ತುಮಕೂರು : ಬಲೆಗೆ ಸಿಕ್ಕಿ ನರಳಾಡುತಿದ್ದ ಹೆಬ್ಬಾವನ್ನ ರಕ್ಷಣೆ ಮಾಡಲಾಗಿದೆ. ತುಮಕೂರು ಹೊರವಲಯದ ನರಸಾಪುರ ಗ್ರಾಮದಲ್ಲಿ ಹೆಬ್ಬಾವು ಬಲೆಗೆ ಸಿಲುಕಿ ಒದ್ದಾಡುತಿತ್ತು. ಇದನ್ನ ಗಮನಿಸಿದ ಗ್ರಾಮಸ್ಥ ಮೂರ್ತಿ ವಾರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ಸಂರಕ್ಷಣಾ ಸಂಸ್ಥೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗತಜ್ಞರಾದ ದಿಲೀಪ್ ಹಾಗು ರಾಹುಲ್ ಗುರುಕಿರಣ್ ಬಲಗೆ ಸಿಲುಕಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಬಳಿಕ ತುಮಕೂರಿನ ಅರಣ್ಯಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ದೇವರಾಯನದುರ್ಗ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಬಲೆಗೆ ಸಿಲುಕಿ ನರಳಾಡುತಿದ್ದ ಬಾರಿ ಗಾತ್ರದ ಹೆಬ್ಬಾವು
Previous Articleಹಳೆ ದ್ವೇಷದ ಮಸಲತ್ತು
Next Article ಕಾಮನ್ವೆಲ್ತ್ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