ಬೆಂಗಳೂರು,ಮೇ.30-ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಇಂದು ನಡೆಯಬೇಕಾಗಿದ್ದ ಮುಂದೂಡಲಾಗಿದೆ. ಬಿಕಾಂ, ಬಿಸಿಎ ಗಣಿತ ಪರೀಕ್ಷೆಯನ್ನು ಇಂದು ನಡೆಸಲು ತಯಾರಿ ನಡೆಸಲಾಗಿತ್ತು.ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಇಂದಿನ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಬೆಂಗಳೂರು ಉತ್ತರ ವಿವಿಯ ಪ್ರಶ್ನೆ ಪತ್ರಿಕೆ ವಿಭಾಗದ ಕುಲಸಚಿವ ಡಾಮಿನಿಕ್ ತಿಳಿಸಿದ್ದಾರೆ.
ಶೀಘ್ರವೇ ಬಿಕಾಂ, ಬಿಸಿಎ ಗಣಿತ ಪರೀಕ್ಷೆಯ ಮುಂದಿನ ದಿನಾಂಕ ಪ್ರಕಟಿಸಲಾಗುತ್ತದೆ ಎಂದರು.
ಇಂದು ನಿಗದಿಯಾಗಿದ್ದ ಬಿಕಾಂ, ಬಿಸಿಎ ಗಣಿತ ಪರೀಕ್ಷೆ ಬರೆಯಲು ವಿವಿಗೆ ಹಾಗೂ ವಿವಿಧ ಅಧೀನದ ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ದು ಪರೀಕ್ಷೆ ಮುಂದೂಡಿಕೆ ಮಾಡಲಾಗಿದ್ದರಿಂದ, ಪರೀಕ್ಷಾ ಕೇಂದ್ರದಿಂದ ವಾಪಾಸ್ ಮರಳುವಂತಾಯಿತು.