ಬೆಂಗಳೂರು, ಡಿ.16- ಉದ್ಯಮಿಯೊಂದಿಗೆ ಸಲುಗೆ ಬೆಳೆಸಿಕೊಂಡು ಅವರಿಂದ ಹಣ ಪೀಕಲು ಮಹಿಳೆಯನ್ನು ಮುಂದಿಟ್ಟುಕೊಂಡು ಹನಿಟ್ರಾಪ್ (Honey Trap) ಸಂಚು ರೂಪಿಸಿದ್ದ ದಂಪತಿ ಸೇರಿದಂತೆ ಐದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಖಲೀಂ-ಸಭಾ ದಂಪತಿ ಹಾಗೂ ಒಬೇದ್, ರಕೀಂ ಹಾಗೂ ಅತಿಕ್. ಈ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿ ಅತಾವುಲ್ಲಾಗೆ ತನ್ನ ಪತ್ನಿ ಸಭಾಳನ್ನು ವಿಧವೆ ಎಂದು ಪರಿಚಯ ಮಾಡಿಸಿಕೊಟ್ಟು ಆಕೆಯನ್ನು ನೋಡಿಕೊಳ್ಳುವಂತೆ ಖಲೀಂ ಹೇಳಿದ್ದ.
ಅದರಂತೆ ಸಭಾ ಅವರು ಅತಾವುಲ್ಲಾ ಅವರ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು.ಅಷ್ಟೇ ಅಲ್ಲ ಅತಾವುಲ್ಲಾ ಜೊತೆ ಸಲುಗೆ ಕೂಡಾ ಏರ್ಪಟ್ಟು ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿತ್ತು.
ಕೆಲ ದಿನಗಳ ನಂತರ ರಾಜರಾಜೇಶ್ವರಿನಗರದಲ್ಲಿ ರೂಮ್ ಬುಕ್ ಮಾಡಲು ಆಧಾರ್ ಕಾರ್ಡ್ ಜೊತೆ ಬಾ ಎಂದು ಅತೀವುಲ್ಲಾನನ್ನು ಕರೆದಿದ್ದಾಳೆ.
ಅದರಂತೆ, ರಾಜರಾಜೇಶ್ವರಿ ನಗರಕ್ಕೆ ಬಂದಿದ್ದ ಅತಾವುಲ್ಲಾ, ರೂಮ್ ಬುಕ್ ಮಾಡಿ ಒಳಗಡೆ ಹೋದ ಕೆಲ ಹೊತ್ತಲ್ಲೇ ಖಲೀಮ್, ರಕೀಬ್, ಅತೀಕ್ ಲಗ್ಗೆ ಇಟ್ಟಿದ್ದಾರೆ.
ಅತಾವುಲ್ಲಾ ನನ್ನು ಬೆದರಿಸಿ 6 ಲಕ್ಷ ರೂ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದರೆ ಈ ವಿಚಾರ ನಿಮ್ಮ ಮನೆಯವರಿಗೆ ಹೇಳುತ್ತೇವೆ ಅಂತ ಬೆದರಿಕೆ ಹಾಕುತ್ತಾರೆ.
ಅಷ್ಟರಲ್ಲೇ ಮಾಹಿತಿ ತಿಳಿದು ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೇ ರೀತಿ ಹಲವರಿಗೆ ಸುಲಿಗೆ ಗ್ಯಾಂಗ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
1 ಟಿಪ್ಪಣಿ
озвучивание http://www.ozvuchivanie-pomeshhenij.ru .