ಬೆಂಗಳೂರು,ಜು.23-ದಕ್ಷಿಣ ಭಾಗಕ್ಕೆ ಡಾನ್ ಅಗಲು ಹೊರಟಿದ್ದ ಕುಖ್ಯಾತ ರೌಡಿ ಕುಳ್ಳು ರಿಜ್ವಾನ್ ಸಹಚರರಿಂದ ಯುವಕನೊಬ್ಬನನ್ನು ಭಯಾನಕವಾಗಿ ಕೊಲೆಗೈದು ಘಟನೆ ಬೆಳಕಿಗೆ ಬಂದಿದೆ.
ಕೆಂಗೇರಿಯ ನೈಸ್ ರಸ್ತೆಯ ಕೆಳಸೇತುವೆಯ ಕೋಣನಸಂದ್ರ ಬಳಿ ಹುಟ್ಟುಹಬ್ಬದ ದಿನವೇ ಕಳೆದ ಜು.16ರಂದು ಯುವಕನನ್ನು ಯುವಕನೊಬ್ಬನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಭೀಕರವಾಗಿ ಕೊಲೆ ಮಾಡಲಾಗಿದ್ದು ತನಿಖೆಯ ವೇಳೆ ಕುಖ್ಯಾತ ರೌಡಿ ಕುಳ್ಳು ರಿಜ್ವಾನ್ ಸಹಚರರಿಂದ ಕೃತ್ಯ ನಡೆದಿರುವುದು ಕಂಡುಬಂದಿದೆ.
ಹೆಮ್ಮಿಗೆಪುರದ ಗೊಲ್ಲಹಳ್ಳಿ ನಿವಾಸಿ ಹೇಮಂತ್ ಕುಮಾರ್ ಅಲಿಯಾಸ್ ದಿಲೀಪ್ (26) ಕೊಲೆಗೈದಿರುವುದು ಭೂಗತ ಲೋಕದಲ್ಲಿ ಆಟ್ಟಹಾಸ ಮೆರೆಯಲು ನಡೆದಿರುವುದು ಗೊತ್ತಾಗಿದೆ.
ಹೇಮಂತ್ ಮತ್ತು ಆತನ ಮೂವರು ಗೆಳೆಯರು ಸೇರಿ ಪಾರ್ಟಿ ಮಾಡುತ್ತಿದ್ದಾಗ ಮಾತಿನ ವೇಳೆ ರೌಡಿಜಂ ವಿಚಾರ ಬಂದಾಗ ಯಾವ ರೌಡಿಗಳು ಏನು ಇಲ್ಲಾ ಈಗ ಎಂದಿದ್ದ ಹೇಮಂತ್ ಇದನ್ನು ಕೇಳಿದ ಸ್ಥಳದಲ್ಲಿದ್ದ ಕುಳ್ಳು ರಿಜ್ವಾನ್ ನ ಶಿಷ್ಯರು ಕೋಪ ಗೊಂಡಿದ್ದರು.
ಪಾರ್ಟಿ ಮುಗಿಸಿ ಹೊರಬರುತ್ತಿದ್ದಾಗ ಮತ್ತೆ ಕರೆಸಿ ನಮ್ಮ ಬಾಸ್ ಗೊತ್ತಿಲ್ವಾ ಎಂದು ಕೇಳಿದ್ದಕ್ಕೆ ಯಾವ ಬಾಸ್ ನನಗೆ ಯಾರು ಗೊತ್ತಿಲ್ಲಾ ಎಂದಿದ್ದ ಹೇಮಂತ್. ನಮ್ ಬಾಸ್ ನಮ್ಮ ಡಾನ್ ಕುಳ್ಳು ರಿಜ್ವಾನ್ ಗೊತ್ತಿಲ್ವಾ? ಎಂದು ಪ್ರಶ್ನೆ ಮಾಡಿದ್ದರು.
ಗೊತ್ತಿಲ್ಲಾ ಎಂದು ಕೂಗಾಡಿದ್ದಾಗ ಮಚ್ಚಿನಿಂದ ಏಕಾಏಕಿ ದಾಳಿ ನಡೆಸಿ ಮುಖದ ಗುರುತು ಸಿಗದಂತೆ ನೂರಕ್ಕು ಹೆಚ್ಚು ಬಾರಿ ಮಚ್ಚಿನಲ್ಲಿ ಹೊಡೆದು ಪರಾರಿಯಾಗಿದ್ದರು.
