ಬೆಂಗಳೂರು,
ಅಮೃತಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಖಾಸಗಿ ವಿಲ್ಲಾ ಇದೀಗ ವಿವಾದದ ಕೇಂದ್ರವಾಗಿ ಪರಿಣಮಿಸಿದೆ. ಜಕ್ಕೂರು ಬಡಾವಣೆಯಲ್ಲಿ ಇರುವ ಈ ವಿಲ್ಲಾ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.
ಪೊಲೀಸ್ ಅಧಿಕಾರಿ ಈ ವಿಲ್ಲಾವನ್ನು ಬಾಡಿಗೆ ನೀಡಲು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ್ದಾರೆ. ಈ ಮಾಹಿತಿಯನ್ನು ಅರಿತ ಪ್ರಕರಣದ ಆರೋಪಿ ದುಬಾರಿ ಬಾಡಿಗೆ ನೀಡಿ ಈ ವಿಲ್ಲಾ ಪಡೆದುಕೊಂಡಿದ್ದಾನೆ. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗೆ ಸೇರಿದ ಈ ವಿಲ್ಲಾದ ಮೇಲೆ ಇತರೆ ಪೊಲೀಸ್ ಸಿಬ್ಬಂದಿ ಕಣ್ಣು ಹಾಕುವುದಿಲ್ಲ ಈ ಬಂಗಲೆಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದಿಲ್ಲ ಎಂದು ಲೆಕ್ಕಾಚಾರ ಹಾಕಿ ಆರೋಪಿ ಇದನ್ನು ಪಡೆದುಕೊಂಡಿದ್ದಾನೆ.
ಇದೀಗ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂದಿತನಾಗಿರುವ ಪ್ರಮುಖ ಆರೋಪಿಗೆ ನಿಖಿಲ್ ಈ ಬಂಗಲೆಯಲ್ಲಿ ಹಲವಾರು ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಇಲ್ಲಿ ಎಗ್ಗಿಲ್ಲದೆ ಡ್ರಗ್ಸ್ ಸರಬರಾಜು ಮಾಡಲಾಗುತ್ತಿತ್ತು ಹುಡುಗಿಯರು ಕೂಡ ಇಲ್ಲಿ ಲಭ್ಯವಾಗುತ್ತಿದ್ದರು ಇದನ್ನು ತಿಳಿದ ಅನೇಕ ಮಂದಿ ಶ್ರೀಮಂತರು ಮತ್ತು ಪ್ರಭಾವಿಗಳು ಈ ವಿಲ್ಲಾದಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಹಾಜರಾಗುತ್ತಿದ್ದರು. ಈಗ ತನಿಖಾ ತಂಡ ಎಲ್ಲರ ವಿವರಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದೆ.
ಇನ್ನು ಈ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಬಂಧಿತ ಆರೋಪಿ ನಿಖಿಲ್ ಕಾರ್ಯ ವೈಖರಿಯೇ ಅತ್ಯಂತ ಕುತೂಹಲಕಾರಿಯಾಗಿದೆ ಈ ವಿಲ್ಲಾದಲಿನ ಪಾರ್ಟಿಗಳಿಗೆ ಆತ ಶುಗರ್ ಎಂದು ಹೆಸರಿಟ್ಟಿದ್ದ. ಈ ವಿಲ್ಲಾದಲ್ಲಿ ಶುಗರ್ ಪಾರ್ಟಿಗಳನ್ನು ಆಯೋಜಿಸಿ ಯುವತಿಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಈ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ ಹುಡುಗಿಯರಿಗೆ ಶುಗರ್ ಬೇಬಿ ಮತ್ತು ಪುರುಷರಿಗೆ ಶುಗರ್ ಡ್ಯಾಡಿ ಎಂದು ಕರೆಯಲಾಗುತ್ತಿತ್ತು.
ಆರೋಪಿ ನಿಖಿಲ್ ಆಯೋಜಿಸುತ್ತಿದ್ದ ಶುಗರ್ ಪಾರ್ಟಿಗಳಲ್ಲಿ ಭಾಗವಹಿಸಿದ ಪ್ರಭಾವಿಗಳ ಪಟ್ಟಿಯನ್ನು ತನಿಖಾಧಿಕಾರಿಗಳು ಸಿದ್ದ ಪಡಿಸತೊಡಗಿದ್ದಾರೆ.ಈ ನಡುವೆ ಆರೋಪಿ ನಿಖಿಲ್ ಬಂಧಿತನಾಗುತ್ತಿದ್ದಂತೆ ವಿಲ್ಲಾ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ಶುಗರ್ ಡ್ಯಾಡಿಗಳಿಗೆ ಆತಂಕ ಶುರುವಾಗಿದೆ.
