ತುಮಕೂರು : ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ನಗರದಲ್ಲಿ ಮಳೆಯಿಂದ ಹಾನಿಗೊಳಗದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಜೆ 6 ಗಂಟೆ ಸುಮಾರಿಗೆ ತುಮಕೂರಿಗೆ ಆಗಮಿಸಿದ ಸಚಿವರು ಕೇವಲ ೨೦ ನಿಮಿಷದಲ್ಲಿ ಕಾಟಾಚಾರದ ಮಳೆಹಾನಿ ವಿಕ್ಷಣೆ ಮಾಡಿದರು ಎನ್ನುವಂತೆ ತರಾತುರಿಯಲ್ಲಿದ್ದರು. ಅಮಾನಿಕೆರೆ ಕೋಡಿ ಬಳಿಯ ತಗ್ಗು ಪ್ರದೇಶ, ಅಮಾನಿಕೆರೆ ಏರಿ ಹಾಗೂ ಕೋತಿ ತೋಪು ಸರ್ಕಲ್ ಸೇರಿದಂತೆ ಮೂರುಕಡೆ ಮಳೆ ಹಾನಿಯನ್ನು ಕೇವಲ 20 ನಿಮಿಷದಲ್ಲಿ ವೀಕ್ಷಿಸಿದರು. ಇವರೆಲ್ಲ ಕುಂಟು ನೆಪಕ್ಕೆ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿದರಾ ಗೃಹ ಸಚಿವರು ಎಂಬ ಅನುಮಾನ ಕಾಡತೊಡಗಿತ್ತು. ಅಲ್ಲದೇ ಮೂರು ನಾಲ್ಕು ಮನೆಗಳಿಗೆ ಮಾತ್ರ ಭೇಟಿ ನೀಡಿದ ಸಚಿವ ಆರಗ ಜ್ಞಾನೇಂದ್ರ, ಹಾನಿಯಾದ ಮನೆಗಳ ಹೊರಗೆ ನಿಂತು ಸರಿಯಾಗಿ ಸಮಸ್ಯೆಯನ್ನ ಕೇಳದೇ ಅವಸರದಲ್ಲೇ ಬಂದ ದಾರಿ ಹಿಡಿದು ಹೊರಟರು. ಮಳೆ ಅವಾಂತರದಿಂದ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದ ವೀರಣ್ಣ ಅವರನೆಗೆ ಭೇಟಿ ನೀಡಬಹುದು ಎನ್ನಲಾಗಿತ್ತು. ಅದ್ಯಾವುದನ್ನೂ ಮಾಡದೆ ಆತುರ ಆತುರದಲ್ಲಿ ಎರಡ್ಮೂರು ಕಡೆ ವೀಕ್ಷಣೆ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಇನ್ನು ನಗರಕ್ಕೆ ಹೋಮ್ ಮಿನಿಸ್ಟರ್ ಬರುವ ಮೊದಲೆ ಅರ್ಧ ಗಂಟೆಗೂ ಹೆಚ್ಚು ಕಾಲ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ. ಜನ ಸಾಮಾನ್ಯರಿಗೆ ಮಳೆಯಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಒದ್ದಾಡುವಂತೆ ಮಾಡಿದರು. ಕಳೆದ ಶನಿವಾರ ರಾತ್ರಿ ವಿದ್ಯುತ್ ತಗುಲಿ ಸಾವನ್ನಪ್ಪಿದ್ದ ವೀರಣ್ಣ ಕುಟುಂಬಕ್ಕೆ ಹಾಗು ಮಳೆ ನೀರಿನಲ್ಲಿ ಕೊಚ್ಚಿ ಹೋದ ಆಟೋ ಚಾಲಕನ ಕುಟುಂಬಕ್ಕೆ ಪರಿಹಾರದ ಹಣದ ಚೆಕ್ ವಿತರಣೆ ಮಾಡಿದರು.