Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಚುನಾವಣೆಯಲ್ಲಿ ವಲಸಿಗರ ದರ್ಬಾರ್ | Lok Sabha 2024
    Trending

    ಚುನಾವಣೆಯಲ್ಲಿ ವಲಸಿಗರ ದರ್ಬಾರ್ | Lok Sabha 2024

    vartha chakraBy vartha chakraಏಪ್ರಿಲ್ 5, 2024Updated:ಏಪ್ರಿಲ್ 5, 20245 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಏ.5: ದೇಶದ ಗಮನ ಸೆಳೆದಿರುವ ಕರ್ನಾಟಕದ ಲೋಕಸಭೆ ಯ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತದಾರರಲ್ಲದ ಬೇರೆ ಜಿಲ್ಲೆಯ ವಲಸಿಗರು ಸ್ಪರ್ಧೆ ಮಾಡುತ್ತಿರುವುದು ವಿಶೇಷವಾಗಿದೆ.
    ರಾಜ್ಯದ 28 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಮೂರು ಪಕ್ಷದಿಂದ ಹೊರಗಿನವರಿಗೆ ಮನ್ನಣೆ ನೀಡಲಾಗಿದೆ. ಸೋಲು ಗೆಲುವಿನ ಲೆಕ್ಕಾಚಾರ, ಜಾತಿವಾರು ಸಮೀಕರಣ,ನಾಯಕರ ನಡುವಿನ ವೈಮನಸ್ಯ ಸೇರಿದಂತೆ ಹಲವಾರು ಕಾರಣಗಳನ್ನು ಮುಂದೊಡ್ಡಿ ಎಲ್ಲಾ ಪಕ್ಷಗಳು ವಲಸಿಗರಿಗೆ ಮನ್ನಣೆ ನೀಡಿವೆ.

    ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟಿಲ್ಲದವರು ಅಭ್ಯರ್ಥಿಗಳಾಗಿ ಬಂದಿರುವ ಕುರಿತಂತೆ ಸ್ಥಳೀಯರಲ್ಲಿ ಆಕ್ರೋಶ ಇದ್ದರೂ ರಾಜಕೀಯ ಪಕ್ಷಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ.
    ಈ ಕಾರಣಗಳಿಂದಾಗಿ ಹೊರಗಿನಿಂದ ಬಂದು ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಒಳ ಏಟು ಎಷ್ಟರ ಮಟ್ಟಿಗೆ ಬೀಳಲಿದೆ ಎಂಬುದು ಚುನಾವಣಾ ಕಣವೇ ನಿರ್ಧರಿಸಲಿದೆ.
    ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಧಾರವಾಡ ಜಿಲ್ಲೆಯ ಜಗದೀಶ್ ಶೆಟ್ಟ‌ರ್ ಅವರನ್ನು ಬೆಳಗಾವಿಯಿಂದ ಬಿಜೆಪಿ ಕಣಕ್ಕೆ ಇಳಿಸಿದೆ.

    ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರದಿಂದ ಸ್ಪರ್ಧಿಸುತ್ತಿದ್ದಾರೆ. ಹಿಂದೆ ಒಮ್ಮೆ ಈ ಕ್ಷೇತ್ರ ವ್ಯಾಪ್ತಿಯ ಯಶವಂತಪುರದಿಂದ ಶಾಸಕಿಯಾಗಿದ್ದರು. ಆ ನಂತರ ರಾಜಾಜಿನಗರದಲ್ಲಿ ಸೋತಿದ್ದರು. ಅವರನ್ನು ಬಿಜೆಪಿ ವರಿಷ್ಠರು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಳುಹಿಸಿದ್ದರು. ಇದೀಗ ಬೆಂಗಳೂರು ಉತ್ತರಕ್ಕೆ ನೀಡಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರೊ. ಎಂ.ವಿ. . ರಾಜೀವ್‌ಗೌಡ ಅವರು ಸಹ ಕೋಲಾರ ಜಿಲ್ಲೆಗೆ ಸೇರಿದವರು. ಬೆಂಗಳೂರಿನಲ್ಲಿ ಅವರ ಮನೆ ಸಹ ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಸಿ.ಎನ್. ಮಂಜುನಾಥ್ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಸೇರಿದವರು.

    ಮಂಡ್ಯಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಹಅಸನ ಜಿಲ್ಲೆಯವರು, ರಾಜಕೀಯವಾಗಿ ರಾಮನಗರವನ್ನು ಕಾರ್ಯಕ್ಷೇತ್ರ ಮಾಡಿಕೊಂಡಿದ್ದಾರೆ.
    ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಬೆಂಗಳೂರು ನಗರಕ್ಕೆ ಸೇರಿದವರು. ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ತವರು ಅದೇ ಜಿಲ್ಲೆಯೇ. ಆದರೆ ಅವರ ಪತಿ ಶಿವರಾಜಕುಮಾರ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಗೆ ಸೇರಿದವರು. ಆದರೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

    ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಹೊರಗಿನವರಿಗೆ ಮಣೆ ಹಾಕಿವೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಬಿ.ಎನ್. ಚಂದ್ರಪ್ಪ ಅವರು ಮೂಡಿಗೆರೆಯವರು. ಅವರು ಒಮ್ಮೆ ಚಿತ್ರದುರ್ಗ ಕ್ಷೇತ್ರದಿಂದ ಸಂಸದರಾಗಿದ್ದಾರೆ, ಒಮ್ಮೆ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ದೂರದ ಬಾಗಲಕೋಟೆ ಜಿಲ್ಲೆಯವರು. ಹಿಂದೆಯೂ ಬೆಂಗಳೂರು ಹೊರವಲಯದ ಆನೇಕಲ್‌ನ ನಾರಾಯಣಸ್ವಾಮಿ ಅವರನ್ನು ಬಿಜೆಪಿ ಈ ಕ್ಷೇತ್ರದಿಂದ ನಿಲ್ಲಿಸಿತ್ತು.
    ಚಿಕ್ಕೋಡಿಯಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಪ್ರಿಯಾಂಕ ಬೆಳಗಾವಿ ಜಿಲ್ಲೆಯ ಗೋಕಾಕದವರಾದರೂ ಸಹ ಆ ಕ್ಷೇತ್ರ ವ್ಯಾಪ್ತಿಗೆ ಸೇರಿದವರಲ್ಲ.

    ಬಾಗಲಕೋಟೆಯ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಶಿವಾನಂದಪಾಟೀಲ್ ಅವರು ವಿಜಯಪುರ ಜಿಲ್ಲೆಗೆ ಸೇರಿದವರು.
    ತುಮಕೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿರುವ ವಿ. ಸೋಮಣ್ಣ ಅವರು ಮೂಲತಃ ಕನಕಪುರದವರು. ಆದರೆ ಬೆಂಗಳೂರಿನಲ್ಲಿ ನೆಲೆಸಿ ಇಲ್ಲಿಂದ ಬಿಬಿಎಂಪಿ ಸದಸ್ಯ ಹಾಗೂ ಶಾಸಕರಾಗಿದ್ದಾರೆ. ಕೋಲಾರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕೆ.ವಿ. ಗೌತಮ್ ಅವರು ಬೆಂಗಳೂರು ನಗರದವರು. ಇಲ್ಲಿಯೇ ಪಕ್ಷದ ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷರಾಗಿದ್ದಾರೆ.

    lok sabha lok sabha 2024 ಉಡುಪಿ ಕಾಂಗ್ರೆಸ್ ಚುನಾವಣೆ ಧಾರವಾಡ ರಾಜಕೀಯ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಗಿಡ ನೆಟ್ಟು ಪ್ರಚಾರ ಆರಂಭಿಸಿದ ಮನ್ಸೂರ್ ಅಲಿಖಾನ್ | Mansoor Ali Khan
    Next Article ಮಹಿಳಾ ಮತಗಳ ಮೇಲೆ ಬೋಸ್-ಬಾಲಣ್ಣ ಕಣ್ಣು (ಚಾಮರಾಜನಗರ ಕ್ಷೇತ್ರ) | Chamaraja Nagar
    vartha chakra
    • Website

    Related Posts

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    ಜೂನ್ 20, 2025

    ಪ್ರಿಯಾಂಕ್ ಖರ್ಗೆ ಆಟ ಆಡಲು ವಿದೇಶಕ್ಕೆ ಹೋದರಾ..!

    ಜೂನ್ 19, 2025

    5 ಪ್ರತಿಕ್ರಿಯೆಗಳು

    1. fbf2b on ಜೂನ್ 7, 2025 3:45 ಫೂರ್ವಾಹ್ನ

      clomiphene generic cost can you buy clomid prices clomiphene prescription cost clomiphene price can i get clomiphene for sale cost of cheap clomiphene prices clomid one fallopian tube

      Reply
    2. cialis daily use discount on ಜೂನ್ 9, 2025 3:36 ಅಪರಾಹ್ನ

      More articles like this would frame the blogosphere richer.

      Reply
    3. can i take flagyl and cipro together on ಜೂನ್ 11, 2025 9:50 ಫೂರ್ವಾಹ್ನ

      This is the type of advise I find helpful.

      Reply
    4. nau0d on ಜೂನ್ 18, 2025 7:11 ಅಪರಾಹ್ನ

      generic propranolol – buy methotrexate online cheap methotrexate 5mg pill

      Reply
    5. ndx3k on ಜೂನ್ 21, 2025 4:42 ಅಪರಾಹ್ನ

      amoxicillin usa – buy generic ipratropium combivent 100 mcg oral

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    ಬಿಜೆಪಿ ನಾಯಕರಿಗೆ ಜಮೀರ್ ಅಹಮದ್ ಖಾನ್ ತಿರುಗೇಟು ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • qriud ರಲ್ಲಿ ಕೋಮು ಗಲಭೆಗೆ Siddaramaiah ಪ್ರಚೋದನೆ?
    • ol4f4 ರಲ್ಲಿ ರಾಜ್ಯದಲ್ಲಿ ಮುಂದಿನ ವರ್ಷವೂ ಬರ | Drought
    • Waynescief ರಲ್ಲಿ ವಿಶ್ವ ಮಧುಮೇಹ ದಿನಾಚರಣೆ, ಸಾರ್ವಜನಿಕರಿಗೆ ಅರಿವಿನ ಜಾತ
    Latest Kannada News

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ನಿತ್ಯಾನಂದನ ಕೈಲಾಸ ಎಲ್ಲಿದೆ ಗೊತ್ತಾ?#nithyananda #kailasa #heaven #australia #varthachakra #yoga
    Subscribe