ಬಾಲಿವುಡ್‌ನ ಪವರ್ ಫುಲ್ ಜೋಡಿಗಳಲ್ಲಿ ಒಂದಾದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿಗಳು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ ಮತ್ತು ತಮ್ಮ ಅಭಿಮಾನಿಗಳೊಂದಿಗೆ ಸಂತೋಷದ ಕ್ಷಣವನ್ನು ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಏಪ್ರಿಲ್ 2016 ರಲ್ಲಿ, ಅವರು ವಿವಾಹವಾದರು. ವಿವಾಹವಾಗಿ ಆರು ವರ್ಷಗಳು ಕಳೆದಿದ್ದರೂ ಹಲವಾರು ಗರ್ಭಧಾರಣೆಯ ವದಂತಿಗಳನ್ನು ತಳ್ಳಿಹಾಕಲಾಗಿತ್ತು ರಾಝ್ ನಟಿ ಬಿಪಾಶಾ ಬಸು ಮೊದಲ ಬಾರಿಗೆ ತಾಯ್ತನವನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ. ವರದಿಯ ಪ್ರಕಾರ, ಅವರು ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ ಮಗುವನ್ನು ಸ್ವಾಗತಿಸಲಿದ್ದಾರೆ. ಬಿಪಾಶಾ ಮತ್ತು ಕರಣ್ ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ ಆದರೆ ದಂಪತಿಗಳ ಕುರಿತು ನಂಬಲರ್ಹ ಮೂಲವೊಂದು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಮದುವೆಯಾಗಿ ಆರು ವರ್ಷಗಳು ಕಳೆದಿವೆ ಮತ್ತು ಮಾಧ್ಯಮ ವರದಿಗಳ ಪ್ರಕಾರ, ಮಗುವಿನ ಬಗ್ಗೆ ಒಳ್ಳೆಯ ಸುದ್ದಿ ಅವರಿಗೆ ಶೀಘ್ರದಲ್ಲೇ ಸಿಗಲಿದೆ.
Previous Articleಸಚಿವ ಸುಧಾಕರ್ ಕಾರ್ಯಕ್ರಮದಲ್ಲಿ ಡ್ಯಾಗರ್ ಹಿಡಿದಿದ್ದ ವ್ಯಕ್ತಿ ಬಂಧನ
Next Article ಪುಸ್ತಕ ಬರೆಯಲಿದ್ದಾರೆ ಶ್ವೇತಾ ಶ್ರೀವಾಸ್ತವ್