ಬೆಂಗಳೂರು: ಸರ್ಕಾರದ ಕಾಮಗಾರಿ ಟೆಂಡರ್‌ಗಳಲ್ಲಿನ ಶೇ.40 ರಷ್ಟು ಕಮೀಷನ್ ಆರೋಪದ ಬೆನ್ನಲ್ಲೇ ಮತ್ತೊಂದು ಅಕ್ರಮದ ಆರೋಪ ಸ್ಪೋಟಿಸಿದೆ.
ಮಾರಣಾಂತಿಕ ಕೋವಿಡ್ ಸಮಯದಲ್ಲಿನ ಖರ್ಚು-ವೆಚ್ಚಗಳಿಗೆ ಸಂಬಂಧಿಸಿದ ಬಹುಕೋಟಿ ರೂಪಾಯಿ ಕೋವಿಡ್ ಹಗರಣ ಸ್ಫೋಟಗೊಂಡಿದೆ. ಈ ಕುರಿತಂತೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಎಂಬ ಸಂಸ್ಥೆ ರಾಜ್ತಪಾಲರಿಗೆ ದೂರು ನೀಡಿದ್ದು
ಸಿಎಂ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಸುಧಾಕರ್, ಐಎಎಸ್ ಅಧಿಕಾರಿಗಳಾದ ರಾಕೇಶ್ ಸಿಂಗ್, ಮಂಜುನಾಥ್ ಪ್ರಸಾದ್, ಗೌರವ್ ಗುಪ್ತಾ ಸೇರಿದಂತೆ ಹಲವರ ವಿರುದ್ದ ಗಂಭೀರ ಆರೋಪ ಮಾಡಲಾಗಿದೆ.
ಯಡಿಯೂರಪ್ಪ ಅವರ ಆಡಳಿತಾವಧಿಯಿಂದ ಇದೀಗ ಬಸವರಾಜ್ ಬೊಮ್ಮಯಿ ಅವರು ಸಿಎಂ ಆಗಿರುವ ಅವಧಿಯಲ್ಲಿ ಕೋವಿಡ್-19 ನಿರ್ವಹಣೆ ಹೆಸರಲ್ಲಿ ಬಹುಕೋಟಿ ರೂಪಾಯಿ ಗೋಲ್‌ಮಾಲ್ ನಡೆದಿದೆ. ಆರ್‌ಟಿಐ ದಾಖಲೆಗಳಿಂದ ಈ ಅಕ್ರಮ ಬಯಲಾಗಿದೆ ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳೇ ಬೇನಾಮಿ ಹೆಸರಲ್ಲಿ ಬಿಲ್ ಮಾಡಿದ್ದಾರೆ, ಇದರಲ್ಲಿ ಪ್ರಭಾವಿಗಳ ಪಾತ್ರ ಇದೆ ಎಂಬುದನ್ನು ಈ ದೂರಿನಲ್ಲಿ ಉಲ್ಲೇಖಿಸಿರುವ ಸಿಟಿಜನ್ ರೈಟ್ಸ್ ಫೌಂಡೇಷನ್, ಈ ಕೋವಿಡ್ ಹಗರಣದಲ್ಲಿ ರಾಜ್ಯದ ರಾಜಕಾರಣಿಗಳು ಹಾಗೂ ಅಧಿಕಾರಿಗಳೇ ಭಾಗಿಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ನಡೆದರೆ ಈ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪ್ರಭಾವ ಬೀರುವ ಆತಂಕ ಇರುವುದರಿಂದ ನ್ಯಾಯಾಂಗ ತನಿಖೆ ನಡೆಯಬೇಕಿದೆ. ಈ ಸಂಬಂಧ ಸೂಕ್ತ ಕ್ರಮಕ್ಕಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದೆ.
ಕೋವಿಡ್ ಅವಧಿಯಲ್ಲಿ ಹಲವು ತಿಂಗಳ ಕಾಲ ಕರ್ನಾಟಕದಲ್ಲೂ ಲಾಕ್‌ಡೌನ್ ಜಾರಿ ಮಾಡಿ ಸೋಂಕು ತಡೆಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ವಿವಿಧ ಕಾರ್ಯಗಳ ಹೆಸರಲ್ಲಿ ಜನರ ತೆರಿಗೆಯ ಕೋಟ್ಯಾಂತರ ರೂಪಾಯಿಗಳು ಲೂಟಿಕೋರರ ಪಾಲಾಗಿದೆ ಎಂದು ಆರೋಪಿಸಲಾಗಿದೆ.
Previous Articleಶಾಸಕರ ಖರೀದಿಗೆ 800 ಕೋಟಿ ರೂಪಾಯಿ
Next Article ಕೆ.ಜಿ.ಬೋಪಯ್ಯ ವಿರುದ್ಧ ಕಮೀಷನ್ ಆರೋಪ