ಕೊಲೆ ನಡೆಸಿ ಕೊಂದ ವಿಡಿಯೋ ಚಿತ್ರಿಕರಿಸಿದ್ದ ಅರೋಪಿಗಳು, ಬಾಸ್ ನಿಮ್ಮ ಬಗ್ಗೆ ಮಾತನಾಡಿದ್ದು ಹೊಡೆದು ಹಾಕಿದ್ವಿ ನೋಡಿ ಎಂದು ರೌಡಿ ಕುಳ್ಳುಗೆ ವಿಡಿಯೋ ಕಳುಹಿಸಿದ್ದರು.
ಕೊಲೆಯ ವಿಕೃತಿ ನೋಡಿದರೆ ಮುಖವನ್ನು ಕಲಸಿ ಕೊನೆಯದಾಗಿ ನೋಡಲು ಅಸಾಧ್ಯವಾಗುವಂತೆ ಕ್ರೂರವಾಗಿ ಮಾಡಲಾಗಿತ್ತು.
ಪ್ರಕರಣ ದಾಖಲಿಸಿ ಕೆಂಗೇರಿ ಪೊಲೀಸರ ತನಿಖೆ ವೇಳೆ ಹೇಮಂತ್ ಜೊತೆ ಪಾರ್ಟಿ ಮಾಡಿದ್ದವರ ಮೇಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರ ಪಾತ್ರ ಇಲ್ಲದಿರುವುದು ಕಂಡು ಬಂದಿತ್ತು.
ಅವ್ರೆ ಬೇರೆ ಯಾರನ್ನೊ ಕರೆಸಿ ಹೊಡೆಸಿರಬಹುದು ಕುಡಿದಾಗ ನಶೆಯಲ್ಲಿ ಗಲಾಟೆ ಅಗಿರಬಹುದು ಎನ್ನಲಾಗಿತ್ತು.
ಆದರೆ ಕೊಲೆ ತನಿಖೆ ನಡೆಯುತ್ತಿರುವಾಗ ಕೆಂಪೇಗೌಡ ನಗರ ಪೊಲೀಸರು ಶಿವಮೊಗ್ಗದಲ್ಲಿ ಕುಳ್ಳು ರಿಜ್ವಾನ್ ಬಂಧಿಸಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುವಾಗ ವಿಡಿಯೋ ಪತ್ತೆಯಾಗಿತ್ತು.
ಕೊಲೆ ಮಾಡಿರುವ ವಿಡಿಯೋ ನೋಡಿ ಶಾಕ್ ಅಗಿದ್ದ ಪೊಲೀಸರು ಸೂಕ್ತ ವಿಚಾರಣೆ ನಡೆಸಿದಾಗ ಕೊಲೆ ಹಿಂದಿನ ರಹಸ್ಯ ಬಯಲಾಗಿದೆ.
ನಗರದ ಹಲವೆಡೆ ಡ್ರಗ್ಸ್ ಸಪ್ಲೆ, ರಾಬರಿ, ಕೊಲೆ ಯತ್ನ ಹಫ್ತಾ ವಸೂಲಿ. ಬೆದರಿಕೆ ಹಾಕಿ ಹಣ ಬೇಡಿಕೆ ಹೀಗೆ ಹಲವಾರು ಕೃತ್ಯದಲ್ಲಿ ಕುಳ್ಳು ರಿಜ್ವಾನ್ ಭಾಗಿಯಾಗಿದ್ದು, ಆತನ ಸಹಚರರು ನೂರಕ್ಕೂ ಹೆಚ್ಚು ಮಂದಿ ಇರುವುದು ಕಂಡುಬಂದಿದೆ.
ಕುಳ್ಳು ರುಜ್ವಾನ್ ಅಣತಿಯಂತೆ ಸಹಚರರು ಕೆಲಸಮಾಡುತ್ತಿದ್ದು ಸೈಕಲ್ ರವಿ ಹಾಗು ಬೇಕರಿ ರಘು ಮುಗಿಸಿ ತಾನು ಬೆಂಗಳೂರು ದಕ್ಷಿಣ ಭಾಗದ ಏಕೈಕ ಡಾನ್ ಆಗುವ ಲೆಕ್ಕಾಚಾರವನ್ನು ಕುಳ್ಳು ರಿಜ್ವಾನ್ ಹಾಕಿಕೊಂಡಿದ್ದು ಅದಕ್ಕೆ ಆತನ ಸಹಚರರು ಸಾತ್ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
Previous Articleಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡುತ್ತಿರುವ ರೈತರು
Next Article ಕೊಬ್ಬರಿ ಮಂಡಿಯಲ್ಲಿ ಕಳ್ಳತನ