ಗದಗ : ಜಿಲ್ಲೆಯ ನರಗುಂದ ತಾಲೂಕಿನ ಅರಷಿನಗೋಡಿ ಗ್ರಾಮದಲ್ಲಿ ರೈತರು ಹೆಸರು ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡುತ್ತಿದ್ದಾರೆ.
ಇನ್ನೂ ವಿಶೇಷ ಎಂದರೆ ರೈತರು ಹೆಸರು ಬೆಳೆಗೆ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರು ಕೊರತೆಯಿಂದ ರೈತರು ಡ್ರೋನ್ ಮೊರೆ ಹೋಗಿದ್ದಾರೆ. ಪ್ರತಿ ಎಕರೆಗೆ ಐದು ನೂರು ರೂಪಾಯಿ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ಮಾಡಿಸುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಡ್ರೋನ್ ಔಷಧೀಯ ಸಿಂಪಡಣೆ ಮಾಡುತ್ತಿದೆ. ಇದು ಸಹ ರೈತರಿಗೆ ತುಂಬಾನೆ ಅನುಕೂಲವಾಗಿದೆ.
ಹೆಸರು ಬೆಳೆಗೆ ಹಳದಿ ರೋಗ ತಗುಲಿದು ಇನ್ನೂ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹೆಸರು ಬೆಳೆಗೆ ಕ್ಷೀರ ಹತ್ತಿಕೊಂಡಿದ್ದರಿಂದ ರೈತರು ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಮಳೆಯೂ ಸ್ವಲ್ಪಮಟ್ಟಿಗೆ ಬಿಡುವು ನೀಡಿದರಿಂದ ರೈತರು ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಮಳೆಯೂ ಇನ್ನೂ ಹತ್ತಿಕೊಂಡರೆ ಬೆಳೆದ ಬೆಳೆ ಕೈಗೆ ಬರುವುದಿಲ್ಲ ಎಂದು ರೈತರು ಡ್ರೋನ್ ಮೋರೆ ಹೋಗಿದ್ದಾರೆ.
ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡುತ್ತಿರುವ ರೈತರು
Previous Articleಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಪೈಲೆಟ್ ಗಳು ಪಾರು
Next Article Don ಆಗಲು ಹೊರಟಿದ್ದ ರೌಡಿ ಕುಳ್ಳು..