ಅಖಿಲ ಕೊಡವ ಸಮಾಜದ ಸ್ಥಾಪಕ ಅಧ್ಯಕ್ಷ, ವಿರಾಜಪೇಟೆ ಸಮೀಪದ ಕೆದಮಲ್ಲೂರು ಗ್ರಾಮದ ನಿವಾಸಿ ಮಾತoಡ ಮೊಣ್ಣಪ್ಪ (Mathanda Monnappa) (76) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಕೊಡಗು ಏಕೀಕರಣ ರಂಗ ಸೇರಿದಂತೆ ಹಲವಾರು ಸಂಘ-ಸಂಸ್ಥೆಯಲ್ಲಿ ತೊಡಗಿಸಿಕೊಂಡ ಮಾತoಡ ಮೊಣ್ಣಪ್ಪನವರು, ತಲಕಾವೇರಿ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾಗಿ ತಲಕಾವೇರಿ ಜೀರ್ಣೋದ್ಧಾರಕ್ಕೆ ಕಾರಣಕರ್ತರಾದವರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಮೊಣ್ಣಪ್ಪನವರು ಹಲವಾರು ಸಹಕಾರ ಸಂಘಗಳಲಿ ಕೂಡ ಸೇವೆಯನ್ನು ಸಲ್ಲಿಸಿದ್ದರು.