ಬೆಂಗಳೂರು, ಮಾ.23- ರಾಜಧಾನಿ ಮಹಾನಗರಿ ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಬೆನ್ನು ಹತ್ತಿರುವ ರಾಷ್ಟ್ರೀಯ ತನಿಖಾದಳ ಈ ಕುರಿತಂತೆ ಮಹತ್ವದ ಮಾಹಿತಿಯನ್ನು ಕಲೆಹಾಗಿದೆ.
ಕೆಫೆಯಲ್ಲಿ ಸ್ಪೋಟ ನಡೆಸಿದ ಬಾಂಬರ್ ಜೊತೆಗೆ ಆತನ ಒಬ್ಬ ಸ್ನೇಹಿತ ಕೂಡ ಇದ್ದ. ಇಬ್ಬರೂ ಕೂಡ ಸಾಕಷ್ಟು ತಯಾರಿ ಮಾಡಿಯೇ ಸ್ಪೋಟ ನಡೆಸಿದ್ದಾರೆ ಅಷ್ಟೇ ಅಲ್ಲ, ಇಬ್ಬರೂ ಕರ್ನಾಟಕ ಮೂಲದವರಾಗಿದ್ದು, ಸ್ಫೋಟಕ್ಕೆ ಮೊದಲಿನ ಎರಡು ತಿಂಗಳು ತಮಿಳುನಾಡಿನಲ್ಲಿದ್ದರು ಎನ್ನುವುದು ರಾಷ್ಟ್ರೀಯ ತನಿಖಾ ದಳ (ಎನ್ ಐಎ-NIA) ನಡೆಸಿದ ತನಿಖೆಯಲ್ಲಿ ಪತ್ತೆಯಾಗಿದೆ.
ಬಾಂಬರ್ ನ ಜಾಡು ಹಿಡಿದ ಎನ್‌ಐಎ ಅಧಿಕಾರಿಗಳು ತಮಿಳುನಾಡಿಗೆ ಆತ ಪರಾರಿಯಾಗಿರಬಹುದು ಎನ್ನುವ ಶಂಕೆಯ ಮೇಲೆ ಶೋಧ ಕೈಗೊಂಡಾಗ ಆತ ಸ್ಫೋಟಕ್ಕೂ ಮುನ್ನ ಎರಡು ತಿಂಗಳುಗಳ ಕಾಲ ತಮಿಳುನಾಡಿನಲ್ಲಿ ಉಳಿದಿದ್ದುದು ಗೊತ್ತಾಗಿದೆ.
ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಕವನ್ನು ಇಟ್ಟು ಪರಾರಿಯಾದವನ ಜೊತೆ ಮತ್ತೋರ್ವ ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ ಉಳಿದಿದ್ದ ಶಂಕಿತನ ಜೊತೆಗೆ ಈತನೂ ಇದ್ದ ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಸ್ಫೋಟಕ್ಕೆ ಮುನ್ನ ಇವರು ಓಡಾಡಿದ್ದ ಜಾಡು ಹಿಡಿದ ಎನ್‌ಐಎ ಅಧಿಕಾರಿಗಳಿಗೆ ಎರಡು ತಿಂಗಳು ತಮಿಳುನಾಡಿನ ಲಾಡ್ಜ್‌ನಲ್ಲಿ ಇವರು ಉಳಿದುಕೊಂಡಿರುವುದು ಪತ್ತೆಯಾಗಿದೆ. ಸ್ಫೋಟಕ್ಕೆ ಅವರು ಇಲ್ಲಿ ತರಬೇತಿ ಪಡೆಯುತ್ತಿದ್ದರೇ ಅಥವಾ ಇನ್ನಷ್ಟು ದೊಡ್ಡ ಉಗ್ರ ಕೃತ್ಯದ ತಯಾರಿ ನಡೆಸುತ್ತಿದ್ದರೇ ಎಂಬ ಅಂಶವನ್ನು ತನಿಖೆ ಮಾಡಲಾಗುತ್ತಿದೆ.
ಸ್ಫೋಟಕ ಇಡಲು ಬರುವ ವೇಳೆ ಮುಖ ಮರೆಮಾಚಲು ಉಗ್ರ ಧರಿಸಿದ್ದ ಟೊಪಿಯ ಮೂಲವನ್ನು ಎನ್‌ಐಎ ಪತ್ತೆ ಹಚ್ಚಿದೆ. ಇದು ತಮಿಳುನಾಡಿನ ಮಾಲ್ ಒಂದರಲ್ಲಿ ಖರೀದಿಸಲಾದ ಟೊಪಿಯಾಗಿದ್ದು, ಟೋಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೊಬ್ಬನಿದ್ದ. ಖರೀದಿ ವೇಳೆ ಇಬ್ಬರ ಮುಖಚಹರೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ಫೂಟೇಜ್‌ಗಳನ್ನು ಎನ್‌ಐಎ ಸಂಗ್ರಹಿಸಿದೆ.
