದರೆ,ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ್ದೇ ಮತ್ತೊಂದು ನಿಲುವು. ಸೋನಿಯಾ ಅವರು ಪ್ಯಾಲೆಸ್ತೀನ್ ರ ಪರವಾಗಿ ಧ್ವನಿ ಎತ್ತಿ ಲೇಖನ ಬರೆದಿದ್ದಾರೆ. ಹಿಂಸಾಚಾರದಿಂದ ನಲುಗಿದ ಪ್ಯಾಲೆಸ್ತೀನ್ ಜನರ ಪರವಾಗಿ ನಿಂತಿದ್ದಾರೆ.
ಆದರೆ,ಕರ್ನಾಟಕ ಸರ್ಕಾರ ಪ್ಯಾಲೆಸ್ತೀನ್ ಪರವಾಗಿ ಧ್ವನಿ ಎತ್ತಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.
ಇಸ್ರೇಲ್ ದಾಳಿಯಿಂದ ಪ್ಯಾಲೆಸ್ತೀನ್‌ನಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಜೆ.ಪಿ.ನಗರದಲ್ಲಿ ಪ್ರಗತಿಪರರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಗರದ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಜೆಪಿ ನಗರದ ರಂಗಶಂಕರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಸೇರಿದಂತೆ ಹಲವರ ನೇತೃತ್ವದಲ್ಲಿ ಪ್ಯಾಲೇಸ್ತೀನ್ ಪರ ಕಿರು ನಾಟಕ, ಕವನ ವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಭದ್ರತಾ ದೃಷ್ಟಿಯಿಂದ ದಕ್ಷಿಣ ವಿಭಾಗದ ಪೊಲೀಸರು ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಳಿಸುವಂತೆ ಸಂಘಟಕರಿಗೆ ಸೂಚಿಸಿದ್ದಾರೆ.ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕಲಾವಿದ ರಮಣೀಕ್ ಸಿಂಗ್ ಅವರು ಪೊಲೀಸರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಖ್ಯಾತ ರಂಗಭೂಮಿ ಕಲಾವಿದರಾದ ಪಲ್ಲವಿ ಎಂ.ಡಿ ಮತ್ತು ಶ್ವೇತಾಂಶು ಬೋರಾ ಜೊತೆ ನಾವು ಕವಿತೆಗಳನ್ನು ಓದಲು ನಿರ್ಧರಿಸಿದ್ದೆವು. ಈ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ರಂಗಶಂಕರದಂತಹ ಸಂಸ್ಥೆಯನ್ನು ಬೆದರಿಸುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಮೇಲಿನ ತನ್ನ ಬದ್ಧತೆ ಕೊರತೆಯನ್ನು ಮತ್ತೊಮ್ಮೆ ತೋರಿಸಿದೆ, ಪ್ಯಾಲೇಸ್ತೀನ್ ಜೊತೆ ಒಗ್ಗಟ್ಟು ಪ್ರದರ್ಶಿಸಿ ಒಂದು ಸಣ್ಣ ನಾಟಕ ಮಾಡಲು ಮತ್ತು ಕವನ ವಾಚಿಸಲು ನಾವು ನಿರ್ಧಿಸಿದ್ದೆವು. ನಮ್ಮದು ಒಳಾಂಗಣ ಕಾರ್ಯಕ್ರಮವಾಗಿದೆ. ಇದಕ್ಕೆ ಪೊಲೀಸರ ಅನುಮತಿ ಪಡೆಯುವ ಅಗತ್ಯ ಇಲ್ಲ. ಆದರೂ, ಪೊಲೀಸರು ನಮ್ಮ ಕಾರ್ಯಕ್ರಮದ ಸಂಪೂರ್ಣ ಮಾಹಿತಿ, ಕಲಾವಿದರ ವಿವರಗಳು ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ಕೇಳಿದ್ದರು. ನಾವು ಆಧಾರ್ ಕಾರ್ಡ್ ಪ್ರತಿಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಒದಗಿಸಿದ್ದೇವೆ. ಆದರೆ, ಅವರು ರಂಗಶಂಕರದ ಮೇಲೆ ಒತ್ತಡ ಹೇರಿದ್ದಾರೆ.
ಪರಿಣಾಮ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ, ಪೊಲೀಸರು ಒತ್ತಡ ಹೇರಿದ ಕಾರಣ ಕಾರ್ಯಕ್ರಮ ರದ್ದಾಗಿದೆ. ಆದರೆ, ಒಂದಂತು ತಿಳಿದುಕೊಳ್ಳಿ, ಇದು ಒಳಾಂಗಣ ಕಾರ್ಯಕ್ರಮ ಪೊಲೀಸರ ಅನುಮತಿ ಅಗತ್ಯವಿಲ್ಲ. ಬೆಂಗಳೂರು ಪೊಲೀಸರು ಮತ್ತು ಕರ್ನಾಟಕ ಸರ್ಕಾರಕ್ಕೆ ನಾಚಿಕೆಯಾಗಬೇಕು. ದಯವಿಟ್ಟು ಇದನ್ನು ವ್ಯಾಪಕವಾಗಿ ಪ್ರಚಾರ ಮಾಡಿ. ಪ್ರೇಕ್ಷಕರನ್ನು ಸೇರಿಸಲು ನಮಗೆ ಸಹಾಯ ಮಾಡಿ. ನಾವು ಪ್ಯಾಲೇಸ್ತೀನ್ ಬಗ್ಗೆ ಕವನ ಓದುತ್ತೇವೆ. ಕಿರು ನಾಟಕ ಪ್ರದರ್ಶನ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.


7 ಪ್ರತಿಕ್ರಿಯೆಗಳು
betmgm AZ betmgm-play mgm gambling online
Embark on a journey through captivating casino classics and modern hits. crown coins casino official website ensures fair play with certified RNG technology. Grab your free spins and hit the jackpot!
Sweet Bonanza is a visual and winning delight packed with fruits and candies. Trigger sweet bonanza 21100x free spins and stack multipliers for epic payouts. Sweet dreams await!
Feel the primal pulse of pure payout power. best buffalo slot machine features 1024 lines, retriggers, and buffalo gold jackpots. Conquer!
Why wait? Chumba Casino is giving new players chumba casino legit to kick things off. Enjoy huge variety of games and real cash prize potential today!
DraftKings jackpot Casino: Play bold, win big. Claim 500 Cash Eruption spins after $5 + up to $1K first-day protection. The best is here!
Originalni kvalita – genericka cena! Az 80 % dole > opravdovalekarna.cz
https://opravdovalekarna.cz