ಇಡೀ ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದ್ದು,ಶುಗರ್ ಬೇಬಿ ಮತ್ತು ಶುಗರ್ ಡ್ಯಾಡಿ ಎಂಬ ಕಲ್ಪನೆಯಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು. 25 ವರ್ಷದೊಳಗಿನ ಯುವತಿಯರಿಗೆ ಶುಗರ್ ಬೇಬಿ ಮತ್ತು 45 ವರ್ಷ ಮೇಲ್ಪಟ್ಟ ಪುರುಷರಿಗೆ ಶುಗರ್ ಡ್ಯಾಡಿ ಎಂದು ಪಾಸ್‌ವರ್ಡ್ ನೀಡಲಾಗುತ್ತಿತ್ತು.
ನಿಖಿಲ್ ಆಯೋಜನೆ ಮಾಡುತ್ತಿದ್ದ ಪಾರ್ಟಿಗೆ ಹಲವು ಉದ್ಯಮಿಗಳು, ಪ್ರಭಾವಿಗಳು ಹಿರಿಯ ಅಧಿಕಾರಿಗಳು ಭಾಗಿಯಾಗುತ್ತಿದ್ದರು ಎಂದು ಹೇಳಲಾಗುತ್ತಿದೆ.
ಮೋಜು ಮಸ್ತಿ ಹಣಕ್ಕಾಗಿ ಕೆಲ ಯುವತಿಯರು ಶುಗರ್ ಡ್ಯಾಡಿ ಪಾರ್ಟಿಯಲ್ಲಿ ಭಾಗಿಯಾಗಿತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಪಾರ್ಟಿಗೆ ಬರುತ್ತಿದ್ದ ಶುಗರ್ ಡ್ಯಾಡಿಗಳು ತಮ್ಮ ಹೆಸರು ಹೊರಗೆ ಬರಲಿದೆ ಎಂದು ಆತಂಕಗೊಂಡಿದ್ದಾರೆ.
ಜಕ್ಕೂರಿನ ವಿಲ್ಲಾದಲ್ಲಿ ನಡೆಯುವ ಪಾರ್ಟಿಗೆ ಯುವತಿಯರನ್ನು ಕರೆದುಕೊಂಡು ಬರಲು ಯುವಕರಿಗೆ ನಿಖಿಲ್ ಹಣ ಕೊಡುತ್ತಿದ್ದನು. ಬೇರೆ ರಾಜ್ಯದ ಯುವತಿಯರನ್ನು ನಿಖಿಲ್ ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದನು. ಆಪ್ಟರ್ ಪಾರ್ಟಿಗೆ ಒಪ್ಪಿಕೊಳ್ಳುವ ಯುವತಿಯರಿಗೆ ಶಾಪಿಂಗ್ ಮಾಡಲು ಹಣ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ನಿಖಿಲ್ ಮಾಡುತ್ತಿದ್ದನು. ಪಾರ್ಟಿಗೆ ಒಪ್ಪಿಕೊಳ್ಳದ ಯುವತಿಯರ ಪಾನೀಯದಲ್ಲಿ ನಶೆ ಪದಾರ್ಥ ಸೇರಿಸಿ ಅತ್ಯಾಚಾರ ಮಾಡಿಸಿ ವಿಡಿಯೋ-ಫೋಟೋ ತೆಗೆದುಕೊಳ್ಳುತ್ತಿದ್ದನು. ನಂತರ ಫೋಟೋ-ವಿಡಿಯೋ ತೋರಿಸಿ ನಿಖಿಲ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು. ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿಯೂ ನಿಖಿಲ್ ಪಾರ್ಟಿ ಅಯೋಜನೆ ಮಾಡುತ್ತಿದ್ದ ಎಂಬ ಮಾಹಿತಿ ದೊರೆತಿದ್ದು,ತನಿಖೆಯನ್ನು ಎಲ್ಲಾ ಆಯಾಮಗಳಲ್ಲಿ ಕೈಗೊಳ್ಳಲಾಗಿದೆ.

