ಬೆಂಗಳೂರು – ಕರ್ನಾಟಕ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ನಿಗಮ KREDL, ಸದ್ದಿಲ್ಲದೆ ಕೆಲಸ ಮಾಡುವ ಮೂಲಕ ಪ್ರಗತಿ ಪಥದಲ್ಲಿ ಸಾಗುತ್ತಿದೆ.
ಅಸಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡುವ ಜೊತೆಗೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ನಿಗಮ ಹಲವಾರು ವಿನೂತನ ಕ್ರಮಗಳ ಮೂಲಕ ರಾಜ್ಯದ ಬೊಕ್ಕಸಕ್ಕೆ ಕೊಡುಗೆ ನೀಡುತ್ತಿದೆ.
ಸೌರ ವಿದ್ಯುತ್, ಪವನ ವಿದ್ಯುತ್ ಮತ್ತು ಮರು ಬಳಕೆ ಮಾಡಬಹುದಾದ ತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದನಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿರುವ ಈ ನಿಗಮ ರಾಜ್ಯದಲ್ಲಿ ಒಂದು ಲಾಭದಾಯಕ ನಿಗಮವಾಗಿ ಪರುಣಮಿಸಿದೆ.
ಅಸಂಪ್ರದಾಯಿಕ ಮೂಲಗಳ ವಿದ್ಯುತ್ ಉತ್ಪಾದನೆ ಮತ್ತು ವಿದ್ಯುತ್ ಉಳಿತಾಯ ವಲಯದಲ್ಲಿ ಸಲಹಾ ಮಂಡಳಿಯಾಗಿ ಕೆಲಸ ಮಾಡುತ್ತಿರುವ ನಿಗಮ ಕಳೆದ ಆರ್ಥಿಕ ವರ್ಷದಲ್ಲಿ 20.90,000,00 ರೂಪಾಯಿ ಲಾಭಗಳಿಸಿದೆ.
ನಿಗಮದ ಮುಖ್ಯಸ್ಥರೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ ಅವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಲಾಭಾಂಶದ ಚೆಕ್ ಹಸ್ತಾಂತರ ಮಾಡಿದರು.
ಈ ವೇಳೆ ನಿಗಮದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಇಲಾಖೆಗೆ ಕೆ.ಜೆ.ಜಾರ್ಜ್ ಅವರಂತಹ ದಕ್ಷ ನಾಯಕತ್ವ ದೊರಕಿದೆ.ಇಲಾಖೆಯ ಬಗ್ಗೆ ವಿಭಿನ್ನ ದೃಷ್ಟಿಕೋನ ಹೊಂದಿರುವ ಜಾರ್ಜ್ ಅವರ ಮಾರ್ಗದರ್ಶನದಲ್ಲಿ ನಿಗಮ ಮತ್ತಷ್ಟು ಜನಮುಖಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
Previous Articleಮೋದಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ವೇದಿಕೆ
Next Article ಎಲ್ಲರಿಗೂ ಪ್ರಿಯ ಈ ವರ್ಗಾವಣೆ!
1 ಟಿಪ್ಪಣಿ
озвучивание ozvuchivanie-pomeshhenij.ru .