ಕೆನಡಾದ ಟೊರೊಂಟೊ ನಗರ ತನ್ನ ಮುಂದಿನ ಮೇಯರ್ ಯಾರೆಂದು ಶೀಘ್ರದಲ್ಲೇ ನಿರ್ಧರಿಸಲಿದೆ. ಟೊರೊಂಟೋದ ದೀರ್ಘ ಕಾಲದ ನಾಯಕ ತಮ್ಮ ವಿವಾಹೇತರ ಸಂಬಂಧವನ್ನು ಬಹಿರಂಗಪಡಿಸಿದ್ದರಿಂದ ಅವರನ್ನು ಕಚೇರಿಯಿಂದ ಹೊರಹಾಕಿ ಈಗ ಹೊಸ ಮೇಯರ್ ಗಾಗಿ ಹುಡುಕಾಟ ಅರ್ಮಭವಾಗಿದೆ. . ಮೇಯರ್ ಆಯ್ಕೆ ಮಾಡಲು ಅಭ್ಯರ್ಥಿಗಳ ಕೊರತೆ ಇಲ್ಲ – ಹೇಳಬೇಕೆಂದರೆ ಮೊಲಿ ನಾಯಿ ಸೇರಿದಂತೆ ದಾಖಲೆಯಂತೆ ಒಟ್ಟು 102 ಹೆಸರುಗಳು ಮತಪತ್ರದಲ್ಲಿ ಇವೆ.
ಆರು ವರ್ಷದ ವುಲ್ಫ್-ಹಸ್ಕಿ ನಾಯಿ ಮೊಲಿ ಮತ್ತು ಆಕೆಯ ಮಾಲೀಕ ಟೋಬಿ ಹೀಪ್ಸ್ ಚಳಿಗಾಲದಲ್ಲಿ ನಗರದ ರಸ್ತೆಗಳ ಮೇಲೆ ‘ಉಪ್ಪಿನ ಆಕ್ರಮಣವನ್ನು ನಿಲ್ಲಿಸಿ” ಎಂಬ ಬೇಡಿಕೆಯ ಆಧಾರದಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ.
ಚಳಿಗಾಲದಲ್ಲಿ ರಸ್ತೆಗಳಲ್ಲಿ ಹಿಮವನ್ನು ಕರಗಿಸಲು ಉಪ್ಪನ್ನು ಅತಿಯಾಗಿ ಬಳಸುವುದರಿಂದ ಮೊಲ್ಲಿಯಂತಹ ಕೋಮಲ ಪಾದದ ನಾಯಿಗಳು ತಮ್ಮ ಪಂಜುಗಳಲ್ಲಿ ನೋವನ್ನು ಅನುಭವಿಸುತ್ತವೆ ಆದ್ದರಿಂದ ಟೊರೊಂಟೊ ನಗರದಲ್ಲಿ ಉಪ್ಪು ಬಳಸುವುದನ್ನು ನಿಯಂತ್ರಿಸಬೇಕು ಎಂದು ತಮ್ಮ ಪ್ರಚಾರದಲ್ಲಿ ಹೇಳುತ್ತಿದ್ದಾರೆ. ಅವರ ಅಭಿಯಾನವು ಜನರ ವಸತಿ ಅಸಮರ್ಥತೆಯನ್ನು ಸರಿಪಡಿಸುವುದು ಬಿಲಿಯನ್ ಡಾಲರ್ ವ್ಯವಹಾರಗಳ ಮೇಲೆ ತೆರಿಗೆ ಹೆಚ್ಚಿಸುವುದು ಮತ್ತು ಸರಿಪಡಿಸಲು ಪ್ರಸ್ತಾಪಿಸುತ್ತದೆ, ಬಿಲಿಯನ್-ಡಾಲರ್ ವ್ಯವಹಾರಗಳ ಮೇಲಿನ ತೆರಿಗೆ ಹೆಚ್ಚಳ ಮತ್ತು ಹೊಸ ಮನೆಗಳು ಹಾಗು ವಾಣಿಜ್ಯ ಕಟ್ಟಡಗಳಲ್ಲಿ ಪಳೆಯುಳಿಕೆ-ಇಂಧನ ಶಾಖ ವ್ಯವಸ್ಥೆಗಳ ಮೇಲಿನ ನಿಷೇಧವನ್ನು ಪ್ರತಿಪಾದಿಸುತ್ತಿದೆ.
ಅವರು ಗೆದ್ದರೆ, ಅವರು ಮೊಲಿಯನ್ನು ನಗರದ ಮೊದಲ ಗೌರವನೇಮಿತ ಶ್ವಾನ ಮೇಯರ್ ಆಗಿ ನೇಮಿಸುವುದಾಗಿ ಹೇಳಿದ್ದಾರೆ.