ಬೆಂಗಳೂರು,ಜ.25-
ಇತ್ತೀಚೆಗೆ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆಯ ನಂತರ ಏರ್ ಇಂಡಿಯಾ ವಿಮಾನದಲ್ಲಿ ಮದ್ಯ ಪೂರೈಕೆಯ ನಿಯಮದಲ್ಲಿ ಭಾರೀ ಬದಲಾವಣೆಯನ್ನು ಮಾಡಿದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ಮದ್ಯದ ಪ್ರಮಾಣವನ್ನು ಕಡಿತ ಮಾಡಿದೆ. ಹೆಚ್ಚುವರಿ ಮದ್ಯಕ್ಕೆ ಯಾರಾದರೂ ಕೋರಿಕೆಯಿಟ್ಟರೆ ಅದನ್ನು ನಯವಾಗಿ ನಿರಾಕರಿಸುವಂತೆ ವಿಮಾನದ ಸಿಬ್ಬಂದಿಗೆ ಸೂಚಿಸಲಾಗಿದೆ.
ವಿಮಾನದಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಏರ್ ಇಂಡಿಯಾ ತನ್ನ ಹಾರಾಟದ ಸಮಯದಲ್ಲಿ ಮದ್ಯವನ್ನು ಪೂರೈಸುವ ನೀತಿಯನ್ನು ಬದಲಾಯಿಸಿದೆ. ಪರಿಷ್ಕೃತ ನೀತಿಯ ಪ್ರಕಾರ, ಪ್ರಯಾಣಿಕರಿಗೆ ಕೇಳಿದಷ್ಟು ಮದ್ಯವನ್ನು ನೀಡಬಾರದು ಹಾಗೂ ಪ್ರಯಾಣಿಕರು ತಮ್ಮ ಸ್ವಂತ ಮದ್ಯ ಸೇವಿಸುವುದನ್ನು ತಡೆಹಿಡಿಯಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.