ಮಡಿಕೇರಿ : ಸಸ್ಪೆಂಡ್ ಆದ ಇಂಜಿನಿಯರ್ ಮರು ನೇಮಕಕ್ಕೆ 2.5 ಕೋಟಿ ಲಂಚ ಪಡೆಯಲಾಗಿದೆ ಎಂದು ವಿರಾಜಪೇಟೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭ್ರಷ್ಟಾಚಾರ ಆರೋಪದಡಿ ಸಸ್ಪೆಂಡ್ ಆಗಿದ್ದ ಇಂಜಿನಿಯರ್ ಶ್ರೀಕಂಠಯ್ಯ 18 ದಿನಗಳ ಕಾಲ ಜೈಲಲ್ಲಿ ಇದ್ದ ಅಧಿಕಾರಿ ಇವರ ಮರು ನೇಮಕದಲ್ಲಿ ಬೋಪಯ್ಯ ಪ್ರಭಾವ ಬೀರಿದ್ದಾರೆಂದು ಆರೋಪಿಸಿದರು.
ಶ್ರೀಕಂಠಯ್ಯ ಮರು ನೇಮಕಕ್ಕೆ ಸಚಿವರಾಗಿದ್ದ.ಈಶ್ವರಪ್ಪ ಅವರಿಗೆ ಬೋಪಯ್ಯ ಪತ್ರ ಬರೆದಿದ್ದರು. ಗುತ್ತಿಗೆದಾರರಿಂದ ಶ್ರೀಕಂಠಯ್ಯ ಲಂಚ ಸ್ವೀಕರಿಸುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದರು. ಎಸಿಬಿ ಅಧಿಕಾರಿಗಳ ದಾಳಿ ಬಳಿಕ ಶ್ರೀಕಂಠಯ್ಯ ಅಮಾನತು ಮಾಡಲಾಗಿತ್ತು ಎಂದು ವಿವರಿಸಿದರು.
ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿ ಕಾಮಗಾರಿಗೆ ಶೇ 40ರ ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕಮಿಷನ್ ದಂದೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ರವಿ ಚಂಗಪ್ಪ ಗಂಭೀರ ಆರೋಪ ಮಾಡಿದರು
Previous Articleಕಮೀಷನ್ ಬೆನ್ನಲ್ಲೇ ಕೋವಿಡ್ ಕರ್ಮಕಾಂಡ
Next Article ಸೆಪ್ಟೆಂಬರ್ ನಲ್ಲಿ ವಿಧಾನ ಮಂಡಲದ ಅಧಿವೇಶನ..