ಬೆಂಗಳೂರು,ಜು.10-ಪುಡಿ ರೌಡಿಗಳು ಮಚ್ಚು-ಲಾಂಗು ಹಿಡಿದು ರಸ್ತೆಗಿಳಿದು ಪುಂಡಾಟ ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡಿದ ಘಟನೆ ಹೊಸಕೆರೆಹಳ್ಳಿ ಬಳಿ ನಡೆದಿದೆ.
ಕುಡಿದ ಮತ್ತಿನಲ್ಲಿ ಹೊಸಕೆರೆಹಳ್ಳಿಯ ರೋಟಿ ಲ್ಯಾಂಡ್ ಡಾಬಾ ಬಳಿ ಗಲಾಟೆ ಮಾಡಿದ್ದಾರೆ. ಬಳಿಕ ಪಕ್ಕದಲ್ಲಿ ನಿಂತಿದ್ದ ಯುವಕನಿಗೆ ಮಚ್ಚು ತೋರಿಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಸ್ಥಳಕ್ಕೆ ಬಂದಿಲ್ಲ. ಘಟನೆ ನಡೆದು ಪುಡಿರೌಡಿಗಳು ಹೋಗುವವರೆಗೂ ಗಿರಿನಗರ ಪೊಲೀಸರು ಸ್ಥಳಕ್ಕೆ ಬಂದಿಲ್ಲ.
ಹೊಸಕೆರೆಹಳ್ಳಿ ರೋಟಿ ಲ್ಯಾಂಡ್ ಡಾಬಾ ಸಾಕಷ್ಟು ದಿನದಿಂದ ಪುಡಿರೌಡಿಗಳ, ಪುಂಡರ ನೆಚ್ಚಿನ ತಾಣವಾಗಿದೆ. ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೂ ಪೊಲೀಸರು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಸದ್ಯ ರೋಟಿ ಲ್ಯಾಂಡ್ ಡಾಬಾದ ಸಿಸಿಟಿವಿಯ ಡಿವಿಆರ್ ಅನ್ನು ಪೊಲೀಸರು ವಶಕ್ಕೆ ಪಡೆದು ಪುಂಡರಿಗೆ ಬಲೆ ಬೀಸಿದ್ದಾರೆ.
Previous Articleಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಣ ಮಾಡಿದ ಇಂಜಿನಿಯರ್ಸ್..!!
Next Article ಉಸಿರು ನಿಲ್ಲಿಸಿದ ವಿವಾಹಿತೆ!!