ಚಿಕ್ಕಮಗಳೂರು, ಫೆ.24- ಮಲೆನಾಡಿನ ಸೆರಗು ಚಿಕ್ಕಮಗಳೂರಿನಲ್ಲಿ ಅಕ್ರಮ ಶಸ್ತ್ರಾಸ್ತ್ರ ವಹಿವಾಟು ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು
ಪ್ರತ್ಯೇಕ ಆರು ಪ್ರಕರಣಗಳಲ್ಲಿ ಬಂದೂಕು ದುರಸ್ತಿ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಪರವಾನಗಿ ಇಲ್ಲದ 47 ಅಕ್ರಮ ಬಂದೂಕು ಹಾಗೂ 2 ರಿವಾಲ್ವಾರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕೊಪ್ಪ ತಾಲೂಕು ಅಡುಗೆ ಬೈಲ್ ಗ್ರಾಮದ ನೇತ್ರಕೊಂಡ ಕೂಲಿ ಲೈನ್ ನ ಸದಾಶಿವ ಆಚಾರಿ, ಮೂಡಿಗೆರೆ ತಾಲೂಕು ಕೆಳಗೂರು ಗ್ರಾಮದ ಸುಧಾಕರ ಆಚಾರ್, ಎನ್ ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರು ರಂಬಾಪುರಿ ಮಠ ರಸ್ತೆಯ ರಾಮಚಂದ್ರ ಆಚಾರ್ ನನ್ನು ಬಂಧಿಸಿದ್ದಾರೆ.
ಈ ಮೂವರಿಂದ 47 ಬಂದೂಕು ಎರಡು ರಿವಾಲ್ವರ್, 24 ಬಂದೂಕು ನಳಿಕೆ, 22 ರೈಫಲ್ ಗುಂಡು, 40 ಭಕ್ಷಟ್ ಗುಂಡು, 15 ಕಾರ್ಟ್ರಿಡ್ಜೆಸ್ ಮತ್ತು ಏಳು ಮರದ ತುಂಡುಗಳನ್ನು ವಶಪಡಿಸಿಕೊಳ್ಳ ಲಾಗಿದೆ.
ಇತ್ತೀಚಿಗೆ ಅನಧಿಕೃತ ಬಂದೂಕುಗಳಿಂದ ಶೂಟ್ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಉಮಾ ಪ್ರಶಾಂತ್ ಮಲೆನಾಡಿನಲ್ಲಿ ಶಿಕಾರಿಗೆ ಉಪಯೋಗಿಸುವ ಅಕ್ರಮ ಬಂದೂಕುಗಳಿಂದ ಮಾನವನ ಪ್ರಾಣ ತೆಗೆಯಲು ಮುಂದಾಗಿರುವುದನ್ನು ಅರಿತು ಬಂದೂಕುಗಳ ಪರಿಶೀಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಮುಖ್ಯ ಅಧಿಕಾರಿಗಳ ಸೂಚನೆ ಮೇರೆಗೆ ಬಾಳೆಹೊನ್ನೂರು ಹಾಗೂ ಬಾಳೂರು ಪೊಲೀಸರು ತನಿಖೆ ನಡೆಸಿ ಸದಾಶಿವ ಆಚಾರ್ಯ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತ ನೀಡಿದ ಸುಳಿವು ಆಧರಿಸಿ ಕಳಸ ಮತ್ತು ಎನ್ ಆರ್ ಪುರ ಠಾಣಾ ವ್ಯಾಪ್ತಿಯಲ್ಲಿ ಮೂರು ಪರವಾನಗಿ ಇಲ್ಲದ ಬಂದೂಕು ವಶಪಡಿಸಿಕೊಳ್ಳಲಾಗಿದೆ.
Previous ArticleBPL ಕಾರ್ಡ್ ಗೆ 10 ಕಿಲೋ ಅಕ್ಕಿ Free
Next Article ಸಿದ್ದರಾಮಯ್ಯ ಅವರನ್ನು ಯಾಕೆ ಬಂಧಿಸಲಿಲ್ಲ?