ಬ್ರಿಟನ್ನಿನ ರಾಣಿಯಾಗಿದ್ದ ಎರಡನೇ ಎಲಿಜಬೆತ್ ಅವರು ತಮ್ಮ 96ನೇ ವಯಸ್ಸಿನಲ್ಲಿ ಇಂದು ವಿಧಿವಶರಾದರು. ಕೆಲವು ವರ್ಷಗಳಿಂದ ಒಂದಷ್ಟು ಅರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇಂದು ಸ್ಕಾಟ್ಲೆಂಡಿನ ತಮ್ಮ ಬಾಲ್ಮೊರೋಲ್ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರ ಕೊನೆ ಗಳಿಗೆಯಲ್ಲಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಜೊತೆಗಿದ್ದರು ಎಂದು ತಿಳಿದುಬಂದಿದೆ.