ಬೆಂಗಳೂರು – ಸಿನಿಮಾ ರಂಗದಲ್ಲಿ ಕಿಚ್ಚ ಸುದೀಪ್ (Kichcha Sudeep) ಅತ್ಯಂತ ಬೇಡಿಕೆಯುಳ್ಳ ಹೆಸರು. ಕನ್ನಡದಲ್ಲಷ್ಟೇ ಅಲ್ಲ ತಮಿಳು,ತೆಲುಗು, ಹಿಂದಿ ಸೇರಿದಂತೆ ಭಾರತದ ಹಲವು ಭಾಷೆಗಳ ಸಿನಿ ಪ್ರೇಮಿಗಳಿಗೆ ಅತ್ಯಂತ ಪರಿಚಿತ ಹೆಸರು.
ರಾಜಮೌಳಿ ಅವರ ಈಗ ಸಿನಿಮಾದ ಮೂಲಕ ತೆಲುಗು, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಕಿಚ್ಚ ಕನ್ನಡದಲ್ಲಂತೂ ಬಹು ಬೇಡಿಕೆಯುಳ್ಳ ನಟ.ಇಲ್ಲಂತೂ ದೊಡ್ಡ ಅಭಿಮಾನಿ ಪಡೆಯನ್ನೆ ಹೊಂದಿದ್ದಾರೆ ಪಟ್ಟಣ ಪ್ರದೇಶದಲ್ಲಷ್ಟೇ ಅಲ್ಲ ಸಣ್ಣ-ಸಣ್ಣ ಹಳ್ಳಿಗಳಲ್ಲೂ ಅಭಿಮಾನಿಗಳ ಸಂಘಗಳಿವೆ.
ಇಂತಹ ಕಿಚ್ಚ ಸುದೀಪ್ ನ ಮುಂದೆ ದೊಡ್ಡ ಬೇಡಿಕೆಯೊಂದು ಬಂದಿದೆ ಅದನ್ನು ತಿಳಿಯೋ ಮೊದಲು ನಮ್ಮ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಷೇರ್ ಮಾಡಿ.
ಚುನಾವಣೆಯ ಸಮಯದಲ್ಲಿ ತಮ್ಮ ಆಪ್ತರ ಪರವಾಗಿ ಸಿನಿಮಾ ನಟ-ನಟಿಯರು ಪ್ರಚಾರದ ಅಖಾಡಕ್ಕೆ ಧುಮುಕುವುದು ಸಹಜ.ತಮ್ಮ ನೆಚ್ಚಿನ ನಟ ಹೇಳಿದವರಿಗೆ ನಾವು ವೋಟ್ ಕೊಡೋದು ಅಂತಾ ಅಭಿಮಾನಿಗಳು ಹೇಳುತ್ತಾರೆ.ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ ಕೆಲವರು ಬಹು ಬೇಡಿಕೆಯುಳ್ಳ ನಟರನ್ನು ತಮ್ಮ ಪರ ಪ್ರಚಾರಕ್ಕೆ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಬಾರಿ ಕಿಚ್ಚ ಸುದೀಪ್ ಮುಂದೆ ಹೊಸ ಬೇಡಿಕೆ ಇಡಲಾಗಿದೆ.
ಸುದೀಪ್ ಅವರ ಸ್ನೇಹಿತೆ ಮಾಜಿ ಸಂಸದೆ ಕನ್ನಡದ ಮೋಹಕ ತಾರೆ ರಮ್ಯಾ ಇತ್ತೀಚೆಗಷ್ಟೇ ಸುದೀಪ್ ಮನೆಗೆ ಭೇಟಿ ನೀಡಿದ್ದರು.ಈ ವೇಳೆ ರಮ್ಯಾ ಕಿಚ್ಚ ಸುದೀಪ್ ಅವರನ್ನು ಸಕ್ರಿಯ ರಾಜಕಾರಣ ಪ್ರವೇಶಿಸುವಂತೆ ಸಲಹೆ ಮಾಡಿದ್ದಾರೆ.ಅಷ್ಟೇ ಅಲ್ಲ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದಾರೆ.
ಹೇಳಿ-ಕೇಳಿ ಸುದೀಪ್ ಅವರದ್ದು ರಾಜಕೀಯ ಹಿನ್ನೆಲೆಯ ಕುಟುಂಬ. ಇವರ ಚಿಕ್ಕಪ್ಪ ಸರೋವರ ಶ್ರೀನಿವಾಸ್ ಜನತಾ ಪರಿವಾರಕ್ಕೆ ಸೇರಿದವರು. ವಿಧಾನಪರಿಷತ್ ಸದಸ್ಯರಾಗಿದ್ದ ಇವರು ಇದೀಗ ಕಾಂಗ್ರೆಸ್ ನಲ್ಲಿದ್ದಾರೆ.ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆಪ್ತರು. ಈ ಎಲ್ಲಾ ಹಿನ್ನೆಲೆಯಲ್ಲಿ ರಮ್ಯಾ ಅವರು ಸುದೀಪ್ ಅವರಿಗೆ ಈ ಆಹ್ವಾನ ನೀಡಿದ್ದಲ್ಲದೆ ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜೊತೆ ಮಾತನಾಡುವಂತೆ ಸಲಹೆ ಮಾಡಿದ್ದಾರೆ ಸುದೀಪ್ ಗೆ ರಮ್ಯಾ ಜೊತೆಗೆ ರಾಹುಲ್ ಗಾಂಧಿ ಕೂಡಾ ಆಪ್ತರು.
ವಾಲ್ಮೀಕಿ ಸಮುದಾಯಕ್ಕೆ ಸೇರಿದ ಕಿಚ್ಚ ಸುದೀಪ್ ಕಾಂಗ್ರೆಸ್ ಸೇರಿದರೆ ಆ ಸಮುದಾಯ ತಮ್ಮ ಪರ ನಿಲ್ಲಲಿದೆ ಎನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಒಂದು ಕಾಲದಲ್ಲಿ ಕಾಂಗ್ರೆಸ್ ನ ಕಟ್ಟಾ ಬೆಂಬಲಿಗರಾಗಿದ್ದ ವಾಲ್ಮೀಕಿ ಸಮುದಾಯದ ಮತದಾರರು ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿ ಎಸ್ ಜೊತೆ ಹಂಚಿ ಹೋಗಿದ್ದಾರೆ.
ಹೀಗಾಗಿ ಇದೇ ಸಮುದಾಯಕ್ಕೆ ಸೇರಿದ ಕಿಚ್ಚ ಸುದೀಪ್ ಕಾಂಗ್ರೆಸ್ ಗೆ ಬಂದರೆ ಆ ಸಮುದಾಯದ ಮತದಾರರು ಮತ್ತೆ ಕಾಂಗ್ರೆಸ್ ನತ್ತ ವಾಲುತ್ತಾರೆ ಎನ್ನುವುದು ಲೆಕ್ಕಾಚಾರ ಹೀಗಾಗಿ ಅವರನ್ನು ಕಾಂಗ್ರೆಸ್ ಸೇರುವಂತೆ ಮನವೊಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಶಿವಮೊಗ್ಗ ಅಥವಾ ದಾವಣಗೆರೆ ಇಲ್ಲವೇ ಬಳ್ಳಾರಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮನವೊಲಿಸಲಾಗುತ್ತಿದೆ.ಆದರೆ ಇಲ್ಲಿಯವರೆಗೆ ಸುದೀಪ್ ತಮ್ಮ ಅಭಿಪ್ರಾಯ ತಿಳಿಸಿಲ್ಲ ಹೀಗಾಗಿ ವಿದ್ಯಮಾನಗಳು ಕುತೂಹಲ ಮೂಡಿಸಿವೆ.
Previous ArticleAmericaದಲ್ಲಿ ಉದ್ಯೋಗ ಇನ್ನು ಕನಸು ಮಾತ್ರ?
Next Article ಪ್ರಜಾಧ್ವನಿ ಬಸ್ ಯಾತ್ರೆ