ತುಮಕೂರು: ಪಿಎಫ್ಐ ಮತ್ತು ಎಸ್ ಡಿಪಿಐ ಬ್ಯಾನ್ ಮಾಡುವ ನಿಟ್ಟಿನಲ್ಲಿ ಸರ್ಕಾರದ ಯತ್ನ ಮುಂದುವರಿದಿದೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟೂರ್ ಹತ್ಯೆ ಪ್ರಕರಣದಲ್ಲಿ ಈವರೆಗೆ 7 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಅದರ ಹಿಂದೆ ಎಸ್ ಡಿಪಿಐ ಪಿಎಫ್ ಐ ಕೈವಾಡವಿದೆ ಎಂಬ ಮಾಹಿತಿ ಇದೆ. ವಿಚಾರಣೆ ನಂತರ ಯಾರ್ಯಾರ ಕೈವಾಡ ಎಷ್ಟೆಷ್ಟಿದೆ ಎಂಬುದು ತಿಳಿಯುತ್ತದೆ. ಬಂಧಿತರಲ್ಲಿ ಕೆಲವೊಬ್ಬರು ಕೇರಳದವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮಾಹಿತಿ ಇದೆ ಎಂದರು. ಇನ್ನೂ ಪಿಎಫ್ಐ ಮತ್ತು ಎಸ್ ಡಿಪಿಐ ಬ್ಯಾನ್ ಮಾಡುವ ವಿಚಾರದಲ್ಲಿ ಸರ್ಕಾರದ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರ ಅದನ್ನ ಬ್ಯಾನ್ ಮಾಡಬೇಕಾಗುತ್ತದೆ. ಬ್ಯಾನ್ ಮಾಡ್ಬೇಕು ಅಂತೇಳಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮತೀಯವಾದಿಗಳ ವಿರುದ್ಧ ಹೋರಾಟ ನಿಂತಿಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ. ಈಗ ರಾಜ್ಯದಲ್ಲಿ ಮೂರನೆ ಸಿಎಂ ಎಂದು ಕಾಂಗ್ರೆಸ್ ಟ್ವೀಟ್ ವಿಚಾರ ಪ್ರತಿಕ್ರಿಯೆ ಸಿದ ಸಚಿವರು, ಕಾಂಗ್ರೆಸ್ ನವರು ಏನ್ ಬೇಕಾದ್ರೂ ಹೇಳ್ತಾರೆ. ಅವರಿಗೆ ಈಗ ಚುನಾವಣೆ ಶುರುವಾಗಿದೆ ಏನೇನೋ ಮಾತಾಡ್ತಾರೆ. ಏನೇನೋ ಮಾತಾಡಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಯಾವುದೇ ಗಾಂಭೀರ್ಯತೆ ಇಲ್ಲ. ನೆರೆ ಹಾವಳಿ, ಪ್ರವಾಹ ಬಂದು ಜನ ಸಾಯುತ್ತಿದ್ದಾರೆ, ಇವ್ರು ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಮಜಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಗೆ ಟೀಕಿಸಿದರು. ಅಮಿತ್ ಶಾ ಅವ್ರು ನನ್ನ ಬಳಿ ಲೋಕಾಭಿರಾಮವಾಗಿ ಮಾತನಾಡಿದ್ದಾರೆ ಅಷ್ಟೇ . ಬೆಂಗಳೂರು ಈದ್ಗಾ ಮೈದಾನ ವಿಚಾರದಲ್ಲಿ ಸ್ಥಳೀಯ ಆಡಳಿತ ನಿರ್ಧಾರ ತೆಗೆದುಕೊಳ್ಳುತ್ತದೆ ನಮ್ಮದೇನಿದ್ರೂ ಭದ್ರತೆ ನೀಡೋದಷ್ಟೇ ಕೆಲಸ. ಜಮೀರ್ ಅಹ್ಮದ್ ಹೇಳಿದ ಹಾಗೆ ಏನೂ ಆಗಲ್ಲ, ಅದು ಸರ್ಕಾರಿ ಜಾಗ ಎಂದು ತೀರ್ಮಾನ ಆಗಿದೆ. ಸರ್ಕಾರ ಯಾವ ನಿರ್ಧಾರ ತಗೊಳುತ್ತೆ ಅದರ ಮೇಲೆ ಕ್ರಮ ಎಂದು ಎಚ್ಚರಿಕೆ ನೀಡಿದರು.