ಬೆಂಗಳೂರು : ರಾಜ್ಯದಲ್ಲಿ ಕಳೆದೊಂದು ವಾರದಿಂದ ಬಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಸಂಘರ್ಷದ್ದೇ ದೊಡ್ಡ ಸುದ್ದಿ.
ರಾಜ್ಯ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಮುಜುಗರ ಸೃಷ್ಟಿಸಿದ ಈ ಪ್ರಕರಣದ ಮೂಲ ಕೌಟುಂಬಿಕ ಕಲಹ ಎನ್ನುವುದು ಇದೀಗ ಜಗಜ್ಜಾಹೀರಾಗಿದೆ.ಈ
ಕೌಟುಂಬಿಕ ಸಂಘರ್ಷದ ಕೇಂದ್ರ ಬಿಂದು ಐಎಎಸ್ ಅಧಿಕಾರಿಯೂ ಆಗಿರುವ ಮುನೀಶ್ ಮೌದ್ಗಿಲ್.
ದಕ್ಷ ಆಡಳಿತಗಾರ, ಹಿಡಿದ ಕೆಲಸ ಬಿಡದ ಛಲದಂಕಮಲ್ಲ ಎಂದೆಲ್ಲಾ ಅಧಿಕಾರಿಗಳ ವಲಯದಲ್ಲಿ ಗುರುತಿಸಲ್ಪಡುವ ಮುನೀಶ್ ಮೌದ್ಗೀಳ್ ಇದೀಗ ಇವರಿಬ್ಬರ ಜಗಳದಲ್ಲಿ ಸಿಲುಕಿ ವರ್ಗಾವಣೆಯ ಶಿಕ್ಷೆ ಅನುಭವಿಸಿದ ಮೌದ್ಗಿಲ್ ಇದೀಗ ಮೌನಕ್ಕೆ ಶರಣಾಗಿದ್ದಾರೆ ಎನ್ನುತ್ತವೆ ಅವರ ಆಪ್ತ ಮೂಲಗಳು
ಶಿಷ್ಟಾಚಾರದಂತೆ ನೂತನ ಜವಾಬ್ದಾರಿ ಸ್ವೀಕರಿಸಿದ ಅವರು ಕೆಲಸದ ಕಡೆ ಗಮನ ಹರಿಸಿಲ್ಲ.ಅಷ್ಟೇ ಅಲ್ಲ ಸುಗಮ ಆಡಳಿತ ಸೂತ್ರದ ಕುರಿತು ಮಹಾರಾಷ್ಟ್ರ ಸರ್ಕಾರ ತನ್ನ ಜಿಲ್ಲಾಧಿಕಾರಿಗಳಿಗೆ ಕಾರ್ಯಾಗಾರವೊಂದನ್ನು ಏರ್ಪಡಿಸಿತ್ತು. ಇದರಲ್ಲಿ ಪ್ರಧಾನ ಭಾಷಣ ಮೌದ್ಗಿಲ್ ಅವರದ್ದಾಗಿತ್ತು.
ನಾಸಿಕ್ ನ ಶಿರಡಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕೊನೆಯ ಕ್ಷಣದವರೆಗೂ ಬರುತ್ತೇನೆಂದು ಸಂಘಟಕರಿಗೆ ಹೇಳಿದ್ದ ಮೌದ್ಗಿಲ್ ಏಕಾಏಕಿ ಗೈರಾದರು.
ಇನ್ನೇನು ಮೌದ್ಗಿಲ್ ಬರಲಿದ್ದಾರೆ ಆಡಳಿತದ ನೂತನ ಸವಾಲುಗಳು, ಜನ ಸಂಪರ್ಕ ಹಾಗೂ ಜನ ಸ್ನೇಹಿ ಆಡಳಿತದ ಕುರಿತು ಮಾರ್ಗದರ್ಶನ ಮಾಡಲಿದ್ದಾರೆಂದು ಕಾಯುತ್ತಿದ್ದ ಮಹಾರಾಷ್ಟ್ರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಕೊನೆಗೆ ತಮ್ಮ ರಾಜ್ಯದ ಅಧಿಕಾರಿಗಳ ಭಾಷಣ ಕೇಳಿ ಹಿಂತಿರುಗಬೇಕಾಯಿತು.
ಮುನೀಶ್ ಮೌದ್ಗಿಲ್ ಈ ಕಾರ್ಯಾಗಾರಕ್ಕೆ ಯಾಕೆ ಬರಲಿಲ್ಲ ಎಂದು ಕುತೂಹಲಗೊಂಡ ಶಿಬಿರಾರ್ಥಿಗಳು ಹುಡುಕಾಟ ನಡೆಸಿದಾಗ ಅವರಿಗೆ ಸಿಕ್ಕ ಉತ್ತರ ಜಡೆ ಜಗಳ ಅರ್ಥಾತ್ ರೋಹಿಣಿ-ರೂಪಾ ಸಂಘರ್ಷ ಇದೀಗ ಈ ಐಎಎಸ್-ಐಪಿಎಸ್ ಸಂಘರ್ಷ ಎಲ್ಲೆಡೆ ಮನೆ ಮಾತು..
Previous Articleಯುವತಿ ಮೇಲಲ್ಲ, ಸೀಟಿನ ಮೇಲೆ ಮೂತ್ರ ವಿಸರ್ಜನೆ
Next Article BJPಯಿಂದ ರಾಜ್ಯದ ಅಭಿವೃದ್ಧಿ- Congress ನಿಂದ ಭ್ರಷ್ಟಾಚಾರ