ಭಾರತೀಯರಲ್ಲಿ ಸಾಂಸ್ಕೃತಿಕ ಜಾಗೃತಿ ಆಗುತ್ತಿದ್ದರೂ ಸಿನಿಮಾ ಮತ್ತು ಟಿವಿ ಗಳಲ್ಲಿ ಒಂದಷ್ಟು ಸ್ವೇಚ್ಚಾಚಾರದ ನಡವಳಿಕೆಗಳು ಜಗಜ್ಜಾಹೀರಾಗಿ ನಡೆಯುತ್ತಾ ಬಂದಿವೆ. ಹಾಗೆ ಹೇಳಬೇಕೆಂದರೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರತದ ಯುವ ಜನತೆ ಹೆಚ್ಚಾಗಿ ಮಾರುಹೋಗುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದ್ದೆ. ನನ್ನಿಷ್ಟದ ಉಡುಗೆ ನನ್ನಿಷ್ಟದ ತೊಡುಗೆ ನನ್ನಿಷ್ಟದ ವ್ಯಕ್ತಿಯೊಂದಿಗೆ ಸಲುಗೆ ಎನ್ನುವಂತೆ ಯುವಜನಂತೆ ಒಂದಷ್ಟು ಸಮಾಜ ನಿರೂಪಿಸಿದ ನಡವಳಿಕೆಯ ನಿರ್ಬಂಧನೆಗಳಿಗೆ ವಿರುದ್ಧವಾಗಿ ನಡೆಯುತ್ತಿರುವಂತೆ ಕಂಡುಬರುತ್ತಿದೆಯಾದರು ಇನ್ನೂ ಕೂಡ ಭಾರತದಲ್ಲಿ ಕೌಟುಂಬಿಕ ವಾತಾವರಣದಲ್ಲಿ ಅಥವ ಸಾರ್ವಜನಿಕವಾಗಿ ನಡೆದುಕೊಳ್ಳುವಾಗ ಎಷ್ಟೇ ವ್ಯಕ್ತಿ ಸ್ವಾತಂತ್ರ್ಯವನ್ನು ಬಯಸುವ ಯುವಕ ಯುವತಿಯರೂ ಕೂಡ ಒಂದಷ್ಟು ಎಲ್ಲೆ ಮೀರದ ರೀತಿಯಲ್ಲಿ ವರ್ತಿಸುವುದನ್ನು ಎಲ್ಲರೂ ಕಾಣಬಹುದು.
ಹಾಗೇ ಸಿನಿಮಾದಲ್ಲೂ ಕೂಡ ಮೈ ಕೈ ಸೋಕಿಸಿಕೊಂಡು ಹೆಣೆಯಾಡುವ ನೃತ್ಯಗಳು ಸಿನಿಮಾದ ಆರಂಭಕಾಲದಿಂದಲೂ ಕನ್ನಡ ಭಾಷೆಯ ಚಿತ್ರ ಲೋಕದಲ್ಲೂ ಕಂಡುಬಂದಿದ್ದರೂ ಕನ್ನಡ ಟಿವಿ ಕಾರ್ಯಕ್ರಮಗಳು ಮಾತ್ರ ಇತ್ತೀಚಿನವರೆಗೂ ಬಹಳಷ್ಟು ಸಭ್ಯತೆಯ ಪರಿಧಿಯೊಳಗೇ ಇದ್ದಂತೆ ಪ್ರಸ್ತುತಗೊದಿಂದ್ದವು. ಹಿಂದಿ ಭಾಷೆಯ ರಿಯಾಲಿಟಿ ಶೋಗಳಲ್ಲಿ ಅಪ್ಪಿಕೊಳ್ಳುವುದು ಮುದ್ದಾಡುವುದು ಮುತ್ತು ಕೊಡುವುದು ಪೋಲಿ ಪೋಲಿಯಾಗಿ ಮಾತನಾಡುವುದು ಎಲ್ಲ ಹೆಚ್ಚುತ್ತಿರುವ ಈ ಕಾಲದಲ್ಲಿ ಕನ್ನಡ ಭಾಷೆಯ ಕಾರ್ಯಕ್ರಮಗಳಲ್ಲೂ ಒಂದಷ್ಟು ಇಂಥ ಮೈಚಳಿ ಬಿಟ್ಟು ನಡೆಸುವ ಚಟುವಟಿಕೆಗಳು ತೋರಿಸಲ್ಪಡುವ ಪ್ರಯತ್ನಕ್ಕೆ ಪೀಠಿಕೆ ಶುರುವಾದಂತಿದೆ. ವೀಕ್ಷಕರನ್ನು ಅಂತ ಸನ್ನಿವೇಶಗಳನ್ನೂ ನೋಡಲು ಒಗ್ಗಿಸುವ ಪ್ರಯತ್ನವೆಂಬಂತೆ ಆಗಾಗ ಒಂದಷ್ಟು ಹೀರೋ ಹೀರೋಯಿನ್ ಮಧ್ಯೆ ವಿಪರೀತ ಸಲುಗೆ ಹೀರೋ ಮುತ್ತು ಬೇಕೆಂದು ಪೀಡಿಸುವುದು ಹೀರೋಯಿನ್ ನನ್ನು ಚುಂಬಿಸಲು ಪ್ರಯತ್ನಿಸುವುದು, ಮೋಸದಿಂದ ಮುತ್ತು ಪಡೆಯುವುದು ಎಲ್ಲಾ ನಡೆಯುತ್ತಿತ್ತು.
