ನವದೆಹಲಿ: ದೇಶದಲ್ಲಿನ ವಿದ್ಯುತ್ ಅಭಾವ ನೀಗಿಸುವ ಸಂಬಂಧ ವಿದೇಶಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ದುಬಾರಿ ಬೆಲೆ ತೆರಬೇಕಾಗಿರುವ ಕಾರಣ ಅದರ ವೆಚ್ಚ ಪರೋಕ್ಷವಾಗಿ ಬಳಕೆದಾರರ ಮೇಲೆ ಬೀಳಲಿದೆ.
ಎನ್ ಟಿ ಪಿ ಸಿ ಸೇರಿದಂತೆ ಪ್ರಮುಖ ವಿದ್ಯುತ್ ಸ್ಥಾವರಗಳಿಗೆ ಗುಣಮಟ್ಟದ ಕಲ್ಲಿದ್ದಲು ಅಗತ್ಯವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಳ್ಳಲು ತೀರ್ಮಾನಿಸಿದೆ.
ಕೊರೋನಾದ ಬಳಿಕ ಆರ್ಥಿಕ ಚಟುವಟಿಕೆ ವೇಗ ಪಡೆಯುತ್ತಿದ್ದು ವಿದ್ಯುತ್ ಬಳಕೆ ಹೆಚ್ಚಾಗಿದೆ. ಇದನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಈ ಸಾಹಸಕ್ಕೆ ಮುಂದಾಗಿದೆ. ದುಬಾರಿ ಕಲ್ಲಿದ್ದಲು ಖರೀದಿಯಿಂದ ಬಳಕೆದಾರರ ಮೇಲೆ 50ರಿಂದ 80 ಪೈಸೆ ಹೊರೆ ಬೀಳಲಿದೆ. ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಇದು ಜಾರಿಗೆ ಬರಲಿದೆ.
ಜನಸಾಮಾನ್ಯರಿಗೆ ಮತ್ತೆ ಶಾಕ್: ಕೇಂದ್ರದಿಂದ ವಿದ್ಯುತ್ ದರ ಹೆಚ್ಚಳ ಮುನ್ಸೂಚನೆ
Previous Articleಗ್ಯಾಂಗ್ ರೇಪ್ : ನಾಲ್ವರು ರೈಲ್ವೆ ಸಿಬ್ಬಂದಿ ಸೆರೆ
Next Article ಬಾಂಗ್ಲಾ ಪ್ರಜೆಗಳ ಬಂಧನ