ಮತ್ತೊಂದೆಡೆ, ಭಯೋತ್ಪಾದಕ ಎಸೆದುಹೋದ ಕ್ಯಾಪ್‌ನಲ್ಲಿ ಶಂಕಿತನ ಕೂದಲು ದೊರೆತಿದ್ದು, ಅದನ್ನು ಡಿಎನ್‌ಎ ಟೆಸ್ಟ್‌ಗೆ ಒಳಪಡಿಸಲಾಗಿದೆ. ಸದ್ಯ ಸಿಸಿಟಿವಿಗಳನ್ನು ಆಧರಿಸಿದ ನಡೆದಿರುವ ತನಿಖೆಯಲ್ಲಿ ಸಿಕ್ಕಿರುವ ಈ ಮಹತ್ವದ ಲೀಡ್ ಎನ್‌ಐಎಯ ಮತ್ತಷ್ಟು ಆಳದ ತನಿಖೆಗೆ ಪೂರಕವಾಗಿದೆ.
ತನಿಖೆಯ ಆರಂಭಿಕ ಹಂತದಲ್ಲಿ ಆತನ ಸರಿಯಾದ ಮುಖಚರ್ಯೆ ಕಾಣುವ ಯಾವ ಚಿತ್ರವೂ ಯಾರ ಕೈಗೂ ಸಿಕ್ಕಿರಲಿಲ್ಲ. ಆತ ಕೆಎಸ್‌ಆರ್ಟಿಸಿ ವೋಲ್ವೋ ಬಸ್‌ನಲ್ಲಿ ಬಂದಿದ್ದು, ಹೋಟೆಲ್ ಪ್ರವೇಶ ಮಾಡಿದ್ದು, ಬಿಲ್ ಕೌಂಟರ್, ರವೆ ಇಡ್ಲಿ ಹಿಡಿದುಕೊಂಡು ಹೋಗುವ, ಬಾಂಬಿಟ್ಟ ಬಳಿಕ ಇಳಿದುಕೊಂಡು ಹೋಗುವ ವಿಡಿಯೊಗಳೆಲ್ಲ ಸಿಸಿಟಿವಿಯಲ್ಲಿ ಸಿಕ್ಕಿದ್ದವು. ಆದರೆ, ಅದೆಲ್ಲದರಲ್ಲಿ ಆತ ಮುಖವನ್ನು ಟೋಪಿಯಿಂದ ಮರೆ ಮಾಚಿದ್ದ. ಮಾಸ್ಕ್ ಹಾಕಿಕೊಂಡಿದ್ದ. ಹಾಗಾಗಿ ಆತನ ಮುಖ ಕಾಣುತ್ತಿರಲಿಲ್ಲ.
ಎನ್‌ಐಎ ಆರಂಭಿಕ ಹಂತದಲ್ಲಿ ಆತ ರಾಮೇಶ್ವರಂ ಕೆಫೆಯಲ್ಲಿರುವಾಗ ಸೆರೆ ಹಿಡಿದ ಚಿತ್ರವನ್ನು ಬಿಡುಗಡೆ ಮಾಡಿ ಈ ವ್ಯಕ್ತಿಯ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ ಎಂದು ಹೇಳಿತ್ತು. ಬಳಿಕ ಬಳ್ಳಾರಿ ಬಸ್ ನಿಲ್ದಾಣದ ಒಂದು ವಿಡಿಯೊವನ್ನು ಪೋಸ್ಟ್ ಮಾಡಿತು. ಆದರೆ, ಅದನ್ನು ಕೆಲವೇ ನಿಮಿಷಗಳಲ್ಲಿ ಜಾಲ ತಾಣದಿಂದ ತೆಗೆದುಹಾಕಿತು.
ನಂತರ ಎನ್‌ಐಎ ನಾಲ್ಕು ಚಿತ್ರಗಳ ಒಂದು ಬಂಚ್ ಅನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶಂಕಿತ ಆರೋಪಿಯ ಮುಖ ಬಹುತೇಕ ಸ್ಪಷ್ಟವಾಗಿ ಕಾಣಿಸುತ್ತದೆ. ಪೋಟೋದಲ್ಲಿರುವ ವ್ಯಕ್ತಿ ಕಂಡು ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಪೋನ್ ನಂಬರ್ ಮತ್ತು ಇ ಮೇಲ್ ಐಡಿ ಕೊಟ್ಟು ಮಾಹಿತಿ ನೀಡುವಂತೆ ಮನವಿ ಮಾಡಿದೆ.
11 ಪ್ರತಿಕ್ರಿಯೆಗಳು
Facts blog you possess here.. It’s severely to espy strong worth script like yours these days. I justifiably respect individuals like you! Go through vigilance!!
This is a question which is virtually to my verve… Diverse thanks! Exactly where can I find the connection details in the course of questions?
inderal 20mg tablet – brand propranolol buy generic methotrexate
buy amoxil paypal – cost valsartan cheap ipratropium
buy azithromycin 500mg online – buy generic bystolic 5mg buy bystolic 20mg for sale
buy clavulanate sale – https://atbioinfo.com/ ampicillin antibiotic online
purchase esomeprazole capsules – https://anexamate.com/ cost esomeprazole
medex medication – https://coumamide.com/ order hyzaar
order prednisone online – asthma deltasone 20mg without prescription
erection pills that work – fast ed to take site natural pills for erectile dysfunction
buy generic amoxil online – amoxil usa cheap amoxil online