ಆದರೆ ಈಗ ಕನ್ನಡ ಟಿವಿ ಸೀರಿಯಲ್ ಗಳಲ್ಲಿ ಅದೆಲ್ಲ ಬಹಳ ಮುಂದೆ ಹೋಗಿ ಈಗ ಹೀರೋ ಹೀರೋಯಿನ್ ಗೆ ಕ್ಯಾಮಾರಕ್ಕೆ ಮರೆಯಾಗಿ ಮುತ್ತು ಕೊಡುತ್ತಿರುವುದು ಮುತ್ತು ಕೊಡಲು ಇಡೀ ಕುಟುಂಬವೇ ಪ್ರೇರೇಪಿಸುವುದು, ಹೀರೋ ಹೀರೋಯಿನ್ ನ ತುಟಿಯನ್ನು ಮುಟ್ಟುವುದು ತುಟಿಗಳನ್ನು ಹಿಸುಕುವುದು, ತುಟಿಯ ಮೇಲೆ ಬೆರಳುಗಳನ್ನು ಓಡಾಡಿಸುವುದು ನಡೆಯುತ್ತದೆ ಇದೆ. ಇದೆಲ್ಲ ಕೆಲವೊಂದು ಸೀರಿಯಲ್ ಗಳಲ್ಲಿ ತುಂಬಾನೇ ನಡೆದುಬಿಟ್ಟಿರುತ್ತದೆ.
ಇದೆಲ್ಲ ನೋಡುತ್ತಿದ್ದರೆ ಮತ್ತು ಸೀರಿಯಲ್ ಗಳ ಸಂಭಾಷಣೆಯನ್ನು ಹಾಗು ಅದರಲ್ಲೂ ಕನ್ನಡ ರಿಯಾಲಿಟಿ ಶೋನಲ್ಲಿ ಪೋಲಿ ಸಂಭಾಷಣೆಗಳನ್ನು ಕೇಳಿದರೆ ಇನ್ನು ಮುಂದೆ ಸೀರಿಯಲ್ ಗಳಲ್ಲಿ ಪ್ರಸ್ಥದ ಪ್ರಸ್ತಾಪ ಮಾತ್ರವಲ್ಲದೆ ಮೊದಲ ರಾತ್ರಿಯಲ್ಲಿ ಕೋಣೆಯೊಳಗಿನ ವಿದ್ಯಮಾನಗಳನ್ನು ಸ್ಪಷ್ಟವಾಗಿ ತೋರಿಸುವ ಕಾಲ ಬರುತ್ತಿರುವಂತೆ ಗೋಚರಿಸುತ್ತಿದೆ. ಆದರೆ ಅದಕ್ಕಿಂತ ಮೊದಲೇ ಹೀರೋ ಹೀರೋಯಿನ್ ಗಳು ಮನೆಯೊಳಗಿನ ಸಭ್ಯ ಕುಟುಂಬದ ಟಿವಿ ಪರದೆಯಲ್ಲಿ ಒಂದಿಷ್ಟೂ ಸಂಕೋಚವಿಲ್ಲದೆ ತುಟಿಗೆ ತುಟಿ ಇಟ್ಟು ಚುಂಬಿಸುವ ಕಾಲ ಬರುವಂತಿದೆ. ವೀಕ್ಷಕ ಮಹನೀಯರು ಸಿದ್ದರಾಗಬೇಕಷ್ಟೆ!


1 ಟಿಪ್ಪಣಿ
Mostbet – o cassino online que mais recompensa seus jogadores em 2025 – https://mostbetpt.pro/ , No Mostbet o bГґnus Г© insano: 130% + 270 free spins na hora do cadastro .