ಬೆಂಗಳೂರು – ರಾಜ್ಯದ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಒಂದು ರೀತಿಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರದರ್ಶನದ ಭಾಗವಾದಂತಾಗಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ರಿಹರ್ಸಲ್ ಮಾದರಿಯಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ ,ಇದೀಗ ಫಲಿತಾಂಶದ ನಂತರ ಅದರ ಮುಂದುವರಿದ ಭಾಗವಾಗಿ ಗೋಚರಿಸ ತೊಡಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ BJP ನೇತೃತ್ವದ NDA ಮೈತ್ರಿಕೂಟವನ್ನು ಹಿಮ್ಮೆಟ್ಟಿಸಲು ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಇದೀಗ ಕರ್ನಾಟಕದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಿಜೆಪಿ ವಿರುದ್ಧದ ಪ್ರತಿಪಕ್ಷಗಳ ಒಗ್ಗೂಡುವಿಕೆಯ ಸಮಾರಂಭವಾಗಿ ಪರಿವರ್ತಿಸಿದೆ.
ಈ ಹಿಂದೆ ಯುಪಿಎ ಮೈತ್ರಿಕೂಟದ ಭಾಗವಾಗಿದ್ದ ಎಲ್ಲ ಮಿತ್ರ ಪಕ್ಷಗಳ ಮುಖಂಡರು ಕರ್ನಾಟಕದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹವಾಗಿದೆ.
ಬಿಜೆಪಿ ವಿರುದ್ಧ ಪ್ರಬಲ ಪ್ರತಿಪಕ್ಷಗಳ ಒಕ್ಕೂಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನೆರೆಯ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೊರತುಪಡಿಸಿ ಬಹುತೇಕ ಎಲ್ಲಾ ಪ್ರತಿಪಕ್ಷಗಳ ಮುಖಂಡರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಸೇರಿ ಹಲವಾರು ಘಟಾನುಘಟಿ ನಾಯಕರು ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ.
ನಿತೀಶ್ ಕುಮಾರ್– ಬಿಹಾರ ಮುಖ್ಯಮಂತ್ರಿ
ಹೇಮಂತ್ ಸೊರೇನ್– ಜಾರ್ಖಂಡ್ ಮುಖ್ಯಮಂತ್ರಿ
ತೇಜಸ್ವಿ ಯಾದವ್– ಬಿಹಾರದ ಉಪಮುಖ್ಯಮಂತ್ರಿ
ಶರದ್ ಪವಾರ್– ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ
ಉದ್ಧವ್ ಠಾಕ್ರೆ– ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ
ಅಖಿಲೇಶ್ ಯಾದವ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ
ಫಾರೂಕ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ
ಮೆಹಬೂಬಾ ಮುಫ್ತಿ– ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ
ಸೀತಾರಾಮ್ ಯೆಚೂರಿ– ಸಿಪಿಎಂನ ಪ್ರಧಾನ ಕಾರ್ಯದರ್ಶಿ
ಡಿ ರಾಜಾ– ಸಿಪಿಎಣ ಪ್ರಧಾನ ಕಾರ್ಯದರ್ಶಿ
ಲಲ್ಲನ್ ಸಿಂಗ್– ಜೆಡಿಯು ಸಂಸದ
ವೈಕೊ– ಎಂಡಿಎಂಕೆ ಸಂಸದ
ಎಂ.ಕೆ. ಪ್ರೇಮಚಂದ್ರನ್– ಆರ್‌ಎಸ್‌ಪಿ ಸಂಸದ
ಸಾದಿಕ್ ಅಲಿ ತಂಗಲ್– ಐಉಎಂಎಲ್ ಪಕ್ಷದ ಅಧ್ಯಕ್ಷ ಈ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ.